ಮಳೆಗಾಲ ಹಿನ್ನಲೆ ಮುಂಜಾಗೃತಾ ಕ್ರಮ; ನಗರಸಭೆ ಬಿಜೆಪಿ ಸದಸ್ಯರಿಂದ ಮಡಿಕೇರಿ ಪೌರಾಯುಕ್ತರ ಜೊತೆ ಚರ್ಚೆ.
ಮಡಿಕೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಸದಸ್ಯರು ಇಂದು ನಗರಸಭೆಯ ಪೌರಯುಕ್ತರನ್ನು ಭೇಟಿಯಾಗಿ ಮಳೆಗಾಲ ಪ್ರಾರಂಭಕ್ಕೆ ಮುಂಚಿತವಾಗಿ ನಗರದಲ್ಲಿ ಆಗ ಬೇಕಾದ ಅಗತ್ಯ ಕೆಲಸದ ಬಗ್ಗೆ ವಿವರಿಸಿದರು .
ನಗರದ ಎಲ್ಲಾ ಕಡೆ ಚರಂಡಿ ಶುಚಿಗೊಳಿಸಿ ಕಾಡು ಕಡೆಯುದು ನೀರು ಸರಾಗವಾಗಿ ಹರಿಯಲು ಕೋಲು ಚರಂಡಿ ವ್ಯವಸ್ಥೆ ಮಾಡುವುದು ,
ಕಾವೇರಿ ಲೇಔಟ್. ಟಿ ಜಾನ್ ಲೇಔಟ್. ಮುಳಿಯ ಲೇಔಟ್ ಪ್ರಕೃತಿ ಲೇಔಟ್‍ಗಳಲ್ಲಿ ಮಳೆ ಗಾಲದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸಿದ್ದು ಚಾಮುಂಡೇಶ್ವ ನಗರ , ಇಂದಿರಾ ನಗರ , ಮಂಗಳ ದೇವಿ ನಗರದ ನಿವಾಸಿಗಳ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಇವರಿಗೆ ಬದಲಿ ವ್ಯವಸ್ಥೆ ಮಾಡುವುದು ನಗರದ ಪ್ರತಿ ವಾರ್ಡ್‍ಗಳಿಗೆ ಮಳೆಗಳಾದ ತಯಾರಿ ಬಗ್ಗೆ ವಿಶೇಷ ಗಮನ ಹರಿಸುವುದು , ನಗರಸಭೆಯಲ್ಲಿ ಈ ಕೆಲಸಗಳಿಗೆ ಸಿಬ್ಬಂದಿ ಕೊರತೆ ಆಗದಂತೆ ನೋಡಿಕೊಳ್ಳುದು ಸೇರಿದಂತೆ ನಗರದ ಅನೇಕ ಸಮಸ್ಯೆಗಳ ಬಗ್ಗೆ ಪೌರಯುಕ್ತರು ಗಮನ ಹರಿಸುವಂತೆ ನಗರಸಭಾ ಸದಸ್ಯರ ನಿಯೋಗ ಸೂಚಿಸಿದಾಗ ನಾಳೆಯೇ ಸಭೆ ಕರೆಯುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ ಕೆ.ಎಸ್. ರಮೇಶ್. ಅರುಣ್ ಶೆಟ್ಟಿ ಉಮೇಶ್ ಸುಬ್ರಮಣಿ ಅಪ್ಪಣ್ಣ ಎಸ್.ಸಿ.ಸತೀಶ್ ಹಾಜರಿದ್ದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network