Header Ads Widget

Responsive Advertisement

ಗೋಣಿಮರೂರು: ಸುಗ್ಗಿ-ಹುಗ್ಗಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅಪ್ಪಚ್ಚು ರಂಜನ್ ಚಾಲನೆ


ಇತ್ತೀಚೆಗೆ ಗೋಣಿಮರೂರು ಗ್ರಾಮದಲ್ಲಿ ನಡೆದ ಸುಗ್ಗಿ-ಹುಗ್ಗಿ ಕಾರ್ಯಕ್ರಮಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಾಡು ನುಡಿ, ಕಲೆ ಸಂಸ್ಕøತಿ ಬಿಂಬಿಸುವ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಸದಾ ಇರುತ್ತವೆ ಎಂದು ಹೇಳಿದರು.
ಶಾಲಾ ಶಿಕ್ಷಣದ ಜೊತೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಕಲೆ, ಸಂಸ್ಕøತಿ, ಜಾನಪದ ಸೊಗಡನ್ನು ಉಳಿಸಿ ಬೆಳೆಸಬೇಕು. ಗ್ರಾಮೀಣ ಜಾನಪದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಶಾಸಕರು ಹೇಳಿದರು.
ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಅವರು ಮಾತನಾಡಿ ಗ್ರಾಮೀಣ ಭಾಗದ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.
ಶಿಕ್ಷಕ ಎಚ್.ಟಿ.ವಸಂತ ಅವರು ಮಾತನಾಡಿ ಗ್ರಾಮೀಣ ಜನರ ಕಲೆ ಮತ್ತು ಸಂಸ್ಕøತಿ ಉಳಿಸಬೇಕು. ಪೌರಾಣಿಕ ಕಲೆಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.
ಕೂಡಿಗೆ ಡಯಟ್ನ ಹಿರಿಯ ಉಪನ್ಯಾಸಕರಾದ ಸಿದ್ದೇಶ, ಜಿ.ಪಂ. ಸದಸ್ಯರಾದ ಎಚ್.ಆರ್.ಶ್ರೀನಿವಾಸ ಅವರು ಮಾತನಾಡಿದರು.
ಗ್ರಾ,ಪಂ. ಸದಸ್ಯರಾದ ಸಿದ್ದಲಿಂಗಪ್ಪ, ಎಸ್.ಡಿ.ಎಂ.ಸಿ.ಅಧ್ಯಕ್ಷ ಅನಿಲ್ ಕುಮಾರ್, ಗೌರಮ್ಮ, ಕಾಫಿ ಬೆಳೆಗಾರ ಧರ್ಮಪ್ಪ, ನಿವೃತ್ತ ಶಿಕ್ಷಕರಾದ ಮೋಹನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಬಿತ, ಯಶೋಧ ತಿಮ್ಮಯ್ಯ ನಿರ್ವಾಣ ಶೆಟ್ಟಿ, ತಿಮ್ಮಯ್ಯ ಸಿಆರ್ಪಿ ಚಿಣ್ಣಪ್ಪ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಈರಪ್ಪ, ಮಡಿವಾಳ ಸದಾಶಿವಪಲ್ಲೆದ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಅವರು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುನೀತ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜನೆ ಮಾಡಿದ್ದ ಶಿಕ್ಷಕ ರಾಜಪ್ಪನವರ ಪ್ರಶಂಸೆಯೊಂದಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ವಂದಿಸಿದರು. ಸಂಗೀತ, ನೃತ್ಯ ಕಾರ್ಯಕ್ರಮ ಜನಮನ ಸೂರೆಗೊಂಡಿತ್ತು.