Header Ads Widget

ಸರ್ಚ್ ಕೂರ್ಗ್ ಮೀಡಿಯ

ರಸಗೊಬ್ಬರ ಸಹಾಯಧನ ಹೆಚ್ಚಿಸುವ ರೈತರ ಪರವಾದ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರ

ರಸಗೊಬ್ಬರ ಸಹಾಯಧನ ಹೆಚ್ಚಿಸುವ ರೈತರ ಪರವಾದ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರ



ರಸಗೊಬ್ಬರ ದರ ಕುರಿತಂತೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದರುರಸಗೊಬ್ಬರ ದರದ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಪ್ರಾತ್ಯಕ್ಷಿಕೆಯನ್ನು ಅವರಿಗೆ ನೀಡಲಾಯಿತು.

ಫಾಸ್ಪರಿಕ್ ಆಮ್ಲಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿರುವುದರ ಪರಿಣಾಮವಾಗಿ ರಸಗೊಬ್ಬರಗಳ ದರ ಹೆಚ್ಚಳ ಕಂಡಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತುಅಂತರಾಷ್ಟ್ರೀಯ ದರ ಏರಿಕೆಯ ನಡುವೆಯೂ ರೈತರು ಹಿಂದಿನ ದರದಲ್ಲೇ ರಸಗೊಬ್ಬರ ಪಡೆಯಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಡಿಎಪಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ 500 ರೂ.ಗಳಿಂದ 1200 ರೂ.ಗೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಯಿತುಇದು ಪ್ರತಿಶತ 140ರಷ್ಟು ಹೆಚ್ಚಳವಾಗಿದೆಡಿಎಪಿಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದಾಗ್ಯೂಅದನ್ನು ಹಳೆಯ ದರದಲ್ಲಿ ಅಂದರೆ 1200ರೂ.ಗೆಮಾರಾಟ ಮಾಡಲು ನಿರ್ಧರಿಸಲಾಯಿತು ಮತ್ತು ಕೇಂದ್ರ ಸರ್ಕಾರ  ದರ ಏರಿಕೆಯ ಸಂಪೂರ್ಣ ಹೊರೆಯನ್ನು ಹೊರಲು ನಿರ್ಧರಿಸಿತುಹಿಂದೆಂದೂ ಇಷ್ಟು ದೊಡ್ಡ  ಪ್ರಮಾಣದಲ್ಲಿ ಪ್ರತಿ ಚೀಲದ ಸಬ್ಸಿಡಿಯನ್ನು ಹೆಚ್ಚಿಸಲಾಗಿರಲಿಲ್ಲ

ಕಳೆದ ವರ್ಷಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ 1700 ಇತ್ತುಇದರಲ್ಲಿ ಕೇಂದ್ರ ಸರ್ಕಾರ 500 ರೂಸಹಾಯಧನ ನೀಡುತ್ತಿತ್ತುಹೀಗಾಗಿ ಕಂಪನಿಗಳು ರಸಗೊಬ್ಬರವನ್ನು ಪ್ರತಿ ಚೀಲಕ್ಕೆ 1200 ರೂ.ನಂತೆ ಮಾರಾಟ ಮಾಡುತ್ತಿದ್ದವು.

ಇತ್ತೀಚೆಗೆಡಿಎಪಿಯಲ್ಲಿ ಬಳಸಲಾಗುವ ಫಾಸ್ಫರಿಕ್ ಆಮ್ಲಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯವಾಗಿ ಶೇ.60ರಿಂದ 70ರಷ್ಟು ಹೆಚ್ಚಳವಾಯಿತುಹೀಗಾಗಿ ಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ ಈಗ 2400 ರೂಆಗಿದ್ದುರಸಗೊಬ್ಬರ ಕಂಪನಿಗಳನ್ನು ಅದನ್ನು ಸರ್ಕಾರದ 500 ರೂಸಹಾಯಧನ ಕಡಿತದ ಬಳಿಕ 1900 ರೂ.ಗೆ ಮಾರಾಟ ಮಾಡಬೇಕಾಗಿತ್ತುಆದರೆ ಇಂದಿನ ನಿರ್ಧಾರದಿಂದಾಗಿ ರೈತರು ಡಿಎಪಿಯನ್ನು ಪ್ರತಿ ಚೀಲಕ್ಕೆ 1200 ರೂ.ಗೆ ಪಡೆಯಲಿದ್ದಾರೆ.

 ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ  ಮತ್ತು ರೈತರು ಬೆಲೆ ಏರಿಕೆಯ ಭೀತಿಯನ್ನು ಎದುರಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂ.ಗಳನ್ನು ಪ್ರತಿ ವರ್ಷ ರಾಸಾಯನಿಕ ಗೊಬ್ಬರಗಳ ಮೇಲಿನ ಸಹಾಯಧನಕ್ಕೆ ವೆಚ್ಚ ಮಾಡುತ್ತದೆಡಿಎಪಿಯ ಸಹಾಯಧನ ಹೆಚ್ಚಳದೊಂದಿಗೆ ಭಾರತ ಸರ್ಕಾರವು ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು  ಮುಂಗಾರು ಹಂಗಾಮಿನಲ್ಲಿ ಸಬ್ಸಿಡಿ ರೂಪದಲ್ಲಿ ವೆಚ್ಚ ಮಾಡುತ್ತದೆ.

ನೇರವಾಗಿ ರೈತರ ಖಾತೆಗಳಿಗೆ ಪಿ.ಎಂಕಿಸಾನ್ ಅಡಿಯಲ್ಲಿ ಅಕ್ಷಯ ತೃತೀಯದ ದಿನ 20,667 ಕೋಟಿ ರೂ.ವರ್ಗಾವಣೆ ಮಾಡಿದ ಬಳಿಕ ಇದು ರೈತರ ಹಿತದೃಷ್ಟಿಯಿಂದ ಕೈಗೊಂಡಿರುವ ಎರಡನೇ ಪ್ರಮುಖ ನಿರ್ಧಾರವಾಗಿದೆ,


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network