Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂವೇದನ ದಿನದ ಅಂಗವಾಗಿ ಬೃಹತ್‌ ರಕ್ತದಾನ ಶಿಬಿರ

ಅಂತರರಾಷ್ಟ್ರೀಯ ರಕ್ತ ಮತ್ತು ಪ್ಲಾಸ್ಮಾ ದಾನ ಜಾಗೃತಿ ಅಭಿಯಾನ



ಕರೋನಾ ಅವಧಿಯಲ್ಲಿ, ಸಾಮಾಜಿಕ ಅಂತರ ಮತ್ತು ಸೋಂಕಿನ ಭಯದಿಂದಾಗಿ ಪರಿಸ್ಥಿತಿ ಇನ್ನಷ್ಟು ನಿರ್ಣಾಯಕವಾಗುತ್ತಿದ್ದು, ರಕ್ತವನ್ನು ದಾನ ಮಾಡಲು ಕಡಿಮೆ ಸಂಖ್ಯೆಯ ದಾನಿಗಳು ಬರುತ್ತಿದ್ದಾರೆ.ಇದರ ಪರಿಣಾಮವಾಗಿ ಸಕಾಲದಲ್ಲಿ ರಕ್ತದ ಅವಶ್ಯಕತೆ ದೊರಕದಿದ್ದಾಗ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಲಾಗುತ್ತಿದೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಮತ್ತು ಈ ದಿಕ್ಕಿನಲ್ಲಿ ಸಾಮೂಹಿಕ ಪ್ರಯತ್ನಗಳಿಂದ ಇಡೀ ಸನ್ನಿವೇಶವನ್ನು ಬದಲಾಯಿಸಬಹುದು ಮತ್ತು ದೇಶದಲ್ಲಿ ರಕ್ತದಾನದ ಕೊರತೆಯನ್ನು ಶಾಶ್ವತವಾಗಿ ನಿವಾರಿಸಬಹುದು. 


ಈ ಚಿಂತನೆಯೊಂದಿಗೆ, 2021 ರ ಮಾರ್ಚ್ 23 ರಂದು ಶಹೀದ್ ಇ ಅಜಮ್ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ 90 ನೇ ಹುತಾತ್ಮ ದಿನವಾದ, ಸಂವೇದನ ದಿನದ ಅಂಗವಾಗಿ ಬೃಹತ್‌ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಅಂತರರಾಷ್ಟ್ರೀಯ ರಕ್ತ ಮತ್ತು ಪ್ಲಾಸ್ಮಾ ದಾನ ಜಾಗೃತಿ ಅಭಿಯಾನದ ರಾಷ್ಟ್ರವ್ಯಾಪಿ ರಕ್ತದಾನ ಶಿಬಿರದ ಚಾಲನೆಯನ್ನು ನಡೆಸಲು “ನ್ಯಾಷನಲ್‌ ಇಂಟಿಗ್ರೇಟಡ್‌ ಫೋರಂ ಆಫ್‌ ಆರ್‌ಟಿಸ್ಟ್‌ ಆಂಡ್‌ ಆಕ್ಟಿವಿಸ್ಟ್ಸ್”(NIFAA) ಸಂಸ್ಥೆಯಿಂದ ನಡೆಸಲಾಗುತ್ತಿದೆ.


( ಡಾ. ರಾಜಾರಾಮ್ )
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನೀಮಾ(NIMA) ಕೊಡಗು ಜಿಲ್ಲಾಧ್ಯಕ್ಷರಾದ ಡಾ. ರಾಜಾರಾಮ್‌ರವರು  ನೀಮಾ ಕೊಡಗು, ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿ ಹಾಗೂ ಮಡಿಕೇರಿ ನಗರ ಬಿ.ಜೆ.ಪಿ. ಯುವ ಮೋರ್ಚಾ ಸಯೋಗದಲ್ಲಿ ದಿನಾಂಕ 23-03-2021ರ ಬೆಳ್ಳಗೆ 9ಗಂಟೆಯಿಂದ ಮಧ್ಯಾಹ್ನ 1ಗಂಟೆಯವರಗೆ  ಮಡಿಕೇರಿ ನಗರದ ಬಾಲಭವನದಲ್ಲಿ ಬೃಹತ್‌ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.


ಆದ್ದರಿಂದ ಶಹೀದ್ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ನೆನಪಿಗಾಗಿ ಆಯೋಜಿಸಲಿರುವ ಈ ಮೆಗಾ ರಕ್ತದಾನ ಅಭಿಯಾನದಲ್ಲಿ ಆರೋಗ್ಯವಂತ ಯುವ ಸಮುದಾಯವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಕೋರಿಕೊಂಡಿದ್ದಾರೆ. ಹಾಗೇಯೇ ಸರ್ವರೂ ಈ ಮೆಗಾ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಳುವಂತೆ  ವಿನಂತಿಸಿಕೊಂಡಿರುವ ಡಾ. ರಾಜಾರಾಮ್‌ರವರು, ಈ ಅಭಿಯಾನವನ್ನು ಯಶಸ್ಸುಗೊಳಿಸಲು ಸರ್ವರ ಸಹಕಾರವನ್ನು ಕೋರಿದ್ದಾರೆ.


Search Coorg Media

Coorg's Largest Online Media Network