Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂಬಾರ ಬೆಳೆ ಜೂನ್-ಜುಲೈ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯಗಳು ಬಗ್ಗೆ ಮಾಹಿತಿ

ಸಂಬಾರ ಬೆಳೆ ಜೂನ್-ಜುಲೈ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯಗಳು ಬಗ್ಗೆ ಮಾಹಿತಿ 

ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ ಮತ್ತು ಸುಸ್ಥಿರತೆ ಸಾಧಿಸಲು ಆಯಾಯ ಪ್ರದೇಶದ ಹವಾಗುಣ ಆಧಾರದ ಮೇಲೆ ಕೃಷಿ ಕಾರ್ಯಾಚರಣೆಗಳ ಸಮಯೋಚಿತ ಯೋಜನೆ ಮತ್ತು ಅವುಗಳ ಅಳವಡಿಕೆಯು ಹೆಚ್ಚು ಅವಶ್ಯಕವಾಗಿದೆ. ಸಂಬಾರ ಬೆಳೆಗಳಲ್ಲಿ ಜೂನ್-ಜುಲೈ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯಗಳ ಬಗ್ಗೆ ಅಪ್ಪಂಗಳ ಗ್ರಾಮದಲ್ಲಿರುವ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. 


ಏಲಕ್ಕಿ ನರ್ಸರಿ :-
ಸಸಿ ಕೊಳೆಯುವ ರೋಗವನ್ನು ತಡೆಗಟ್ಟಲು ನೀರು ಬಸಿದು ಹೋಗುವ ಹಾಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಕಿಕ್ಕಿರಿದು ಬೆಳೆದಿರುವ ಸಸಿಗಳನ್ನು ತೆಳುವಾಗಿಸುವುದು. ಸಸಿ ಮಡಿಗಳಗೆ ಶೇ.0.25 ಕಾಪರ್ ಆಕ್ಸಿ ಕ್ಲೋರೈಡ್ ಸುರಿಯಬೇಕು ಬದಲಾಗಿ ಟ್ರೈಕೋಡರ್ಮ ಅಥವಾ ಸುಡೋಮೊನಸ್ 1 ಕಿ. ಗ್ರಾಂ. ಪ್ರತಿ ಸಸಿಮಡಿಗೆ ಹಾಕಬೇಕು. ಎಲೆ ಕೊಳೆಯುವ ರೋಗವನ್ನು ತಡೆಗಟ್ಟಲು ಶೇ. 0.5 ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು ಹಾಗೂ ಎಲೆ ಚುಕ್ಕಿ ರೋಗವನ್ನು ತಡೆಯಲು ಶೇ. 0.2 ಕಾಬೆರ್ಂಡಜಿಮ್ ಅನ್ನು ಸಿಂಪಡಿಸಬೇಕು. 

ತೋಟ :- ಈಗಾಗಲೇ ನೆರಳನ್ನು ತೆಗೆದಿರದಿದ್ದಲ್ಲಿ ಮರ ಕಪಾತು ಮಾಡಬೇಕು. ಕಳೆ ನಿಯಂತ್ರಣ ಮಾಡಬೇಕು ಮತ್ತು ಏಲಕ್ಕಿ ಗಿಡಗಳಲ್ಲಿ ಒಣಗಿದ ಎಲೆಗಳನ್ನು ತೆಗೆಯಬೇಕು. ಕಡಿಮೆ ನೆರಳಿರುವ ಜಾಗಗಳಲ್ಲಿ ನೆರಳಿನ ಗಿಡಗಳನ್ನು ನಾಟಿ ಮಾಡಬೇಕು. ಗಿಡಗಳಿಗೆ ಸರಿಯಾದ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು. ಈಗಾಗಲೇ ರಸಗೊಬ್ಬರ ನೀಡದಿದ್ದಲ್ಲಿ ಒಣಗಿದ ತರಗೆಲೆಯ ಹೊದಿಕೆಯನ್ನು ತೆಗೆದು, ಪುಷ್ಪಗುಚ್ಛಗಳನ್ನು ಸುತ್ತಿ, ಗೊಬ್ಬರ ನೀಡುವುದು (62.5:62.5:125 ಞg ಓPಏ ಪ್ರತಿ ಹೆಕ್ಟೇರಿಗೆ). ಲಘು ಪೋಷಕಾಂಶ  ಐ.ಐ.ಎಸ್.ಆರ್. ಕಾರ್ಡಮಮ್ ಸ್ಪೆಷಲ್ 1 ಕೆ. ಜಿ. 200 ಲೀ ನೀರಿನಲ್ಲಿ ಕರಗಿಸಿ ಎಲೆಗಳಿಗೆ ಸಿಂಪಡಣೆ ಮಾಡುವುದು. ಶೇ. 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು ಮೇ ತಿಂಗಳಿನಲ್ಲಿ ಸಿಂಪಡಿಸದಿದ್ದಲ್ಲಿ. ಕಟ್ಟೆ ಪೀಡಿತ ಗಿಡಗಳನ್ನು ಕಿತ್ತು ನಾಶಮಾಡುವುದು. ಹೊಸ ಗಿಡಗಳ ನಾಟಿ ಮಾಡುವುದು (ಗುಂಡಿಗಳ 1/3 ಭಾಗ ಮೇಲ್ಮಣ್ಣು, 1/3 ಭಾಗ ಸಾವಯವ ಗೊಬ್ಬರ, 15 ಗ್ರಾಂ ಕಾರ್ಬೋಪ್ಯೂರಾನ್ / 50 ಗ್ರಾಂ ಬೇವಿನ ಹಿಂಡಿ ಮತ್ತು 100 ಗ್ರಾಂ ರಾಕ್ ಫಾಸ್ಪೇಟ್). 


ಕಾಳು ಮೆಣಸು ನರ್ಸರಿ :-
ನರ್ಸರಿ ಗಿಡಗಳಿಗೆ ಮಳೆ ನೀರು ನೇರವಾಗಿ ಬೀಳದಂತೆ ನೋಡಿಕೊಳ್ಳಬೇಕು. ಗಿಡಗಳಿಗೆ ಶೇ.0.25 ಕಾಪರ್ ಆಕ್ಸಿ ಕ್ಲೋರೈಡ್ ಸುರಿಯಬೇಕು ಬದಲಾಗಿ ಟ್ರೈಕೋಡರ್ಮ ಅಥವಾ ಸುಡೋಮೊನಸ್ ಅನ್ನು ಹಾಕಬಹುದು. ಎಲೆಗಳ ಮೇಲೆ ಫೈಟೋಪ್ತರಾ ಕೊಳೆ ರೋಗದ ಹಾನಿಯನ್ನು ತಡೆಯಲು ಶೇ. 0.1 ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೊಜೆಬ್ ಅಥವಾ ಶೇ.0.5 ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು. 

ತೋಟ :-ನೆರಳಿನ ನಿಯಂತ್ರಣ ಮಾಡುವುದು ಮತ್ತು ಗೊಬ್ಬರವನ್ನು ಈಗಾಗಲೆ ನೀಡದಿದ್ದಲ್ಲಿ ಗೊಬ್ಬರ ನೀಡುವುದು. ನೆಲದಲ್ಲಿ ಹಾದು ಹೋಗುವ ಹಂಬುಗಳನ್ನು / ಮೇಲಿನ ಕಾಂಡಗಳನ್ನು / ಬೇರೂರಿದ ಕಡ್ಡಿಗಳ ನಾಟಿಯನ್ನು ಕೈಗೊಳ್ಳುವುದು. ಜೂನ್ ತಿಂಗಳಿನಲ್ಲಿ ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು. 0.5 ಕಿ. ಗ್ರಾಂ / 200 ಲೀ ನೀರಿನಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ ಅಥವಾ ಪೆÇಟ್ಯಾಷಿಯಂ ಫಾಸ್ಪೋನೆಟ್ (600 ಎಂ. ಎಲ್ / 200 ಲೀ) ಅನ್ನು ಕರಗಿಸಿ 5 ಲೀ ಪ್ರತಿ ಬಳ್ಳಿಗೆ ಸುರಿಯುವುದು. ಜುಲೈ ತಿಂಗಳಿನಲ್ಲಿ ಗಿಡ ನೆಟ್ಟ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಫೈಟೋಪ್ತರಾ ಸೋಂಕು ತಗುಲಿದ ಹಾಗೂ ಅಕ್ಕಪಕ್ಕದ ಗಿಡಗಳಿಗೆ ಮೆಟಲಾಕ್ಸಿಲ್ ಜೊತೆಗೆ ಮ್ಯಾಂಕೋಜೆಬ್ (1.2 ಗ್ರಾಂ / ಲೀ) ದ್ರಾವಣವನ್ನು ಸಿಂಪಡಿಸುವುದು. 10-15 ದಿನಗಳ ನಂತರ ಇದೇ ದ್ರಾವಣವನ್ನು ಮತ್ತೊಂದು ಬಾರಿ ಸಿಂಪಡಿಸುವುದು. ಬಯಲು ಪ್ರದೇಶಗಳಲ್ಲಿ ಪೆÇಲ್ಲು ಕೀಟದ ಹಾವಳಿಯನ್ನು ತಪ್ಪಿಸಲು ಶೇ.0.05  ಕ್ವಿನಾಲ್ ಫಾಸ್ ದ್ರಾವಣವನ್ನು ಎಲೆಗಳ ಎಲ್ಲಾ ಬದಿಗಳು ನೆನೆಯುವಂತೆ ಸಿಂಪಡಿಸಬೇಕು. 


ಶುಂಠಿ :-
ಕಳೆಯನ್ನು ತೆಗೆಯಬೇಕು ಮತ್ತು ಒಳಚರಂಡಿಯನ್ನು ಶುಚಿಗೊಳಿಸಬೇಕು. ಎರಡನೆಯ ಸುತ್ತಿನ ರಸಗೊಬ್ಬರವನ್ನು ನೀಡುವುದು ಹಾಗೂ ಗಿಡದ ಬುಡಕ್ಕೆ ಮಣ್ಣು ಏರಿಸಿ ಹಸಿರೆಲೆ ಹೊದಿಕೆಯನ್ನು ಹಾಕುವುದು. ಕಾಂಡ ಕೊರೆಯುವ ಹುಳುವನ್ನು ನಿಯಂತ್ರಿಸಲು ಶೇ.0.05 ಡೈಮೆಥೊಯೆಟ್ ದ್ರಾವಣವನ್ನು ಸಿಂಪಡಿಸುವುದು. ಕೊಳೆ ರೋಗ ಕಂಡುಬಂದಲ್ಲಿ, ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡುವುದು ಮತ್ತು ಶೇ.0.3 ಕಾಪರ್ ಆಕ್ಸಿ ಕ್ಲೋರೈಡ್ ದ್ರಾವಣವನ್ನು ಮಡಿಗಳಿಗೆ ಸುರಿಯುವುದು. ಲಘು ಪೋಷಕಾಂಶ ಐ.ಐ.ಎಸ್.ಆರ್. ಜಿಂಜರ್ ಸ್ಪೆಷಲ್ 1 ಕೆ. ಜಿ. 200 ಲೀ ನೀರಿನಲ್ಲಿ ಕರಗಿಸಿ ನಾಟಿ ಮಾಡಿದ 60 ಮತ್ತು 90 ದಿನಗಳಿಗೊಮ್ಮೆ ಸಿಂಪಡಣೆ ಮಾಡುವುದು.

ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರು ಐ.ಸಿ.ಎ.ಆರ್.-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ ದೂರವಾಣಿ ಸಂಖ್ಯೆ 08272 298574 ಇವರನ್ನು ಸಂಪರ್ಕಿಸಬಹುದಾಗಿದೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,