Header Ads Widget

ಸರ್ಚ್ ಕೂರ್ಗ್ ಮೀಡಿಯ

ಖಾಸಗಿ ಬಸ್ ಕಾರ್ಮಿಕರ ಗೋಳು ಕೇಳುವವರಾರು? ; ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ, ದಿನೇಶ್ ನಾಯರ್

ಖಾಸಗಿ ಬಸ್ ಕಾರ್ಮಿಕರ ಗೋಳು ಕೇಳುವವರಾರು? ; 

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ, ದಿನೇಶ್ ನಾಯರ್.

( ದಿನೇಶ್ ನಾಯರ್ )
ನಮ್ಮ ಸರ್ಕಾರ ಚಿಂದಿ ಹಾಯುವವರಿಂದ ಹಿಡಿದು ಸಮಾಜದ ಎಲ್ಲಾ ವರ್ಗದ ಜನರಿಗೆ ಅನುದಾನ ಘೋಷಣೆ ಮಾಡಿದೆ.ಅದರೆ ಖಾಸಗಿ ಬಸ್ ಕಾರ್ಮಿಕರ ಕಷ್ಟ ಯಾರಿಗೂ ಕಾಣಲೇ ಇಲ್ಲವೇ? ಎಂದು ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ದಿನೇಶ್ ನಾಯರ್ ಪ್ರಶ್ನೇ ಮಾಡಿದ್ದಾರೆ.

ನನಗೆ ಒಂದು ಸಂದೇಹ ಈ ಖಾಸಗಿ ಬಸ್ ಕಾರ್ಮಿಕರು ಈ ದೇಶದ ಪ್ರಜೆಗಳು ಅಲ್ಲವಾ, ಅಥವಾ ಇವರಿಗೆ ಮತದಾನದ ಹಕ್ಕು ಇಲ್ಲವೇ. ಇವರು ಮತ ಹಾಕುವುದಿಲ್ಲವೇ.ಯಾಕೆಂದರೆ ಈ ವರ್ಗದ ಕಾರ್ಮಿಕರ ಮೇಲೆ ಯಾಕಿಂತ ತಾತ್ಸರ ಮನೋಭಾವ ಎಂದು ಪತ್ರಿಕಾ ಹೇಳಿಕೆಯಲ್ಲಿ  ದಿನೇಶ್ ನಾಯರ್‌ ಕೇಳಿದ್ದಾರೆ.

ಸರಕಾರಿ ಬಸ್ ನವರು ಪ್ರತಿಭಟನೆ ಮಾಡಿ ಬಸ್ ಚಲಾಯಿಸಿದೇ ಇರುವಾಗ ಜನರ ಸಂಕಷ್ಟಕ್ಕೆ ನಾವುಗಳು ಸ್ಪಂದಿಸಿದೆವು. ಅದರೆ ನಮ್ಮ ಸಂಕಷ್ಟಕ್ಕೆ ಆ ದೇವರು ಸಹ ಬರಲಿಲ್ಲ.ಪ್ರತಿ ದಿನ ಹಾಲು ದಿನಪತ್ರಿಕೆ ಹಳ್ಳಿಗಳ ಮೂಲೆ ಮೂಲೆಗೆ ತಲುಪಿಸುವುದು ಇದೇ ಖಾಸಗಿ ಬಸ್ ನವರು .ನಾವುಗಳು ಒಳ್ಳೆಯ ಸಮಯದಲ್ಲಿ ತುಂಬಾ ಜನರಿಗೆ ರಕ್ತ ದಾನದಿಂದ ಹಿಡಿದು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿರುತ್ತೆವೆ.‌ ಅದರೆ ಈ ಸಂದರ್ಭದಲ್ಲಿ ಬೇರೆಯವರಿಗೆ ಹೋಗಿ ನಮಗೆ ನಮ್ಮನ್ನೆ ಸುಧಾರಿಸಿ ಕೊಳ್ಳಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ನಮ್ಮನ್ನು ಸಹ ಗಮನಹರಿಸಬೇಕಾಗಿ, ನಮ್ಮ ಸಂಘದ 1500 ರ ಕ್ಕಿಂತಲೂ ಹೆಚ್ಚಿರುವ ಸದಸ್ಯರು ಹಾಗೂ ಅವರ ಕುಟುಂಬದ ಪರವಾಗಿ ಕೇಳಿಕೊಳ್ಳುತ್ತೆನೆ ಎಂದು ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ದಿನೇಶ್ ನಾಯರ್ ಸರಕಾರವನ್ನು ಆಗ್ರಹಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,