Header Ads Widget

ಸರ್ಚ್ ಕೂರ್ಗ್ ಮೀಡಿಯ

2020 ರ ಕೊವಿಡ್ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯ, ವಿನೂತನ‌ ಕಾರ್ಯಕ್ರಮಗಳು ಈಗ ನೆನಪಾಗುತ್ತಿದೆ

2020 ರ ಕೊವಿಡ್ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯ, ವಿನೂತನ‌ ಕಾರ್ಯಕ್ರಮಗಳು ಈಗ ನೆನಪಾಗುತ್ತಿದೆ.


ಅದು ಕೊವಿಡ್ ಮೊದಲ ಅಲೆ. ಜಿಲ್ಲೆಯಲ್ಲಿ‌ ಒಂದೇ ಪ್ರಕರಣವಿತ್ತು. ಅಲ್ಲಿಂದ ತಿಂಗಳುಗಳ ಕಾಲ ಯಾವುದೇ ಪ್ರಕರಣ ಬಾರದಂತೆ ಕ್ರಮ ಕೈಗೊಳ್ಳಲಾಗಿತ್ತು. ಜನತಾ ಕರ್ಫ್ಯೂ, ಲಾಕ್ ಡೌನ್ , ಸೀಲ್ ಡೌನ್ ಸಂದರ್ಭ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಸೊಂಕು ಪತ್ತೆಯಾದ ಕೂಡಲೇ ಸೊಂಕಿತರಿಗೆ ಅಗತ್ಯವಿರುವ ಚಿಕಿತ್ಸೆ, ಸಂಪರ್ಕದಲ್ಲಿದ್ದವರ ಪರೀಕ್ಷೆ ಮಾಡಲಾಗುತ್ತಿತ್ತು.
ಮುಖ್ಯವಾಗಿ ಸೀಲ್ ಡೌನ್ ವ್ಯಾಪ್ತಿಯಲ್ಲಿ, ಕೂಲಿ ಕಾರ್ಮಿಕರಿಗೆ ಅಗತ್ಯ ಕಿಟ್ ನೀಡಲಾಗುತ್ತಿತ್ತು. ಅದು ಸರಕಾರದಿಂದಲ್ಲ. ಅಂದಿನ ಎಸ್.ಪಿ ಸುಮನ್ ಡಿ ಪಣ್ಣೇಕರ್ ಹಾಗೂ ಜಿಲ್ಲಾಧಿಕಾರಿ ಕಣ್ಮನಿ ಅವರು ಸೇರಿ *ಹಸಿದವರಿಗೆ ದಣಿವು ಪೆಟ್ಟಿಗೆ* ಎಂಬ ಕಾರ್ಯಕ್ರಮ ರೂಪಿಸಿ, ದಾನಿಗಳಿಂದ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ, ಬಡವರಿಗೆ ನೀಡಿದ್ದರು. ಸರಕಾರದ ಕಿಟ್ ಗೆ ಕಾಯದೇ ಸ್ವ ನಿರ್ಧಾರ ತೆಗೆದು ಸಮಸ್ಯೆಯಲ್ಲಿದ್ದವರಿಗೆ ಸ್ಪಂದಿಸಿ ಜನಮನ್ನಣೆ ಗಳಿಸಿದ್ದರು.
ಲಾಕ್ ಡೌನ್ ಸಂದರ್ಭ ಜನರಿಗೆ ತೊಂದರೆ ಆಗಬಾರದೆಂದು ಸಾಮಾಗ್ರಿ ಖರೀದಿಯ ಒಂದು ದಿನ‌ ಮುಂಚೇಯೇ ತರಕಾರಿ, ಹಣ್ಣು ಹಾಗೂ ಮಾಂಸದ ದರಪಟ್ಟಿ ಹಾಕುತ್ತಿದ್ದರಲ್ಲದೇ, ಗ್ರಾಮೀಣ ಭಾಗಕ್ಕೆ ವಾಹನಗಳಲ್ಲಿ ತರಕಾರಿ, ಹಣ್ಣುಗಳ ವಾಹನ ನಿಗದಿಗೊಳಿಸಿ ಸುಲಭವಾಗಿ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದಾಗಿ ಜನರು ಪಟ್ಟಣಕ್ಕೆ ಬರುವುದು ಒಂದಷ್ಟು ಕಡಿಮೆಯಾಗಿತ್ತು.
ಜಿಲ್ಲಾಧಿಕಾರಿ ಅನೀಸ್ ಅವರು, ಸಮಯ ನಿಗದಿಗೊಳಿಸಿ, ಫೇಸ್ ಬುಕ್ ಲೈವ್ ನಲ್ಲಿ ಬರುತ್ತಿದ್ದರು. ಕೊವಿಡ್ ಮಾಹಿತಿ, ಜಿಲ್ಲೆಯ ಬೆಳವಣಿಗೆ, ಸಮಸ್ಯೆಗಳಿಗೆ ಉತ್ತರವನ್ನು ಸ್ವತಃ ಜಿಲ್ಲಾಧಿಕಾರಿಗಳೇ ನೀಡುತ್ತಿದ್ದರು. ಹಾಗಾಗಿ ಜನರಲ್ಲಿ ಯಾವುದೇ ಗೊಂದಲಗಳು ಇರುತ್ತಿರಲಿಲ್ಲ.
ನೂತನ‌ ಜಿಲ್ಲಾಧಿಕಾರಿಗಳು‌ ಕೂಡ ಕೊವಿಡ್ ಎರಡನೇ ಅಲೆಯನ್ನು ಪ್ರತಿರೋಧಿಸಲು ಉತ್ತಮವಾಗಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೊಂಕು ವ್ಯಾಪಕವಾಗಿ ಹಬ್ಬರುವ ಕಾರಣ ಕಳೆದ ವರ್ಷ ನೀಡಿದ ರೀತಿಯ ಚಿಕಿತ್ಸೆ ಸಾಧ್ಯವಾಗಿರಲಿಕ್ಕಿಲ್ಲ. ಆದರೇ ಇತ್ತೀಚೆಗಿನ ಜಿಲ್ಲಾಡಳಿತದ ಗೊಂದಲದ ಹೇಳಿಕೆಯಿಂದ ಜನರಲ್ಲಿ ಸ್ಪಷ್ಟತೆ ಇಲ್ಲ. ಈಗಲೂ ಕೂಡ ಜನರು ಗೊಂದಲದಲ್ಲಿದ್ದಾರೆ. ಸೊಮವಾರ ಅಥವಾ ಮಂಗಳವಾರ ? ಯಾವ ದಿನ ಖರೀದಿಗೆ ಅವಕಾಶ ಎಂದು. ಜಿಲ್ಲಾಡಳಿತ ಮತ್ತಷ್ಟು ಚುರುಕಾಗಬೇಕಿದೆ. ಜನರ ಮನ ಗೆಲ್ಲುವ ಕಾರ್ಯ ಇನ್ನೂ ಆಗಬೇಕಿದೆ. ಮನೆ ಮನೆಗೆ ಹಣ್ಣು, ತರಕಾರಿ, ದಿನಸಿ ಲಭ್ಯವಾದರೇ ಶೇ 50 ರಷ್ಟು ಮಂದಿ ಪಟ್ಟಣಕ್ಕೆ ಬರುವುದಿಲ್ಲ.
ಹಾಗೇಯೇ ಕಂಟೋನ್ಮೆಂಟ್ ವಲಯ ಎಂದು ಘೋಷಿಸುವ ವ್ಯಾಪ್ತಿಯ ಜನರ ಸಮಸ್ಯೆಯನ್ನೂ‌ ಕೂಡ ಬಗೆಹರಿಸಬೇಕಿದೆ. ಕಂಟೋನ್ಮೆಂಟ್ ವಲಯದಿಂದ 14 ದಿನಗ ಜನರು ಹೊರಗೆ ಹೋಗಲು ಸಾಧ್ಯವಿಲ್ಲ. ಈ ಸಂದರ್ಭ ಅವರಿಗೆ ಅಗತ್ಯ ಸಾಮಾಗ್ರಿಗಳ ವ್ಯವಸ್ಥೆ ಆಗಬೇಕು. ಪ್ರಸ್ತುತ ದಾನಿಗಳು, ಸಂಘ ಸಂಸ್ಥೆಗಳು ಈ ಕೆಲಸ ಮಾಡುತ್ತಿದೆ. ಅವರಿಗೂ ಜಿಲ್ಲಾಡಳಿತ ಪ್ರೂತ್ಸಾಹ ನೀಡಬೇಕಾಗಿದೆ.
ಕೊವಿಡ್ ವಿಚಾರಕ್ಕೆ ಪ್ರತಿ ಗ್ರಾ.ಪಂ ಗಳಲ್ಲಿ ಗ್ರಾಮ ಪಂಚಾಯತಿ ನಿಧಿಯಿಂದ ಆದರೂ ಒಂದಷ್ಟು ಹಣವನ್ನು ಕಾಯ್ದಿರಿಸಿ, ಜನರ ಕಷ್ಟಕ್ಕೆ ಸ್ಪಂಧಿಸುವಂತಾಗಬೇಕು‌ . ಪ್ರಸ್ತುತ ಗ್ರಾ.ಪಂ ಗಳಲ್ಲಿ ಕೊವಿಡ್ ಸಮಸ್ಯೆಗೆ ಯಾವುದೇ ಹಣ ಇಲ್ಲ ಅಂತಾರೆ.
ಜಿಲ್ಲಾಡಳಿತ ಇನ್ನಷ್ಟು ಪರಿಣಾಮಕಾರಿ ಯೋಜನೆಯೊಂದಿಗೆ ಜನರಿಗೆ ಹತ್ತಿರವಾಗಬೇಕಿದೆ. ಜನರಲ್ಲಿ‌ ನಿರೀಕ್ಷೆಯೂ ಇದೆ. ಕಾಯೋಣ.

ಲೇಖಕರು: ರೆಜಿತ್ ಕುಮಾರ್ ಗುಹ್ಯ



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network