Header Ads Widget

Responsive Advertisement

ಕುಶಾಲನಗರ ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿಗೆ ಮನವಿ; ಸಚಿವ ಎಸ್.ಟಿ.ಎಸ್


ಕುಶಾಲನಗರ ಸೈನಿಕ ಶಾಲೆಗೆ ಭೇಟಿ ನೀಡಿದ ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜು 2018ರಲ್ಲಿ ಹಾರಂಗಿ ಜಲಾಶಯದ ನೀರು ನುಗ್ಗಿ ಶಾಲೆಗೆ ಹಾನಿ ಬಗ್ಗೆ ವಿವರಣೆ ಪಡೆದ ಸಚಿವರು ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ರಾಕೇಶ್ ಸಿಂಗ್ ಅವರಿಗೆ ಕರೆ ಮಾಡಿ 5 ಕೋಟಿ ಪ್ರಸ್ತಾವನೆಗೆ ಸಚಿವ ಸೋಮಶೇಖರ್ ಮನವಿಗೆ ಪೂರಕವಾಗಿ ಸ್ಪಂದಿಸಿದ ರಾಕೇಶ್ ಸಿಂಗ್.

ಕುಶಾಲನಗರದ ಸೈನಿಕ ಶಾಲೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜು ಅವರು ಹಾಗೂ ಶಾಸಕರಾದ ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲರಾದ ಜಿ. ಕಣ್ಣನ್ ಅವರ ಜೊತೆ ಕೆಲ ಕಾಲ ಚರ್ಚೆ ನಡೆಸಿದರು.
2018ರಲ್ಲಿ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಶಾಲಾ ಆವರಣಕ್ಕೆ ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈ ಸಂಬಂಧ ಸರ್ಕಾರದ ಮಟ್ಟದಿಂದ ಯಾವುದಾದರೂ ಸಹಾಯವಾಗಬಹುದೇ” ಎಂದು ಪ್ರಾಂಶುಪಾಲರಾದ ಕಣ್ಣನ್ ಅವರು ಸಹಕಾರ ಸಚಿವರಾದ ಸೋಮಶೇಖರ್ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರಾದ ಎಸ್ ಟಿ ಎಸ್, ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ರಾಕೇಶ್ ಸಿಂಗ್ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು.
5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ :-ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ರಾಕೇಶ್ ಸಿಂಗ್ ಅವರ ಬಳಿ ಸೈನಿಕ ಶಾಲೆಗೆ ಆದ ತೊಂದರೆ ಬಗ್ಗೆ ಸಚಿವರಾದ ಸೋಮಶೇಖರ್ ಅವರು ವಿವರಣೆ ನೀಡುವ ಸಂದರ್ಭದಲ್ಲಿ, ಶಾಲೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ರಾಕೇಶ್ ಸಿಂಗ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಇದ್ದರು.