ಗೋಣಿಕೊಪ್ಪ ಸುತ್ತಮುತ್ತಲಿನಲ್ಲಿ 170ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾನವೀಯತೆ ಮೆರದ ಜಿಲ್ಲಾ ಪಂಚಾಯತ್ ಸದಸ್ಯ ಸಿ ಕೆ ಬೋಪಣ್ಣ
ಕೊರೊನ ಮಹಾಮಾರಿ ಹಿನ್ನಲೆ ರಾಜ್ಯದಲ್ಲಿ ಲಾಕ್ ಡೌನ್ ಆಗಿರುವ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗೋಣಿಕೊಪ್ಪ ಜಿಲ್ಲಾ ಪಂಚಾಯತ್ ಸದಸ್ಯ ಸಿ ಕೆ ಬೋಪಣ್ಣನವರು ಗೋಣಿಕೊಪ್ಪಲು ಸುತ್ತ ಮುತ್ತಲಿನಲ್ಲಿ ಸೋಂಕಿತರ ಕುಟುಂಬಕ್ಕೂ ಹಾಗೂ ಆಶಾ ಕಾರ್ಯಕರ್ತರು ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರು ಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ 170ಕ್ಕೂ ಹೆಚ್ಚು ಆಹಾರ ಕಿಟ್ ಗಳನ್ನು ವಿತರಿಸಿದ್ದಾರೆ.
ಹಾಗೆ ಅರುವತ್ತೊಕ್ಲು ಸುತ್ತಮುತ್ತಲಿನಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ.
ಗೋಣಿಕೊಪ್ಪಲುವಿನಲ್ಲಿ ಹಲವಾರು ಸಮಾಜ ಸೇವೆ ಮಾಡುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಬೋಪಣ್ಣನವರು ಕಳೆದ ವರ್ಷವೂ ಹಲವಾರು ಬಡ ಕುಟುಂಬಗಳಿಗೆ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಈ ವರ್ಷವೂ ಕೂಡ ತಮ್ಮ ಸೇವೆ ಬಡವರಿಗೆ ತಮ್ಮ ಕೈಯ್ಯಲ್ಲಿ ಆಗುವ ಸಹಾಹಯವನ್ನು ಮಾಡಿರುತ್ತಾರೆ.
ಈ ಸಂದರ್ಭ ಗೋಣಿಕೊಪ್ಪಲುವಿನ ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹಕೀಮ್ ಸೌಮ್ಯ ಬಾಲು ರತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಸಾಜಿ ತಸ್ಲೀಮ್ ಉಪಸ್ಥಿತರಿದ್ದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network