Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೋಣಿಕೊಪ್ಪಲು: ಪೋಲೀಸ್ ಸಿಬ್ಬಂದಿಗಳಿಗೆ ಹಣ್ಣು ಹಂಪಲು ವಿತರಣೆ


ಲಾಕ್ ಡೌನ್ ಹಿನ್ನಲೆ ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತಿರುವ ಪೊಲೀಸ್ ಸಿಬ್ಬಂದಿಗಳಿಗೆ ಹಣ್ಣು ಹಂಪಲು ಮತ್ತು ತಂಪು ಪಾನೀಯಗಳನ್ನು ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ವಿತರಿಸಲಾಯಿತು

ಕೊರೊನ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಸಾರ್ವಜನಿಕರಿಗಾಗಿ ಕೆಲಸ ಮಾಡುವ ಪೋಲೀಸ್ ಇಲಾಖೆಯ ಕಾರ್ಯವನ್ನು ಮನಗಂಡು

ತಿತಿಮತಿ ಗಡಿಬಾಗದಿಂದ ಗೋಣಿಕೊಪ್ಪಲು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಹಣ್ಣು ಹಂಪಲು ಕಿಟ್ ವಿತರಿಸಿದರು.

ಈ ಸಂದರ್ಭ  ಗ್ರಾಮ ಪಂಚಾಯಿತಿ ಸದಸ್ಯರಾದ ಕುಳ್ಳಚಂಡ ಪ್ರಮೋದ್ ಗಣಪತಿ  ಅಫ್ಝಲ್ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್  ಕಾರ್ಯದರ್ಶಿ ಆದಿತ್ಯ ಯುವ ಕಾಂಗ್ರೆಸ್ ಮುಖಂಡರುಗಳಾದ ಸಚಿನ್ ,ಆಶಿಕ್ ,ಅಜ್ಮಲ್ ಉಪಸ್ಥಿತರಿದ್ದರು.


Search Coorg Media

Coorg's Largest Online Media Network