Header Ads Widget

ಸರ್ಚ್ ಕೂರ್ಗ್ ಮೀಡಿಯ

ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಪದ್ಮನಾಭ ಆಯ್ಕೆ


ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಪದ್ಮನಾಭ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಸ್.  ಮನೋಹರ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಇ. ಜಯೇಂದ್ರ, ಡಿ.ಎ. ಕೃಷ್ಣಕುಮಾರ್, ಎಸ್.ಜೆ. ಹೇಮಚಂದ್ರ,  ಹೆಚ್.ಎಸ್. ಚಂದ್ರಶೇಖರ್,  ಹೆಚ್.ಇ. ಪವನ್ ಸಾಗರ್ ಮತ್ತು ಹೆಚ್.ಇ. ವಿಠಲ ಇವರುಗಳು ಆಯ್ಕೆಯಾಗಿದ್ದಾರೆ. 

ಈ ಪೈಕಿ ಉಪಾಧ್ಯಕ್ಷರನ್ನು ಹೊರತಪಡಿಸಿ ಇನ್ನುಳಿದಂತೆ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಎಸ್. ಮನೋಹರ್ ಅವರು 34 ಮತಗಳನ್ನು ಪಡೆದು ಜಯಗಳಿಸಿದರು. ಇವರ ಪ್ರತಿಸ್ಪರ್ಧಿ  ಹೆಚ್.ಆರ್. ಪವಿತ್ರರವರು 22 ಮತಗಳನ್ನು ಗಳಿಸಿದರು. ಚುನಾವಣಾಧಿಕಾರಿಯಾಗಿ ಹಿರಿಯ ವಕೀಲರಾದ ಗಣಪತಿ ಅವರು ಕಾರ್ಯ ನಿರ್ವಹಿಸಿದರು.


Search Coorg Media

Coorg's Largest Online Media Network