ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯ ಮೊರಾರ್ಜಿ ಶಾಲೆ ಕೋವಿಡ್ ಕೇರ್ ಕೇಂದ್ರದಲ್ಲಿ ಅಲ್ಲಿನ ನೋಡಲ್ ಅಧಿಕಾರಿಯಾದ ಶ್ರೀ ಶೇಖರ್, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಪಾಸಣೆ ನಡೆಸಿದರು ಹಾಗೂ ಅಲ್ಲಿಯವರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರಿಗೆ ಮನೋರಂಜನೆಗೆ ಕ್ಯಾರಮ್ ಬೋರ್ಡ್ ಅನ್ನು ಹಾಗೂ ಇತರೆ ವಸ್ತುಗಳನ್ನು ನೀಡಿದರು ಹಾಗೂ ಅವರಲ್ಲಿ ದೈರ್ಯವನ್ನು ತುಂಬಿದರು. ಹಾಗೂ ತಹಶೀಲ್ದಾರ್, ತಾಲ್ಲೂಕು ವೈದ್ಯಾಧಿಕಾರಿ, ಕಾರ್ಯನಿರ್ವಹಣಾಧಿಕಾರಿ ಮತ್ತು ಆರೋಗ್ಯ ಇಲಾಖಾ ತಂಡದಿಂದ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ.