Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನೆ


ಇತ್ತೀಚೆಗೆ ನಗರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಕಾವೇರಿ ಪದವಿ ಪೂರ್ವ ಕಾಲೇಜು, ಭಾಗಮಂಡಲ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಅಂತೋಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಸ್ಕೇಟ್ ಬಾಲ್ ಪಂದ್ಯಾಟದಲ್ಲಿ ಜೇಮ್ಸ್ ಕೆ.ಜೆ., ಕಬಡ್ಡಿಯಲ್ಲಿ ತನ್ವಿ ಪೋನ್ನಮ್ಮ ಕೆ.ಎಲ್. ಹಾಗೂ ಚಕ್ರ ಎಸೆತ ಮತ್ತು ಜಾವಲಿನ್ ಥ್ರೋ ವಿನಲ್ಲಿ ಕೆ.ಎಲ್.ಪೊನ್ನಪ್ಪ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಈ ಮೂವರು ವಿದ್ಯಾರ್ಥಿಗಳನ್ನು ಸಂತ ಅಂತೋಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ನಿರ್ವಹಣಾ ಸಿಬ್ಬಂದಿಗಳು, ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಫಾ.ಡೇವಿಡ್ ಸಗಾಯ್ ರಾಜ್, ಪ್ರಾಂಶುಪಾಲರು ಚಂದ್ರಿಕಾ ಎಸ್.ಎಂ., ಪಿ.ಡಿ. ಶಿಕ್ಷಕ ಮಹೇಶ್ ಉತ್ತಪ್ಪ ಹಾಗೂ ಉಪನ್ಯಾಸಕರು ಅಭಿನಂದಿಸಿ ಶುಭ ಹಾರೈಸಿದರು.

Search Coorg Media

Coorg's Largest Online Media Network