Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ಹಿತರಕ್ಷಣಾ ವೇದಿಕೆಯ ವತಿಯಿಂದ 23 ವಾರ್ಡ್ ಗಳಲ್ಲಿ ಜನಸ್ಪಂದನ ಕಾರ್ಯಕ್ರಮ


ಮಡಿಕೇರಿ ನಗರದ  23 ವಾರ್ಡ್ ಗಳ ಸಮಸ್ಯೆಗಳ ಪರಿಶೀಲನೆಗೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ನಗರದ ಎಲ್ಲ  ವಾರ್ಡ್ ಗಳಿಗೆ ಭೇಟಿ ನೀಡಲು ನಿರ್ಧರಿಸಿದೆ.

ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ವತಿಯಿಂದ ಮಡಿಕೇರಿ ನಗರದ 23 ವಾರ್ಡ್ ಗಳಿಗೆ ಭೇಟಿ ನೀಡಲಾಗುವುದು ಮಡಿಕೇರಿ ನಗರದ ಎಲ್ಲ ವಾರ್ಡ್ ಗಳಿಗೆ ವೇದಿಕೆಯ ಸದಸ್ಯರು ಭೇಟಿ ನೀಡಿ ಅಲ್ಲಿನ ನಗರ ನಿವಾಸಿಗಳಲ್ಲಿ ಚರ್ಚಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪಟ್ಟಿ ಮಾಡಲಾಗುವುದು.

ನಗರದ ಜ್ವಲಂತ  ಸಮಸ್ಯೆಗಳನ್ನು ಮಡಿಕೇರಿ ನಗರದ ನಿವಾಸಿಗಳು ವೇದಿಕೆ ಬಳಿ ಹಂಚಿಕೊಳ್ಳಬಹುದು ವೇದಿಕೆಯು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಪ್ರಯತ್ನ ಮಾಡುತೇವೆ ಹಾಗೆ ಮಡಿಕೇರಿ ನಗರದ ಎಲ್ಲಾ ನಿವಾಸಿಗಳು ತಮ್ಮ ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ವೇದಿಕೆ ಬಳಿ ಹಂಚಿಕೊಳ್ಳಬಹುದು. ಮಡಿಕೇರಿ ನಗರದಲ್ಲಿ ವಾರ್ಡ್ ಪ್ರತಿನಿಧಿಗಳು ಇಲ್ಲದಿದ್ದರೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ  ನಿಮ್ಮ ಜೊತೆಯಲ್ಲಿದೆ ಎಲ್ಲಾ ನಗರದ ನಾಗರಿಕರು ಈ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ ಎಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ರವಿ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.