ಜಿಲ್ಲಾಡಳಿತದ ವಿರುದ್ಧ ಚೇಂಬರ್ ಆಫ್ ಕಾಮಸ್೯ ತೀವ್ರ ಅಸಮಾಧಾನ
ಕೊಡಗು ಜಿಲ್ಲಾಡಳಿತ ಚೇಂಬರ್ ಆಫ್ ಕಾಮಸ್೯ನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ತನಗಿಷ್ಟ ಬಂದಂತೆ ನಿಯಮಗಳನ್ನು ರೂಪಿಸಿ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು ಚೇಂಬರ್ ಜಿಲ್ಲಾ ಪ್ರಧಾನ ಕಾರ್ಯದಶಿ೯ ನವೀನ್ ಅಂಬೆಕಲ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಗತ್ಯ ವಸ್ತುಗಳ ಖರೀದಿಗೆ ವಾರದ ಎರಡು ದಿನ ಮಾತ್ರ ನಿಗಧಿ ಮಾಡಿರುವುದಲ್ಲದೆ ವಾಹನಗಳ ಓಡಾಟಕ್ಕೂ ನಿರ್ಬಂಧ ಹೇರಿರುವುದರಿಂದ ಇಂದು ಯಾವುದೇ ಅಂಗಡಿಗಳಿಗೆ ವ್ಯಾಪಾರವಾಗಿಲ್ಲ. ಗ್ರಾಹಕರು ಕೂಡ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಇದು ಅವೈಜ್ಞಾನಿಕ ಕ್ರಮವಾಗಿದ್ದು, ಜಿಲ್ಲಾಡಳಿತ ಮೊದಲು ತನ್ನ ಮೂಗಿನ ನೇರಕ್ಕೆ ವತರ್ಿಸುವುದನ್ನು ಬಿಡಬೇಕೆಂದು ಒತ್ತಾಯಿಸಿದ್ದಾರೆ.
ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಚೇಂಬರ್ ಆಫ್ ಕಾಮಸರ್್ನೊಂದಿಗೆ ಚಚಿ೯ಸಿ ನಿಧಾ೯ರಗಳನ್ನು ಕೈಗೊಳ್ಳುವುದು ಸಹಜ ಪ್ರಕ್ರಿಯೆ. ಈ ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಇದೇ ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಈಗಿನ ಜಿಲ್ಲಾಧಿಕಾರಿಗಳು ಚೇಂಬರ್ ಅಧ್ಯಕ್ಷರನ್ನು ಕೂಡ ಕ್ಯಾರೇ ಎನ್ನುತ್ತಿಲ್ಲ. ಮೊಬೈಲ್ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರು ನಿರಂತರವಾಗಿ ಚೇಂಬರ್ ಪದಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಜನರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸುತ್ತಿದ್ದರು. ಯಾವುದೇ ಹೊತ್ತಿನಲ್ಲಿ ಮನವಿಗೆ ಸ್ಪಂದಿಸುತ್ತಿದ್ದರು, ಅಲ್ಲದೆ ಸಲಹೆಗಳನ್ನು ಸ್ವೀಕರಿಸುತ್ತಿದ್ದರು.
ತರಕಾರಿ ಮತ್ತು ಹಣ್ಣುಗಳ ದರ ನಿಗಧಿಯ ಸಂದರ್ಭವೂ ಚೇಂಬರ್ ನೊಂದಿಗೆ ಚಚಿ೯ಸಿ ಅಂತಿಮ ನಿಧಾ೯ರ ಕೈಗೊಳ್ಳುತ್ತಿದ್ದರು. ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಜಾರಿಗೆ ತಂದು ಜನಮೆಚ್ಚುಗೆ ಗಳಿಸಿದ್ದರು.
ಆದರೆ ಇಂದು ಅಗತ್ಯ ವಸ್ತುಗಳ ಖರೀದಿ ವಿಚಾರದಲ್ಲಿ ನಿತ್ಯ ಗೊಂದಲ ಸೃಷ್ಟಿಸಲಾಗುತ್ತಿದ್ದು, ಇದರಿಂದ ಜನರು ಆಹಾರ ಸಾಮಾಗ್ರಿ ಕೊರತೆಯನ್ನು ಎದುರಿಸುವಂತ್ತಾಗಿದೆ. ದರ ನಿಗಧಿಯಲ್ಲೂ ಸ್ಪಷ್ಟತೆಯಿಲ್ಲ. ವರ್ತಕರು ಕೂಡ ನೆಮ್ಮದಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಎಲ್ಲಾ ವಿಧದಿಂದಲೂ ವಿಫಲವಾಗಿದ್ದು, ರೋಗಿಗಳಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ನೀಡಲು ಕೂಡ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯ ಎದುರು ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಇದೆ. ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಿಬ್ಬಂದಿಗಳಿಗೆ ಊಟ, ಉಪಹಾರ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ನವೀನ್ ಆರೋಪಿಸಿದ್ದಾರೆ.
ಹೊಟೇಲ್ ಗಳಿಂದ ಆಹಾರವನ್ನು ಪಾಸ೯ಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕಾಗಿತ್ತು ಮತ್ತು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾಗಳ ಸಂಚಾರಕ್ಕೆ ಅನುಮತಿ ನೀಡಬೇಕಾಗಿತ್ತು. ಇದರಿಂದ ಸಂಕಷ್ಟದ ಈ ದಿನಗಳಲ್ಲಿ ರಿಕ್ಷಾ ಚಾಲಕರಿಗೂ ಒಂದಷ್ಟು ಆದಾಯ ದೊರೆಯುತ್ತಿತ್ತು. ಆದರೆ ಜನಸಾಮಾನ್ಯರ ಕಷ್ಟಗಳನ್ನು ಅರಿಯದ ಜಿಲ್ಲಾಡಳಿತ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಜಿಲ್ಲಾಡಳಿತ ಮೊದಲು ಸ್ಥಳೀಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕೆ ಹೊರತು ಯಾರನ್ನೋ ಮೆಚ್ಚಿಸಲಿಕ್ಕಾಗಿ ಅರ್ಥಹೀನ ನಿಯಮಗಳನ್ನು ಜಾರಿಗೆ ತರಬಾರದು. ಇಂದು ಸಿಕ್ಕಸಿಕ್ಕಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಇದರಿಂದ ಶೇ.70 ರಷ್ಟು ಮಂದಿ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವೇ ಆಗಿಲ್ಲ. ಅಲ್ಲದೆ ತರಕಾರಿಯನ್ನು ಕೊಳ್ಳುವವರಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಜಿಲ್ಲೆ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಜನಸಾಮಾನ್ಯರು ಆಹಾರ ಸಾಮಾಗ್ರಿಗಳಾದರೂ ಮನೆಯಲ್ಲಿರಲಿ ಎಂದು ಪರದಾಡುತ್ತಿದ್ದಾರೆ. ಆದರೆ ಜನರ ಕಷ್ಟವನ್ನು ಅರಿಯದ ಜಿಲ್ಲಾಡಳಿತ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ವಿನಾಕಾರಣ ತೊಂದರೆ ನೀಡುತ್ತಿದೆ. ಇದರಿಂದ ವರ್ತಕರು ಹಾಗೂ ಜನರು ಗೊಂದಲಕ್ಕೀಡಾಗಿದ್ದಾರೆ.
ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಸಲಹೆಗಳನ್ನು ಪರಿಗಣಿಸಿ ಜನಪರವಾದ ನಿರ್ಧಾರ ಕೈಗೊಂಡಿದ್ದರೆ ಇಂದು ಈ ಪರಿಸ್ಥಿತಿ ನಿಮರ್ಾಣವಾಗುತ್ತಿರಲಿಲ್ಲ. ಎರಡು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದರೆ ಜನಜಂಗುಳಿ ಏರ್ಪಟ್ಟು ಕೋವಿಡ್ ನಿಯಂತ್ರಣವಾಗುವ ಬದಲು ವ್ಯಾಪಕವಾಗಿ ಹರಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಕಾ೯ರದ ಮಾರ್ಗಸೂಚಿಯಂತೆ ಕೊಡಗು ಜಿಲ್ಲೆಯಲ್ಲಿ ಕೂಡ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿ ನೀಡಲಿ. ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲಿ. ಪ್ರತಿ ಹಂತದಲ್ಲೂ ಚೇಂಬರ್ ಆಫ್ ಕಾಮಸ್೯ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ನವೀನ್ ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಲಿ ಎಂದು ಹೇಳಿದ್ದಾರೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network