ಭಾಗಮಂಡಲ ಗ್ರಾಮ ಪಂಚಾಯತಿ ವತಿಯಿಂದ ದಿನಾಂಕ :26-03-2021 ರಂದು ಕೋವಿಡ್-19ರ 2 ನೇ ಅಲೆ ವ್ಯಾಪಾಕ ಹರಡತ್ತಿರುವುದರಿಂದ ನಿಯಂತ್ರಣ ಸಂಬಂಧ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯನ್ನು ಕರೆಯಲಾಯಿತು.
ಕೋವಿಡ್-19ರ 2 ನೇ ಅಲೆಯ ಪರಿಣಾಮಕಾರಿ ನಿಯಂತ್ರಣ ಸಂಬಂಧ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವ ಸಲುವಾಗಿ ಭಾಗಮಂಡಲ ಮಾರುಕಟ್ಟೆಯಿಂದ ಕರಿಕೆ ದ್ವಾರದ ವರಗೆ ಪಂಚಾಯತಿಯಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಧ್ವನಿ ವರ್ಧಕದ ಮೂಲಕ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕಡ್ಡಾವಾಗಿ ಲಸಿಕೆ ಪಡೆದು ಕೊಳ್ಳುವಂತೆಯೂ ಮತ್ತು ಕಡ್ಡಾವಾಗಿ ಮಾಸ್ಕ್ ಧರಿಸುವುಂತೆಯೂ ಜಾಥದ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭ ಭಾಗಮಂಡಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿ.ಡಿ.ಓ. ಪಂಚಾಯಿತಿ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Search Coorg Media
Coorg's Largest Online Media Network