Header Ads Widget

Responsive Advertisement

ಚೆಟ್ಟಳ್ಳಿ-ಬಕ್ಕ-ಹೊಸ್ಕೇರಿ ಲಿಂಕ್ ರಸ್ತೆ ಡಾಂಬರೀಕರಣಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ


ಚೆಟ್ಟಳ್ಳಿ ಬಕ್ಕ ಹೊಸ್ಕೇರಿ ಲಿಂಕ್ ರಸ್ತೆಯು 1996 ರಲ್ಲಿ ಜೀವಿಜಯ ಎಂ. ಎಲ್. ಎ. ಆಗಿದ್ದ ಸಂದರ್ಭ, ಈ ಮೇಲಿನ ರಸ್ತೆಯ ಸಾರ್ವಜನಿಕ ಉಪಯೋಗವನ್ನು ಮನಗಂಡು, ಈ ರಸ್ತೆಯನ್ನು ಚೆಟ್ಟಳ್ಳಿ 11 ಮೈಲಿನಿಂದ 6 ಕಿಲೋಮೀಟರ್  ಬಕ್ಕ, ಹೊಸ್ಕೇರಿಯವರೆಗೆ  ಡಾಂಬರೀಕರಣಗುಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದರು. 

ಆದರೆ ಅದು 2004ನೇ ಇಸವಿಗೆ ಗಬ್ಬೆದ್ದುಹೋಗಿದ್ದು, ಹಲವಾರು ಜನ ಈ ರಸ್ತೆಯನ್ನು ಬಳಸುತಿದ್ದವರು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದ್ಯಾವುದಕ್ಕೆ ಕ್ಯಾರೇ ಅನ್ನದ ಅಂದಿನ ಜಿಲ್ಲಾಡಳಿತದ ನಿರ್ಲಕ್ಷ್ಯದೊರಣೆ ಇಂದಿನವರೆಗೂ ಈ ರಸ್ತೆಯಮೇಲೆ ಮುಂದುವರಿದಿದ್ದು ವಿಪರ್ಯಾಸವೇ ಸರಿ. 

ಇದನ್ನು ಮನಗಂಡ ಅಲ್ಲಿನ ಗ್ರಾಮಸ್ಥರಾದ ನಿವೃತ್ತ ಅಭಿಯಂತರರಾದ ಬಿದ್ದಂಡ ಮಾದಯ್ಯನವರು 2009ರಿಂದ ಅಲ್ಲಿನ ಕೆಲವು ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಮತ್ತು ರಸ್ತೆಗೆ ಸಂಬಂಧಪಟ್ಟ ಹಲವು ಅಧಿಕಾರಿಗಳನ್ನು ಇಲಾಖೆಗಳನ್ನು ಬೇಟಿಮಾಡಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅದು ಏನು ಪ್ರಯೋಜವಾಗಿಲ್ಲ. 


ಅದನ್ನು ಮನಗಂಡ ಚೆಟ್ಟಳ್ಳಿಯ ಬೆಳೆಗಾರರು ಹಾಗು ಪತ್ರಕರ್ತರಾದ ಪುತ್ತರಿರ ಪಪ್ಪುತಿಮ್ಮಯ ನವರ ನೇತೃತ್ವದಲ್ಲಿ, ಅಲ್ಲಿನ ಗ್ರಾಮಸ್ಥ ಮುಖಂಡರು, ಮತ್ತು ರಸ್ತೆಯನ್ನು ದಿನನಿತ್ಯ ಬಳಸುತ್ತಿರುವ, ವೈದ್ಯರು, ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು ಹಲವು ಉದ್ಯೋಗಿಗಳು ತೋಟ ಮಾಲೀಕರುಗಳು, ಕಾರ್ಮಿಕರ ಸಮ್ಮುಖದಲ್ಲಿ ಇಂದು ಸಾಂಕೇತಿಕ ರಸ್ತೆತಡೆಯನ್ನು ಮಾಡಿ, ಜಿಲ್ಲಾಧಿಕಾರಿಗಳಿಗೆ, ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ  ಕೊನೆಯದಾಗಿ ಅರ್ಜಿಯನ್ನು ಸಲ್ಲಿಸುವಂತೆ ತೀರ್ಮಾನಿಸಲಾಯಿತು. ಇದ್ದಕೆ ಈ ಮೇಲಿನ ಇಲಾಖೆಗಳು ಇಂದಿನಿಂದ ಹದಿನೈದು ದಿವಸದೊಳಗೆ ಸ್ಪಂದಿಸದಿದ್ದರೆ, ನೇರವಾಗಿ ಗ್ರಾಮಸ್ಥರೆಲ್ಲ ಮಡಿಕೇರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದರು. 

ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯರಾದ, ಬಿದ್ದಂಡ ಮಾದಯ್ಯ,ಹೆಚ್. ಎಸ್. ತಿಮ್ಮಪ್ಪಯ್ಯ  ಬಟ್ಟೀರಾ ಕಟ್ಟಿ ಕಾವೇರಪ್ಪ, ಬಟ್ಟೀರಾ ಬೋಪಯ್ಯ, ಬಟ್ಟೀರಾ ಪೂಣಚ್ಚ, ಕುಶಾಲಪ್ಪ, ಪಾಪು,  ಪೆರಿಯನ ಘನಶಂ, ಪೆರಿಯನ ನವೀನ್, ಪರ್ಲಕೋಟಿ ದಯಕುಮಾರ್, ನಾಗರಾಜ್, ಪ್ರವೀಣ್, ತಿರುಪತಿ, ಹೆಚ್. ಆರ್. ನಾಗೇಶ್, ಪುತ್ತರಿರ ಶಿವು ನಂಜಪ್ಪ, ಬಟ್ಟೀರಾ ಗಿರೀಶ್ ಬಿದ್ದಪ್ಪ, ಹಲವಾರು ಮಂದಿ ಪಾಲ್ಗೊಂಡಿದ್ದರು.

ಸುದ್ದಿ-ಚಿತ್ರ: ಪುತ್ತರೀರ  ಪಪ್ಪು ತಿಮ್ಮಯ್ಯ