Header Ads Widget

Responsive Advertisement

ಕೊಡಗು ಜನ ಸಹಾಯ ಕೆಸಿವಿಟಿ ಹೆಲ್ಪ್ ಲೈನ್ ಆರಂಭ

ಕೊಡಗು ಜನ ಸಹಾಯ ಕೆಸಿವಿಟಿ ಹೆಲ್ಪ್ ಲೈನ್ ಆರಂಭ

ಪಾಲೆಮಾಡುವಿನಿಂದ ‘ಮೆಡಿಕಲ್ ಕಿಟ್’ ವಿತರಣೆಗೆ ಚಾಲನೆ



ಪೊನ್ನಂಪೇಟೆ, ಮೇ.25: ಕೊಡಗು ಜನ ಸಹಾಯ (ಕರ್ನಾಟಕ ಕೋವಿಡ್ ವಾಲೆಂಟೀರ್ ಟೀಮ್) ಹೆಲ್ಪ್ ಲೈನ್ ವತಿಯಿಂದ ಇದೇ ತಿಂಗಳ 27ರಿಂದ ಮೆಡಿಕಲ್ ಕಿಟ್ ವಿತರಣೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಪಾಲೆಮಾಡುವಿನ ಹಾಡಿಗಳು ಮತ್ತು ಬಡವರ್ಗಗಳಿಗೆ ‘ಮೆಡಿಕಲ್ ಕಿಟ್’ ವಿತರಣೆ ಮೂಲಕ ಈ ಕಾರುಣ್ಯ ಸೇವೆಗೆ ಚಾಲನೆ ನೀಡಲಾಗುವದು ಎಂದು ಕೆಸಿವಿಟಿಯ ಕೊಡಗು ಜಿಲ್ಲಾ ಸಂಯೋಜಕ ಜಿ.ಮೋಹನ್ ತಿಳಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ರಾಜ್ಯದ ೯೨ ವೈದ್ಯರ ತಂಡ ಕೆಸಿವಿಟಿ ಮೂಲಕ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಗೆ ಸೀಮಿತವಾಗಿ ಡಾ.ಅನಿರುದ್ಧ್ ಅವರು ( ಕೋವಿಡ್ ಪ್ಯಾಂಡಮಿಕ್ ತಜ್ಞರು) ಆನ್‌ಲೈನ್ ಆಪ್ತ ಸಮಾಲೋಚನೆಯಲ್ಲಿ ಜಿಲ್ಲೆಯ ರೋಗಿಗಳಿಗೆ ಅಗತ್ಯ ನೆರವು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಯಾವದೇ ಭಾಗದಿಂದ ಕೊರೋನಾ ಸೋಂಕಿತರು, ಹೋಮ್ ಐಸೋಲೇಶನ್‌ನಲ್ಲಿ ಇರುವವರು, ರ‍್ಯಾಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದವರು ಕರೆ ಮಾಡಿದ ಸಂದರ್ಭ ಅಗತ್ಯ ವೈದ್ಯರ ನೆರವು ಕಲ್ಪಿಸಲು ಸಹಾಯವಾಣಿ ಆರಂಭಿಸಲಾಗಿದೆ ಎಂದು ತಿಳಿಸಿದ ಮೋಹನ್ ಅವರು, ಕೊರೋನಾ ಸೋಂಕಿತರ ಬಡ ಕುಟುಂಬಗಳಿಗೆ ದಿನಸಿ ಹಾಗೂ ಮೆಡಿಕಲ್ ಕಿಟ್ ವಿತರಿಸಲು ಈಗಾಗಲೇ ತೀರ್ಮಾನಿಸಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು. 

ಕೊಡಗು ಜಿಲ್ಲೆಯ ಸಹಾಯವಾಣಿ ಕೆಸಿವಿಟಿ ಹೆಲ್ಪ್ ಲಿಂಕ್ ಗೆ ಕರೆ ಮಾಡುವವರು ತಾ.೨೭ ರಿಂದ ಈ ಕೆಳಗಿನ ಮೊಬೈಲ್‌ಗೆ ಕರೆ ಮಾಡಬಹುದು. ೯೯೭೨೩೪೬೧೦೯, ೯೪೮೩೮೬೨೯೦೦ ಹಾಗೂ ಕೊಡಗು ಜಿಲ್ಲೆಯ ಯಾವದೇ ರೋಗ ಲಕ್ಷಣ ಇರುವವರು ಸಹಾಯಕ್ಕಾಗಿ ೯೪೪೮೨೫೦೫೩೯, ೭೩೪೯೦೬೨೭೯೧, ೯೪೮೧೧೩೩೩೪೮ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಈ ವಿಶೇಷ ಯೋಜನೆಯ ಕೊಡಗು ಜಿಲ್ಲಾ ಸಂಯೋಜಕರಾಗಿ ಅಮೃತ್ ಶಶಿಕುಮಾರ್, ಪಡಿಕಲ್ ಕುಸುಮಾವತಿ ಚಂದ್ರಶೇಖರ್, ಎಂ.ಸುನೀಲ್,ಪುಳಿಂಜನ ಪೂವಯ್ಯ ಹಾಗೂ ಗೋಣಿಕೊಪ್ಪಲು ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ  ಟಿ.ಎಲ್.ಶ್ರೀನಿವಾಸ್ ಮುಂತಾದವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿ.ಮೋಹನ್ ಅವರು ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network