Header Ads Widget

Responsive Advertisement

ಮಡಿಕೇರಿ ನಗರ ಬಿ.ಜೆ.ಪಿ ಯುವ ಮೋರ್ಚಾದಿಂದ ಮಕ್ಕಳಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ವಿತರಣೆ




ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಅಧಿಕಾರ ಸ್ವೀಕರಿಸಿ 7 ವರ್ಷ ಪೂರೈಸಿರುವ ಸಂದರ್ಭ, ಕೊರೋನ ಮಹಾಮಾರಿ ಇರುವುದರಿಂದ ವಿಜೃಂಭಣೆ ರಹಿತವಾಗಿ ಆಚರಿಸುವುದರಿಂದ ಇಂದು ಮಡಿಕೇರಿ ನಗರ ಬಿ.ಜೆ.ಪಿ ಯುವಮೋರ್ಚಾದ ವತಿಯಿಂದ ಕೊಡಗು ಜಿಲ್ಲಾ ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ, ಹೊಸ ಬಡಾವಣೆ ಮಡಿಕೇರಿ, ಇಲ್ಲಿ ವಾ‌ಸ್ತವ್ಯವಿರುವ ಮಕ್ಕಳಿಗಾಗಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಗಳನ್ನು ವಿತರಿಸಲಾಯಿತು. ಮಡಿಕೇರಿ ನಗರ ಬಿ.ಜೆ.ಪಿ ಯುವ ಮೋರ್ಚದ ಅಧ್ಯಕ್ಷರಾದ ನವೀನ್‌ ಪೂಜಾರಿ ಅವರ ನೇತೃತ್ವದಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ಬಾಲ ನ್ಯಾಯ ಮಂಡಳಿಯ ಸಿಬ್ಬಂಧಿಗಳಾದ ಸುರಾಜ್‌ ಮತ್ತು ನಾಗಭೂಷಣ್‌ ಅವರ ಮೂಲಕ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭ ಯುವ ಮೋರ್ಚಾದ ಕಾರ್ಯಕರ್ತರಾದ ವಿಘ್ನೇಶ್‌, ರಕ್ಷಿತ್‌, ವಿವೇಕ್‌ ನರೇನ್‌, ಕಾರ್ತಿಕ್‌, ಸುಚೇತ್‌, ಚೇತನ್‌ ಹಾಗು ಅರುಣ್‌ ರವರು ಉಪಸ್ಥಿತರಿದ್ದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,