Header Ads Widget

ಸರ್ಚ್ ಕೂರ್ಗ್ ಮೀಡಿಯ

ಯುವಸ್ಪಂದನ ಫೌಂಡೇಶನ್ ಹಾಕತ್ತೂರು ಇವರ ವತಿಯಿಂದ ಮುಕ್ತ ಕ್ರಿಕೆಟ್ ಪಂದ್ಯಾವಳಿಗೆ ಆಹ್ವಾನ


ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದ ಉತ್ಸಾಹಿ ಯುವಕರ ತಂಡವು ಸಮಾಜಕ್ಕೆ ತಮ್ಮಿಂದಾಗುವ ನೆರವನ್ನು ನೀಡುವ ಸಲುವಾಗಿ ಯುವಸ್ಪಂದನ ಎಂಬ ಹೆಸರಿನಲ್ಲಿ ಸಾಮಾಜಿಕ ಚಟುವಟಿಕೆ ನಡೆಸುವ ದೃಷ್ಟಿಯಿಂದ ಯುವ ಸ್ಪಂದನ ಫೌಂಡೇಶನ್ ಆರಂಭಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ರಕ್ತದಾನ ಮತ್ತು ಅಗತ್ಯವಿರುವ,  ವಿದ್ಯಾರ್ಥಿಗಳ ಸಲುವಾಗಿ ಶಾಲಾ ಶುಲ್ಕ. ಅಶಕ್ತರಿಗೆ ಆರೋಗ್ಯ ಸೇವೆ ನೀಡುವ ಸಲುವಾಗಿ ಪ್ರಾರಂಭವಾದ ಈ ಸಂಸ್ಥೆ,  ಗ್ರಾಮದ ಸೇವಾ ಮನೋಭಾವನೆಯಿಂದ ಕೂಡಿದ ಯುವಕರ ತಂಡವಾಗಿದೆ. ಈ ಯುವಕರ ತಂಡವು ಮೂವತ್ತಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಬೆಂಗಳೂರು, ಕೊಡಗು, ಮಂಗಳೂರು ಮತ್ತು ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಕೂಡಿರುವ ಸದಸ್ಯರುಗಳಿಂದ ಪ್ರಾರಂಭವಾಗಿರುವಂತದ್ದು. 

"ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ" ಎಂದು ಸೇವಾ ಮನೋಭಾವನೆಯ ಉದ್ದೇಶದಿಂದ ರಚನೆಯಾದ ಯುವ ಸ್ಪಂದನ ಫೌಂಡೇಶನ್, ಈಗಾಗಲೇ ನಾಲ್ಕು ತಿಂಗಳು ಕಳೆದಿದ್ದು ಗ್ರಾಮದಲ್ಲಿ ಹಲವು ಸಾಮಾಜಿಕ ಕಾರ್ಯವನ್ನು ಮಾಡಲು ಮುಂದಾಗಿದೆ. ಮತ್ತು ಸಮಾಜಕ್ಕೆ ತಮ್ಮಿಂದ ಸೇವೆ ಮಾಡುವ  ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ತಮ್ಮ ಸಮಯ ಮತ್ತು ತಮ್ಮ ದುಡಿಮೆಯ ಅಲ್ಪ ಭಾಗವನ್ನು ಸಮರ್ಪಣೆ ಮಾಡುತ್ತಿದ್ದಾರೆ. 

ಈ ಸಂದರ್ಭದಲ್ಲಿ ಪ್ರತಿ ತಿಂಗಳ ಒಂದೊಂದು ಕಾರ್ಯಕ್ರಮದಂತೆ ಈ ಬಾರಿ ಕ್ರೀಡಾಕೂಟವನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಕ್ರೀಡಾಕೂಟದ ಉದ್ದೇಶವು ಕೂಡ ಯುವಕರನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸುವಂತೆ ಮಾಡುವುದು ಮತ್ತು ಇದರಿಂದ ಬರುವ ಅಲ್ಪ ಲಾಭವನ್ನು ಸಮಾಜಕ್ಕೆ ಪೂರ್ಣವಾಗಿ ವಿನಿಯೋಗಿಸಲು ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಆದುದರಿಂದ ಸಹೃದಯ ಸಮಾಜ ಬಂಧುಗಳು ತಮ್ಮಿಂದಾಗುವ ತನು-ಮನ-ಧನದ ಸಹಾಯವನ್ನು ನೀಡಿ ಈ ಒಂದು ಅಳಿಲು ಸೇವೆ ಮಾಡಲು  ಸಹಕಾರ ನೀಡಬೇಕೆಂದು ಯುವ ಸ್ಪಂದನ ಫೌಂಡೇಶನ್  ಪದಾಧಿಕಾರಿಗಳು ಈ ಪತ್ರಿಕಾ  ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.


ಪಂದ್ಯಾವಳಿಯ ಮಾಹಿತಿ:

ಯುವ ಸ್ಪಂದನ ಕ್ರಿಕೆಟರ್ಸ್ ಹಾಕತ್ತೂರು

ಪ್ರಥಮ ವರ್ಷದ ಸೂಪರ್ ಸೆವೆನ್ ಕ್ರಿಕೆಟ್  ಪಂದ್ಯಾವಳಿ ಫೆಬ್ರವರಿ 27 28 ಮಾರ್ಚ್ 1

ಸ್ಥಳ: ಮುತ್ತಾರ್ಮೂಡಿ ಗದ್ದೆ, ಹಾಕತೂರು.

ಪ್ರಥಮ ಬಹುಮಾನ 25,000

ದ್ವಿತೀಯ ಬಹುಮಾನ 15000

ತೃತೀಯ ಬಹುಮಾನ ಆಕರ್ಷಕ ಟ್ರೋಪಿ

500 ಗೂಗಲ್ ಪೇ ಮಾಡಿ ಸ್ಕ್ರೀನ್ ಶೋಟ್ ಕಳಿಸಿ 26/02/2021ರ ಮಧ್ಯಾಹ್ನದ ಒಳಗೆ ತಂಡ ಖಾತ್ರಿಪಡಿಸಿಕೊಳ್ಳುವುದು

Google pay numbr:

ಬಾಲಕೃಷ್ಣ- 9901327236

ಮಹೇಶ್ - 9632606915

ಶಿವರಾಜ್ - 9964791345


Search Coorg Media

Coorg's Largest Online Media Network