Header Ads Widget

Responsive Advertisement

ಖಾಸಗಿ ಪ್ರಯೋಗಾಲಯ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಸಭೆ

ಖಾಸಗಿ ಪ್ರಯೋಗಾಲಯ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಸಭೆ


ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಕೋವಿಡ್ 19 ಸಂಬಂಧ ‘ಗಂಟಲು ಮಾದರಿ ದ್ರವ’ ಸಂಗ್ರಹಿಸುವಲ್ಲಿ ಜಿಲ್ಲೆಯ ಖಾಸಗಿ ಪ್ರಯೋಗಾಲಯದ(ಲ್ಯಾಬ್)  ಪ್ರತಿನಿಧಿಗಳ ಜೊತೆ ಸಭೆ ನಡೆಯಿತು.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಅಧ್ಯಕ್ಷತೆಯಲ್ಲಿ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.   

ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿಯೂ ಕೊರೊನಾ ವೈರಸ್ ಹರಡುತ್ತಿರುವುದರಿಂದ ತಮ್ಮ ತಮ್ಮ ಲ್ಯಾಬ್‍ಗಳಲ್ಲಿ ಕೋವಿಡ್ 19 ಸಂಬಂಧ ಗಂಟಲು ಮಾದರಿ ದ್ರವ ಸಂಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಬೇಕಿದೆ. ಗಂಟಲು ಮಾದರಿ ದ್ರವ ಸಂಗ್ರಹಣೆ ಸಂಬಂಧ ಅಗತ್ಯ ಉಪಕರಣಗಳನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.    

ಜಿಲ್ಲೆಯ ಖಾಸಗಿ ಲ್ಯಾಬ್‍ಗಳು ಗಂಟಲು ಮಾದರಿ ದ್ರವ ಸಂಗ್ರಹಿಸಲು ಆಸಕ್ತಿ ಇರಬೇಕು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗಂಟಲು ಮಾದರಿ ದ್ರವ ಸಂಗ್ರಹಿಸುವಲ್ಲಿ ಸಾರ್ವಜನಿಕರಿಂದ ಹಣ ಪಡೆಯಬಾರದು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.  

ಈ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಸ್ವ್ಯಾಬ್ ತೆಗೆಯುವ ಖಾಸಗಿ ಸಂಸ್ಥೆಯಲ್ಲಿ ಸ್ಥಳಾವಕಾಶ ಇರಬೇಕು. ಅಂತಹ ಖಾಸಗಿ ಲ್ಯಾಬ್ ಅವರು ಮುಂದೆ ಬಂದಲ್ಲಿ ಕೋವಿಡ್ ಪರೀಕ್ಷೆಯ ಅಗತ್ಯ ಉಪಕರಣಗಳನ್ನು ಪೂರೈಸಲಾಗುವುದು ಎಂದರು. 

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಸ್ವ್ಯಾಬ್ ತೆಗೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು.  

ಜಿಲ್ಲೆಯಲ್ಲಿ 16 ಖಾಸಗಿ ಲ್ಯಾಬ್‍ಗಳಿದ್ದು, ಅವುಗಳಲ್ಲಿ 7 ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಗಂಟಲು ದ್ರವ ಮಾದರಿ ಸಂಗ್ರಹಿಸಲು ಸಭೆಯಲ್ಲಿ ಒಪ್ಪಿಕೊಂಡರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network