Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಪ್ರಸರಣ ನಿಯಂತ್ರಣಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ

ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಪ್ರಸರಣ ನಿಯಂತ್ರಣಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ


ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಪ್ರಸರಣವನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆ ದಿಸೆಯಲ್ಲಿ ಮೂಗು ಮತ್ತು ಗಂಟಲು ದ್ರವ ಪರೀಕ್ಷೆ ಹೆಚ್ಚಿಸಿರುವುದು, ಕೋವಿಡ್ ಪಾಸಿಟಿವ್ ಬಂದವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರ್ಪಡೆ ಮಾಡುವುದು, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಹಾಗೆಯೇ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುವಲ್ಲಿ ಅಗತ್ಯ ಕ್ರಮ ವಹಿಸುವುದು, ಹಾಗೆಯೇ ಕೋವಿಡ್ ಆಸ್ಪತ್ರೆ ಮತ್ತು ಆರೈಕೆ ಕೇಂದ್ರದಲ್ಲಿರುವವರಿಗೆ ಬಿಸಿ ನೀರು ಬಿಸಿಯೂಟ, ಬಿಸಿತಿಂಡಿಯನ್ನು ಕಾಲ ಕಾಲಕ್ಕೆ ವ್ಯವಸ್ಥೆ ಮಾಡುವುದು ಜೊತೆಗೆ ಆಸ್ಪತ್ರೆಯಲ್ಲಿ ಅಗತ್ಯ ಆಮ್ಲಜನಕ ದಾಸ್ತಾನು ಮಾಡಿಕೊಳ್ಳುವುದು, ಜಿಲ್ಲೆಯ ಗಡಿ ಭಾಗದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ, ಸಹಾಯವಾಣಿ ಕೇಂದ್ರ ಆರಂಭ ಹೀಗೆ ಹಲವು ಕಾರ್ಯಗಳನ್ನು ಮುನ್ನೆಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದೆ.

ಆ ದಿಸೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ 37 ಕಡೆ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 9.30 ಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಲಸಿಕೆ ನೀಡಲಾಗುತ್ತದೆ.

ಮಡಿಕೇರಿ ತಾಲ್ಲೂಕಿನಲ್ಲಿ ಭಾಗಮಂಡಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರಂಬಾಣೆ, ಚೆಯ್ಯಂಡಾಣೆ, ಮೂರ್ನಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಾಪೋಕ್ಲು ಜೂನಿಯರ್ ಕಾಲೇಜು, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಲಸಿಕೆ ನೀಡಲಾಗುತ್ತದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಳಿಗೇರಿ, ಚೆಟ್ಟಳ್ಳಿ, ಗೌಡಳ್ಳಿ, ಹೆಬ್ಬಾಲೆ, ಕೊಡ್ಲಿಪೇಟೆ, ಮಾದಾಪುರ, ನಂಜರಾಯಪಟ್ಟಣ, ಶಾಂತಳ್ಳಿ, ಶಿರಂಗಾಲ, ಸುಂಟಿಕೊಪ್ಪ, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಹೊಸ ಕಟ್ಟಡ, ಕುಶಾಲನಗರ ರೈತ ಸಹಕಾರ ಭವನ, ಸೋಮವಾರಪೇಟೆ ಆಯುರ್ವೇದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

ವಿರಾಜಪೇಟೆ ತಾಲ್ಲೂಕಿನ ಬಾಳಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬಿರನಾಣಿ, ಹುದಿಕೇರಿ, ಚೆನ್ನಯ್ಯನ ಕೋಟೆ, ಕಾಕೋಟುಪರಂಬು, ಕಣ್ಣಂಗಾಲ, ಕಾನೂರು, ಕುಟ್ಟಂದಿ, ಮಾಲ್ದಾರೆ, ಶ್ರೀಮಂಗಲ, ತಿತಿಮತಿ, ಗೋಣಿಕೊಪ್ಪಲು ಜಿಎಂಪಿ ಶಾಲೆ, ಕುಟ್ಟ ಪಂಚಾಯಿತಿ ಸಮುದಾಯ ಭವನ, ಪಾಲಿಬೆಟ್ಟ ಜಿಎಂಪಿ ಶಾಲೆ, ಸಿದ್ದಾಪುರ ಜಿಎಂಪಿ ಶಾಲೆ, ವಿರಾಜಪೇಟೆ ಮಹಿಳಾ ಸಮಾಜ ಇಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರತ್ಯೇಕ ಗಂಟಲು ಮಾದರಿ ದ್ರವ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 37 ಕಡೆ ಗಂಟಲು ಮಾದರಿ ದ್ರವ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದ್ದು, ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಂಟಲು ಮಾದರಿ ದ್ರವವನ್ನು ತೆಗೆಯಲಾಗುತ್ತದೆ.

ಮಡಿಕೇರಿ ತಾಲ್ಲೂಕಿನಲ್ಲಿ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡ, ಚೇರಂಬಾಣೆ ಮಾರುಕಟ್ಟೆ, ಚೆಯ್ಯಂಡಾಣೆ ಸರ್ಕಾರಿ ಶಾಲೆ, ಮೂರ್ನಾಡು ಸರ್ಕಾರಿ ಶಾಲೆ, ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡ.

ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರೂಪ್ ‘ಡಿ’ ಸಿಬ್ಬಂದಿ ವಸತಿ ಗೃಹ ಹಿಂಭಾಗ, ಐಗೂರು ಹಳೆಯ ಗ್ರಾ.ಪಂ. ಕಟ್ಟಡ, ಚೆಟ್ಟಳ್ಳಿ ವೈದ್ಯರ ಹಳೆಯ ವಸತಿ ಗೃಹ, ಗೌಡಳ್ಳಿ ಬಿ ಉಪ ಕೇಂದ್ರ ಕಟ್ಟಡ, ಹೆಬ್ಬಾಲೆ, ಕೊಡ್ಲಿಪೇಟೆ, ಶಾಂತಳ್ಳಿ ಹಳೆಯ ಗ್ರೂಪ್ ‘ಡಿ’ ಸಿಬ್ಬಂದಿ ವಸತಿ ಗೃಹ, ಕೂಡಿಗೆ ಎಪಿಎಂಸಿ ಕಟ್ಟಡ, ಮಾದಾಪುರ ವೈದ್ಯರ ಹಳೆಯ ವಸತಿ ಗೃಹ, ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ, ಶಿರಂಗಾಲ ಶಾಲೆ ಬಳಿ, ಸುಂಟಿಕೊಪ್ಪ ಹಳೆಯ ಎಎನ್ಎಂ ವಸತಿ ಗೃಹ, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಒಪಿಡಿ ಕಟ್ಟಡ, ಕೂಶಾಲನಗರ ರೈತ ಸಹಕಾರ ಭವನ, ಸೋಮವಾರಪೇಟೆ ಮಹಿಳಾ ಸಮಾಜ.

ವಿರಾಜಪೇಟೆ ತಾಲ್ಲೂಕಿನಲ್ಲಿ ಬಾಳಲೆ, ಹುದಿಕೇರಿ, ಕಾನೂರು, ಶ್ರೀಮಂಗಲ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ, ಬಿರುನಾಣಿ ಜಿಎಚ್ಪಿ ಶಾಲೆ, ಚರನ್ನಯ್ಯನಕೋಟೆ ಹೊಳಮಾಲ ಜಿಎಂಪಿ ಶಾಲೆ, ಕಾಕೋಟುಪರಂಬು ಜಿಎಂಪಿ ಶಾಲೆ, ಕಣ್ಣಂಗಾಲ ಗ್ರಾ.ಪಂ.ಕಟ್ಟಡ, ಕುಟ್ಟಂದಿ ಕೆ.ಬಿ. ಹೈಸ್ಕೂಲ್, ಮಾಲ್ದಾರೆ ಕಲ್ಲಳ್ಳ ಎ.ಡಬ್ಲ್ಯು ಕೇಂದ್ರ, ತಿತಿಮತಿ ಬಿಸಿಎಂ ಮಹಿಳಾ ಹಾಸ್ಟೆಲ್, ಗೋಣಿಕೊಪ್ಪಲು ಜಿಎಂಪಿ ಶಾಲೆ, ಕುಟ್ಟ ಪಂಚಾಯಿತಿ ಸಮುದಾಯ ಭವನ, ಪಾಲಿಬೆಟ್ಟ, ಸಿದ್ದಾಪುರ ಜಿಎಂಪಿ ಶಾಲೆ, ವಿರಾಜಪೇಟೆ ಮಹಿಳಾ ಸಮಾಜ. ಇಲ್ಲಿ ಗಂಟಲು ಮಾದರಿ ದ್ರವ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೋವಿಡ್-19 ಸಹಾಯವಾಣಿ :- ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಕೋವಿಡ್-19 ವೈರಸ್ ಸೋಂಕಿತರಿಗೆ ಅನುಕೂಲವಾಗುವಂತೆ ಕೋವಿಡ್-19 ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್ ಆಸ್ಪತ್ರೆ 08272-220606, ಜಿಲ್ಲಾ ಸಹಾಯವಾಣಿ-08272-221077, ಮಡಿಕೇರಿ-08272-228396, ವಿರಾಜಪೇಟೆ ಮತ್ತು ಪೆÇನ್ನಂಪೇಟೆ-08274-256328 ಹಾಗೂ ಸೋಮವಾರಪೇಟೆ ಮತ್ತು ಕುಶಾಲನಗರ-08276-282045, 1077 ಮತ್ತು ವಾಟಸ್ಆಪ್ ನಂಬರ್ 8550001077 ನ್ನು ಸಂಪರ್ಕಿಸಬಹುದು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network