ಕೊಡಗು ಜಿಲ್ಲಾ ಔಷಧಿ ವಿತರಕರ ಸಂಘದಿಂದ ಮಡಿಕೇರಿ ಸಂಚಾರಿ ಪೊಲೀಸರಿಗೆ ಆರೋಗ್ಯ ಕಿಟ್ ವಿತರಣೆ
ಕೊಡಗು ಜಿಲ್ಲಾ ಔಷಧಿ ವಿತರಕರ ಸಂಘದ ಜಿಲ್ಲಾಧ್ಯಕ್ಷ ಅಂಬೇಕಲ್ ಜೀವನ್ ಅವರಿಂದ ಚಾಲನೆ ದೊರಕಿತು.
ಕೊರೋನಾದಿಂದ ದೇಶವೇ ತಲ್ಲಣಗೊಂಡಿದೆ. ಈ ಸಂದರ್ಭ ಪೊಲೀಸ್ ಆರೋಗ್ಯ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಎಲ್ಲರೂ ಒಟ್ಟಿಗೆ ಸೇರಿ ಸಮಾಜ ಸೇವೆ ಮಾಡೋಣ. ಅಗತ್ಯ ನೆರವು ನೀಡೋಣ. ಪೊಲೀಸ್ ಸಿಬ್ಬಂದಿಗಳಿಗೂ ಪಿಪಿಇ ಕಿಟ್ ನೀಡಲಾಗುತ್ತದೆ. ಜನರು ಕೂಡ ಅನಗತ್ಯವಾಗಿ ತಿರುಗಾಡುತ್ತಿದ್ದಾರೆ. ಪೊಲೀಸರ ಮಾತನ್ನೂ ಕೇಳುತ್ತಿಲ್ಲ. ಸಾರ್ವಜನಿಕರು ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಅಂಬೇಕಲ್ ಜೀವನ್ ಅಭಿಪ್ರಾಯ. ವ್ಯಕ್ತ ಪಡಿಸಿದರು.
ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ..
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಸಂಚಾರಿ ಪೊಲೀಸರು ಇತರರಿಗೆ ಮಾದರಿಯಾಗಿದ್ದಾರೆ.ಆದರೂ ಮಾನವೀಯತೆ ಮರೆಯದಿರಿ. ಅನೂಪ್ ಮಾದಪ್ಪ ಕಿವಿಮಾತು ಹೇಳಿದರು.
ಪೊಲೀಸ್ ಇಲಾಖೆಗೆ ಅದರದ್ದೇ ಆದ ತತ್ವಗಳಿವೆ..ನಮ್ಮ ಜೀವಕಿಂತ ಕರ್ತವ್ಯ ಮುಖ್ಯ ಮನೆಯಲ್ಲಿ ಇರಿ ಎಂದರೂ ಜನರು ತಿರುಗಾಡುತ್ತಿದ್ದಾರೆ. ಪೊಲೀಸರು ಜೀವ ಭಯ ತೊರೆದು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಎಲ್ಲಾ ರೀತಿಯ ಎಚ್ಚರಿಕೆ ವಹಿಸಬೇಕು.
ಕೋವಿಡ್ ಎರಡನೇ ಅಲೆ ಭೀಕರವಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಉಳಿಯುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ದಿನೇಶ್ ಕುಮಾರ್ ಸಲಹೆ ನೀಡಿದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network