ನೆಲಜಿ PACS ನ ನೂತನ ಕಚೇರಿ ಕಟ್ಟಡ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟನಾ ಸಮಾರಂಭ ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ ಎಂದು ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾದ ಚೀಯಕಪೂವಂಡ ಎಂ. ಅಪ್ಪಚ್ಚುರವರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾದ ಚೀಯಕಪೂವಂಡ ಎಂ. ಅಪ್ಪಚ್ಚುರವರು ವಹಿಸಲಿದ್ದಾರೆ. ವಾಣಿಜ್ಯ ಸಂಕೀರ್ಣ ಉದ್ಘಾಟನೆಯನ್ನು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ನೆರವೇರಿಸಲಿದ್ದಾರೆ. ಬ್ಯಾಂಕ್ ಕಛೇರಿ ಉದ್ಘಾಟನೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ. ಮಳಿಗೆ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ಬ್ಯಾಂಕ್ ಕೌಂಟರ್ ಉದ್ಘಾಟನೆಯನ್ನು ಕೊಡಗು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ, ಭದ್ರತಾ ಕೊಠಡಿ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಾಕಾರ ಯೂನಿಯನ್ ಅಧ್ಯಕ್ಷರಾದ ಅಪ್ಪಚೆಟ್ಟೊಳಂಡ ಕೆ. ಮನು ಮುತ್ತಪ್ಪ ಹಾಗೂ ಸಂಆಂಗಣ ಉದ್ಘಾಟನೆಯನ್ನು ಕೊಡಗು ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ ನೆರವೇರಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಹಿರಿಯ ಸಹಕಾರಿಗಳು ಹಾಗೂ ಮಾಜಿ ಕಾನೂನು ಸಚಿವರಾದ ಮೇರಿಯಂಡ ಸಿ. ನಾಣಯ್ಯ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮಾನ್ ಬಿ.ಕೆ. ಸಲೀಂ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂದಕಾರಾದ ಹೆಚ್.ಡಿ. ರವಿಕುಮಾರ್, ಕೊಡಗು ನಬಾರ್ಡ್‌ನ ಸಹಾಯಕ ಮಹಾ ಪ್ರಬಂದಕರಾದ ಪಿ.ವಿ.ಶ್ರೀನಿವಾಸ್, ಕೊಡಗು ನಬಾರ್ಡ್‌ನ ನಿವೃತ್ತ ಸಹಾಯಕ ಮಹಾ ಪ್ರಬಂದಕರಾದ ಮುಂಡಂಡ ಸಿ. ನಾಣಯ್ಯ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಚೀರೋಟಿರ ಎಂ. ಪೂಣಚ್ಚ, ಬೋಟ್ಟೋಳಂಡ ಎಂ. ಗಣಪತಿ, ಬೋಟ್ಟೋಳಂಡ ಡಿ. ಬಿದ್ದಯ್ಯ, ಬ್ದಜೇಟಿರ ಸಿ. ಕುಂಞಪ್ಪ, ಮಂಡೀರ ಎನ್. ಕಾಲಪ್ಪ, ಚೀರೋಟಿರ ಎಮ್. ತಮ್ಮಯ್ಯ, ನುಚ್ಚಿಮಣಿಯಂಡ ಎಂ. ಉತ್ತಪ್ಪ, ಮಂಡೀರ ಎಂ. ಪೊನ್ನಣ್ಣ, ಅಪ್ಪಚ್ಚಿರ ಎಂ.ಕಮಲ ಮುತ್ತಣ್ಣ ಇವರುಗಳನ್ನು ಸನ್ನಾನಿಸಲಾಗುತ್ತಿದೆ ಎಂದು ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾದ ಚೀಯಕಪೂವಂಡ ಎಂ. ಅಪ್ಪಚ್ಚುರವರು ತಿಳಿಸಿದ್ದಾರೆ.
Search Coorg Media: Coorg's Largest Online Media Network