ಜೀವನ ಚಕ್ರ
ಬಲಿತ ಕೀಟವು ಜೀರುಂಡೆಯಾಗಿದ್ದು,ಮುಂಬಾಗದಲ್ಲಿ ಉದ್ದನೆಯ ಒಂದು ಜೊತೆ ಕುಡಿ ಮೀಸೆ ಹೊಂದಿರುತ್ತದೆ. ರೆಕ್ಕೆ ಗಳು ಕಪ್ಪ್ಟಬಣ್ಣದ್ದಾಗಿದ್ದು ಅದರಲ್ಲಿ ಬಿಳಿಪಟ್ಟೆ ಗಳಿರುತ್ತವೆ. ಸಾಮಾನ್ಯವಾಗಿ ಗಂಡು ಹುಳುಗಳು ಹೆಣ್ಣು ಚಿಕ್ಕದಾಗಿರುತ್ತವೆ.ಹೆಣ್ಣು ಕೀಟಗಳು ಗಿಡದ ಮತ್ತು ದಪ್ಪ ರೆಂಬೆಗಳ ತೊಗಟೆಯ ಸಂದುಗೊಂದುಗಳಲ್ಲಿ ಮೊಟ್ಟೆ ಯಿಡುತ್ತವೆ. ಪ್ರತಿ ಹೆಣ್ಣು ಹುಳುವೂ ತನ್ನ ಜೀವಿತಾವವಧಿಯಲ್ಲಿ ಸುಮಾರು 100 ಮೊಟ್ಟೆಗಳನ್ನಿಡತ್ತವೆ, ಮೊಟ್ಟೆಗಳು 9-12 ದಿನಗಳಲ್ಲಿ ಒಡೆದು ಮರಿಹುಳಗಳಾಗುತ್ತವೆ.ಪೂರ್ತಿ ಬೆಳೆದ ಮರಿಹುಳುವು ಸುಮಾರು 2-3 ಸೆಂ.ಮೀ. ಉದ್ದವಿದ್ದು ತೆಳುಹಳದಿ ಬಣ್ಣದ್ದಾಗಿದ್ದು,ತಲೆಯ ಭಾಗ ಅಗಲವಾಗಿರುತ್ತದೆ. ಮರಿಹುಳುವಿನ ಹಂತ ಸುಮಾರು 10 ತಿಂಗಳಲ್ಲಿ ಕೊನೆಗೊಳ್ಳಲಿದ್ದು ಅನಂತರ ತೂಗಟೆಯ ಬದಿಯಲ್ಲಿ ತಾನೇ ಮಾಡಿದ ಗ ಗೂಡಿನಲ್ಲಿ ಕೋಶಾವಸ್ಥೆ ಯನ್ನು ಸೇರುತ್ತ ದೆ. ಕೀಟದ ಕೋಶಾವಸ್ಥೆ ಯು 3-4 ವಾರಗಳಾಗಿದ್ದು,ನಂತರ ಕೀಟವಾಗಿ (ಜೀರುಂಡೆ) ಪರಿವರ್ತನೆಗೊಳ್ಳುತ್ತದೆ. ಪ್ರೌಢ ಕೀಟವು 3-7 ದಿನಗಳ ಕಾಲ ಸುರಂಗದಲ್ಲಿ ದ್ದು ನಂತರ ಮರಿಹುಳು ಕೊರೆದಿರಿಸಿದ ರಂಧ್ರದ ಮೂಲಕ ಹೊರಕ್ಕೆ ಹಾರುತ್ತದೆ .ಮುಖ್ಯವಾಗಿ ಎರಡು ಹಾರಾಟದ ಕಾಲಗಳಿದ್ದು,ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಹೊರಬರುತ್ತವೆ ಹಾಗು ಏಪ್ರಿಲ್-ಮೇ ತಿಂಗಳು ಅಲ್ಪಾವಧಿ ಹಾರಾಟದ ಕಾಲವಾಗಿರುತ್ತದೆ. ಆದರೆ ವರ್ಷದ ಬೇರೆ ಸಮಯದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಕೀಟ ಹಾರುವ ಸಾಧ್ಯತೆ ಇದೆ. ಮೋಡ ಕವಿದ ಮತ್ತು ಮಳೆಯ ದಿನಗಳಲ್ಲಿ ಕೀಟ ಹೊರಬರುವುದು ಸ್ವಲ್ಪ ತಡವಾಗುತ್ತದೆ. ಪ್ರೌಢ ಕೀಟದ ಜೀವಿತಾವಧಿ 34-40 ದಿನಗಳಾಗಿದೆ .ಈ ಅವಧಿಯಲ್ಲಿ ಗಂಡು ಕೀಟವು ಶ್ರವಿಸುವ ಲಿಂಗಾಕರ್ಷಕದ ಸಹಾಯದಿಂದ ಹೆಣ್ಣು ಕೀಟಗಳನ್ನು ಆಕರ್ಷಿಸಿ ,ಮಿಲೀನಗೊಂಡು ವಂಶಾಭಿವೃದ್ಧಿಯನ್ನುಂಟು ಮಾಡುತ್ತದೆ.
ಕೀಟ ಹಾನಿಯ ರೀತಿ
ಹೆಣ್ಣು ಕೀಟಗಳು ಗಿಡದ ಕಾಂಡ ಮತ್ತು ದಪ್ಪರೆಂಬೆಗಳ ತೊಗಟೆಯ ಸಂದುಗೊಂದುಗಳಲ್ಲಿ ಮೊಟ್ಟೆಯಿಡುತ್ತದೆ. ಆದರೆ ಕಾಫಿ ಗಿಡಗಳನ್ನು ತೀವ್ರವಾಗಿ ಹಾನಿಮಾಡುವುದು ಕೀಟದ ಮರಿಹುಳುವಿನ ಹಂತವಾಗಿದೆ.ಮೊಟ್ಟೆ ಯಿಂದ ಹೊರ ಬಂದ ಮರಿಹುಳು ಮೊದಲು 2 ತಿಂಗಳ ಕಾಲ ತೊಗಟೆಯಲ್ಲಿನ ತಿರುಳನ್ನು ಕೊರೆದು ತಿನ್ನುತ್ತಿರುತ್ತ ವೆ ನಂತರ ಕಾಂಡದ ಗಟ್ಟಿಭಾಗವನ್ನು ಕೊರೆದು ಒಳಗೆ ಪ್ರವೇಶಿಸಿ ಎಲ್ಲಾ ಕಡೆಗಳಲ್ಲೂ ಸುರಂಗಗಳನ್ನುಂಟು ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಸುರಂಗಗಳು ಬೇರಿನವರೆಗೂ ವ್ಯಾಪಿಸಿರುತ್ತವೆ. ಈ ಸುರಂಗಗಳಲ್ಲಿ ಕೀಟದ ಹಿಕ್ಕೆಯನ್ನು ಗಟ್ಟಿಯಾಗಿ ತುಂಬಲ್ಪಟ್ಟಿರುತ್ತದೆ. ಇದರಿಂದಾಗಿ ಕಾಂಡದಲ್ಲಿ ಆಹಾರ ,ನೀರು ಮತ್ತು ಪೋಷಕಾಂಶದ ಪೂರೈಕೆ ಕುಂಠಿತವಾಗಿ ಗಿಡಗಳ ಬೆಳವಣಿಗೆ ಕಡಿಮೆಯಾಗಿ ಸೊರಗುತ್ತವೆ. 7-8 ವರ್ಷ ವಯಸ್ಸಿನ ಗಿಡಗಳು ಒಂದೆರಡು ವರ್ಷದಲ್ಲಿ ಸಾಯುತ್ತವೆ.ದೊಡ್ಡ ಗಿಡಗಳು ಕೀಟದ ಹಾವಳಿಯನ್ನು ಕೆಲವು ವರ್ಷಗಳ ಕಾಲ ತಡೆದರು ಫಸಲು ಜೊಳ್ಳಿನ ಅಂಶ ಜಾಸ್ತಿಯಾಗಿರುತ್ತದೆ. ಇಂತಹ ಗಿಡಗಳಲ್ಲಿ ಪ್ರೌಢ ಕೀಟ ಹೊರಗೆ ಬಂದ ರಂದ್ರಗಳು ಕಾಣಿಸುತ್ತದೆ.
ಹಾವಳಿಯ ಲಕ್ಷಣಗಳು
ಕೀಟದ ಬೆಳವಣಿಗೆಗೆ ಅನುಕೂಲಕರವಾದ ಅಂಶಗಳು
ಸಮಗ್ರ ನಿರ್ವಹಣಾ ಕ್ರಮಗಳು
ಈ ಕೀಟದ ಸಮಗ್ರ ನಿರ್ವಹಣೆಯನ್ನು ಮಾಡಬೇಕಾದರೆ, ಈ ಕೆಳಗೆ ಸೂಚಿಸಿದ ಕ್ರಮಗಳನ್ನು ಅನುಸರಿಸಬೇಕು .
ಅ ) ನೆರಳನ್ನು ಕಾಪಾಡುವುದು.
ಈ ಕೀಟದ ಹತೋಟಿಯ ನಿಟ್ಟಿನಲ್ಲಿ ಮುಖ್ಯವಾಗಿ ಎರಡು ಹಂತದ ನೆರಳು ಅವಶ್ಯಕವಾಗಿದೆ. ಮಿಶ್ರ ಜಾತಿಯ ನೆರಳಿನ ಮರಗಳು ಮೇಲ್ನಾಗದಲ್ಲಿ,ಮತ್ತು ಎರಡನೇ ಹಂತದಲ್ಲಿ ತಾತ್ಕಾಲಿಕ ನೆರಳಾದ ಹಾಲುವಾಣ ಮರಗಳನ್ನು ಬೆಳೆಸಬೇಕು. ಈ ನೆರಳಿನ ಮರಗಳಿಂದ ಕಾಫಿ ಗಿಡಗಳಿಗೆ 60% ರಷ್ಟು ನೆರಳು ಒದಗಿಸುವಂತಿರಬೇಕು.ನೆರಳಿನ ಮರಗಳ ಕಸಿಯನ್ನು ಬೇಸಿಗೆ ಕಾಲದಲ್ಲಿ ಮಾಡಬಾರದು.ಒಂದೇ ರೀತಿಯ ಸಿಲ್ವರ್ ಓಕ್ ನೆರಳನ್ನು ಬೆಳೆಯಬಾರದು.
ಆ) ಕೀಟ ಪೀಡಿತ ಗಿಡಗಳನ್ನು ಹುಡುಕಿ ಗುರುತಿಸಿ ನಾಶಮಾಡುವುದು
ಇ) ರಾಸಾಯನಿಕ ಕ್ರ ಮಗಳು
ಪ್ರೌಡ ಕೀಟ ಹಾರುವ ಕಾಲದಲ್ಲಿ (ಏಪ್ರಿಲ್ ತಿಂಗಳ ಎರಡನೆ ವಾರದೊಳಗೆ ಒಂದು ಬಾರಿ ಮತ್ತು ಅಕ್ಟೋಬರ್ ತಿಂಗಳ ಎರಡ. ವಾರದೊಳಗೆ ಒಂದು ಬಾರಿ) ಕ್ಲೋರೋಪೈರಿಫಾಸ್ 20 ಇಸಿ ಎಂ. ಕೀಟನಾಶಕವನ್ನು ಉಪಯೋಗಿಸಬೇಕು. ಕೀಟ ನಾಶಕ ಬಳಸುವ ವಿಧಾನವೆಂದರೆ 200 ಲೀಟರ್ ನೀರಿನಲ್ಲಿ 600 ಮಿ.ಲಿ ಕ್ಲೋರೋಪೈರಿಫಾಸ್ 20 ಇಸಿ ಯನ್ನು ಯಾವುದಾದರೂ 200 ಮಿ.ಲಿ ಅಂಟು ದ್ರಾವಣದೊಂದಿಗೆ ಬೆರೆಸಿ ಪ್ರಧಾನ ಕಾಂಡ ಮತ್ತು ರೆಂಬೆಗಳು ತೊಯ್ಯುವಂತೆ ಸಿಂಪರಣೆ ಮಾಡಬೇಕು.
ವಿಶೇಷ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮಗಳು
ತೋಟದ ಕೆಲವೊಂದು ಭಾಗದಲ್ಲಿ ನೆರಳಿನ ಮರಗಳಿಲ್ಲದೇ ಹೆಚ್ಚು ಖಾಲಿ ಜಾಗವಿದ್ದರೆ ಅಲ್ಲಲ್ಲಿ ಕಲ್ಲಿನಿಂದ ಕೂಡಿದ ಭಾಗವಿದ್ದರೆ,ಅಲ್ಪಕಾಲದಲ್ಲಿ ನೆರಳು ಬೆಳಸಲು ಕಷ್ಟವಾದಲ್ಲಿ, ಅಕ್ಕ-ಪಕ್ಕ ತೋಟದಲ್ಲಿ ಬಿಳಿ ಕಂಡ ಕೊರಕದ ನಿರ್ವಹಣೆಗಾಗಿ ಯಾವುದೇ ಕ್ರಮ ಅನುಸರಿಸದೇ ಸಂಪೂರ್ಣವಾಗಿ ನಿರ್ಲಕ್ಷಿ ಸಿದ್ದರೆ,ತೋಟದ ಆರೋಗ್ಯವಂತ ಗಿಡಗಳನ್ನು ರಕ್ಷಿಸಲು ಈ ಕೆಳಗೆ ಸೂಚಿಸದ ನಿರ್ವಹಣಾ ಕ್ರಮಗಳಲ್ಲಿ ಯಾವುದಾದರೊಂದನ್ನು ಅಳವಡಿಸುವುದು ಅವಶ್ಯಕ.
1. ಸುಣ್ಣದ ದ್ರಾವಣದ ಲೇಪನ
ಅಥವಾ
2. ತೊಗಟೆ ಉಜ್ಜುವುದು
ಅಥವಾ
3. ಕಾಂಡವನ್ನು ಪಟ್ಟಿಯಿಂದ ಸುತ್ತುವುದು
Published by:
The Director of Research,CCRI,Coffee Research Station.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network