Ad Code

Responsive Advertisement

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಮ್ಮತ್ತಿ ಶಾಖೆಯು ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಮ್ಮತ್ತಿ ಶಾಖೆಯು ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ


ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಮ್ಮತ್ತಿ ಶಾಖೆಯ ಬಾಡಿಗೆ ಕಟ್ಟಡದಿಂದ ಬ್ಯಾಂಕು ಅಮ್ಮತ್ತಿ ಪಟ್ಟಣದಲ್ಲಿ ಸ್ವಂತ ಕಟ್ಟಡವನ್ನು ಬ್ಯಾಂಕಿನ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾದ ಕೊಡಂದೇರ ಪಿ.ಬಾಂಡ್ ಗಣಪತಿ ಅವರು ಸಾಂಕೇತಿಕವಾಗಿ ಶುಕ್ರವಾರ ಉದ್ಘಾಟಿಸಿದರು.

ಬ್ಯಾಂಕ್ ಒಟ್ಟು 21 ಶಾಖೆಯನ್ನು ಹೊಂದಿದ್ದು, ಪ್ರಸ್ತುತ ಅಮ್ಮತ್ತಿ ಶಾಖೆಯ ಸ್ವಂತ ಕಟ್ಟಡದೊಂದಿಗೆ ಒಟ್ಟು ಬ್ಯಾಂಕಿನ 11 ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಶಾಖಾ ಕಟ್ಟಡದಲ್ಲಿ ಎಟಿಎಂ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕಿನ ಭದ್ರತಾ ಕೊಠಡಿಯನ್ನು ಬ್ಯಾಂಕಿನ ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ನಗದು ಕೌಂಟರನ್ನು ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್ ಹಾಗೂ ಶಾಖಾ ವ್ಯವಸ್ಥಾಪಕರ ಕೊಠಡಿಯನ್ನು ಬ್ಯಾಂಕಿನ ಸಿಇಒ ಎಚ್. ಬಾಲಶೇಖರ್ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಕೆ.ಕೆ.ಪೂವಯ್ಯ ಅವರು ಉದ್ಘಾಟಿಸಿದರು.
ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಬ್ಯಾಂಕಿನ ನಿರ್ದೇಶಕರಾದ ಅಪ್ಪಚೆಟ್ಟೋಳಂಡ ಕೆ.ಮನುಮುತ್ತಪ್ಪ, ನಿರ್ದೇಶಕರಾದ ಕಿಮ್ಮುಡೀರ ಎ.ಜಗದೀಶ್, ಅಪೆಕ್ಸ್ ಬ್ಯಾಂಕಿನ ನಾಮ ನಿರ್ದೇಶಕರಾದ ಕೆ.ಅರುಣ್ ಭೀಮಯ್ಯ, ಬ್ಯಾಂಕಿನ ಕೇಂದ್ರ ಕಚೇರಿ ಅಧಿಕಾರಿಗಳು ಮತ್ತು ಅಮ್ಮತ್ತಿ ಶಾಖಾ ವ್ಯವಸ್ಥಾಪಕಿ ಎಚ್.ಪಿ ಲೌಲಿ ಹಾಗೂ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ನೂತನ ಶಾಖಾ ಕಟ್ಟಡದಲ್ಲಿ ಗ್ರಾಹಕರು ಜೂನ್ 1 ರಿಂದ ವ್ಯವಹರಿಸಬಹುದಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,