ಕೊರೊನ ತಡೆಗಟ್ಟಲು ಫೀಲ್ಡ್ ಗಿಳಿದ ಶ್ರೀಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಜ್ಜಾಮಾಡ ಜಯನವರ ತಂಡ.
ಲಸಿಕೆ ಪಡೆಯಲು ತಾವು ಖುದ್ದಾಗಿ ಹೋಗಿ ಕಾಲೋನಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು.
ಶ್ರೀಮಂಗಲ ಮಿಲ್ ಪೈಸಾರಿಗೆ ಶ್ರೀಮಂಗಲ ಪಂಚಾಯತಿ ಅಧ್ಯಕ್ಷ ಅಜ್ಜಾಮಾಡ ಜಯ ಅವರು ಭೇಟಿ ನೀಡಿ ಕಡ್ಡಾಯವಾಗಿ ಎಲ್ಲಾ ಕುಟುಂಬದವರು ಕೊರೊನಾ ವ್ಯಾಕ್ಸಿನೇಷನ್ ಮಾಡಲು ಮನವಿ ಮಾಡಿದರು.
ಹಾಗೆ ಇನ್ನೆರಡು ದಿನಗಳಲ್ಲಿ ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟಿನ ವ್ಯಾಪಾರಸ್ಥರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಕೊಳ್ಳಬೇಕು ಕೊರೊನಾ ಪರೀಕ್ಷೆ ಮಾಡಿಕೊಳ್ಳದಿದ್ದಲ್ಲಿ ಅಂತವರ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ.
ಹಾಗೆ ಆಟೊ ಚಾಲಕರು, ಟ್ಯಾಕ್ಸಿ ಚಾಲಕರು ಕಡ್ಡಾಯ ಕೊರೊನಾ ಪರೀಕ್ಷೆ ಮಾಡಿಕೊಳ್ಳಬೇಕು ಕಳೆದ ನಾಲ್ಕು ದಿನದಿಂದ ಶ್ರೀಮಂಗಲ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿರುದಿಲ್ಲ ಹೀಗೆ ಜನರು ಸರಕಾರದ ನಡೆಗೆ ಸ್ಪಂದಿಸುತ್ತಿದ್ದರೆ ಶ್ರೀಮಂಗಲ ಪಂಚಾಯತಿಯನ್ನು ಕೊರೊನಾ ಮುಕ್ತ ಪಂಚಾಯತಿ ಮಾಡಬಹುದು ಹಾಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ಶ್ರೀಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಜ್ಜಾಮಾಡ ಜಯನವರ ತಂಡ ಮನವಿ ಮಾಡಿದೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network