ಡಿಡಿ ಇಂಟರ್ನ್ಯಾಷನಲ್ ಚಾನೆಲ್ ಆರಂಭಕ್ಕೆ ದೂರದರ್ಶನ ನಡೆಸುತ್ತಿದೆ ಸಿದ್ಧತೆ
ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನ (ಡಿಡಿ)ವು ಬಿಬಿಸಿ ವರ್ಲ್ಡ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ವಾಹಿನಿಯನ್ನು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ನಡೆಸುತ್ತಿದೆ.
ಜಾಗತಿಕವಾಗಿ ಭಾರತದ ಕುರಿತಾದಂತೆ ಕೇಳಿ ಬರುವ ಟೀಕೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ಸಲುವಾಗಿ ಈ ವಾಹಿನಿಯನ್ನು ಆರಂಭ ಮಾಡುವುದಾಗಿ ಡಿಡಿ ತಿಳಿಸಿದೆ. ಜಾಗತಿಕ ವಿಚಾರಗಳನ್ನು ನೀಡುವ ಮತ್ತು ಭಾರತೀಯ ನೀತಿ ನಿರೂಪಣೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ‘ಡಿಡಿ ಇಂಟರ್ನ್ಯಾಷನಲ್’ ವಾಹಿನಿ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಹಿನಿಗಳನ್ನು ಆರಂಭಿಸುವಲ್ಲಿ ನೈಪುಣ್ಯತೆ ಪಡೆದಿರುವ ಸಂಸ್ಥೆಗಳು, ವ್ಯಕ್ತಿಗಳನ್ನು ಬಳಸಿಕೊಳ್ಳುವತ್ತಲೂ ಡಿಡಿ ಚಿಂತನೆ ನಡೆಸಿದೆ. ಇದಕ್ಕಾಗಿ ಬಿಡ್ಡಿಂಗ್ ಸಹ ಆಹ್ವಾನಿಸಲಾಗಿದ್ದು, ವಿಜೇತರಿಂದ ವಿಸ್ತೃತ ವರದಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ ಎಂದು ಡಿಡಿ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅವಹೇಳನ ಹೆಚ್ಚಾದ ಬೆನ್ನಲ್ಲೇ ಡಿಡಿ ಇಂತಹ ಒಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network