Header Ads Widget

ಸರ್ಚ್ ಕೂರ್ಗ್ ಮೀಡಿಯ

ಕರಿಮೆಣಸಿನ ಸುಧಾರಿತ ತಳಿಗಳು

ಕರಿಮೆಣಸಿನ ಸುಧಾರಿತ ತಳಿಗಳು



ಐ.ಸಿ.ಎ.ಆರ್-ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕಲ್ಲಿಕೋಟೆಯಿಂದ ಬಿಡುಗಡೆಯಾದ ತಳಿಗಳು:

ಶ್ರೀಕರ ಮತ್ತು ಶುಭಕರ:

ಶ್ರೀಕರ ಮತ್ತು ಶುಭಕರ ಕರಿಮುಂಡದಿಂದ ಆಯ್ಕೆಯಾಗಿದ್ದು, ಎರಡೂ ಉತ್ತಮ ಒಲಿಯೋರೆಸಿನ್ ಮತ್ತು ಉತ್ತಮ ಎಣ್ಣೆಯೊಂದಿಗೆ ಉತ್ತಮ ಇಳುವರಿ ನೀಡುವ ತಳಿಗಳು, ಈ ತಳಿಗಳನ್ನು ಸಾಮಾನ್ಯವಾಗಿ ಅಡಿಕೆ ತೋಟಗಳಲ್ಲಿ ಬೆಳೆಸಲಾಗುತ್ತದೆ. ಭಾರತದ ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾದ ತಳಿಗಳಾಗಿವೆ. 

ಪಿಎಲ್‌ಡಿ (ಪಾಲೋಡ್)-2: 

ಪಿಎಲ್‌ಡಿ (ಪಾಲೋಡ್)-2 ತಳಿಯನ್ನು ಕೊಟ್ಟನಾಡನ್ ತಳಿಯಿಂದ ಆಯ್ಕೆ ಮಾಡಲಾಗಿದೆ, ಈ ತಳಿಯು ತಡವಾಗಿ ಪಕ್ವವಾಗುವ ತಳಿಯಾಗಿದೆ ಹಾಗೂ ಮೆಣಸಿನ ಒಲಿಯೋರೆಸಿನ್ ಮತ್ತು ತೈಲ ಉತ್ಪಾದನೆಗೆ ಸುಕ್ತವಾದ ತಳಿ. ಕರಾವಳಿ/ಬಯಲು ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾದ ತಳಿಯಾಗಿದೆ. 

ಪಂಚಮಿ:

ಪಂಚಮಿ ತಳಿಯನ್ನು ಐಂಪಿರಿಯನ್ ತಳಿಯಿಂದ ಆಯ್ಕೆಮಾಡಲಾಗಿದೆ, ಹೆಚ್ಚು ನೆರಳು ಬಯಸುವ ತಳಿಯಾಗಿದೆ. ಈ ತಳಿಯು ತಡವಾಗಿ ಪಕ್ವಕ್ಕೆ ಬರುವ ತಳಿಯಾಗಿದೆ. ಈ ತಳಿಯ ಕೊತ್ತುಗಳು ತಿರುಚಲ್ಪಟ್ಟಿರುತ್ತವೆ ಹಾಗೂ ಐದು ಸಾಲುಗಳಲ್ಲಿ ಕಾಳುಗಳನ್ನು ಹೊಂದಿರುತ್ತವೆ. 

ಪೌರ್ಣಮಿ:

ಪೌರ್ಣಮಿ ತಳಿಯು ಒಟ್ಟಪ್ಲಾಕಲ್-1 ನಿಂದ ಆಯ್ಕೆಮಾಡಲಾದ ತಳಿಯಾಗಿದೆ. ಈ ತಳಿಯು ಬೇರುಗಂಟು ಹುಳಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ತಳಿಯಲ್ಲಿ ಕಾಳುಗಳು ದಪ್ಪನಾಗಿದ್ದು ಸಡಿಲವಾಗಿ ಕಾಳುಗಳನ್ನು ಕಟ್ಟುತ್ತದೆ.

ಐಐಎಸ್‌ಆರ್-ತೇವಮ್: 

ಐಐಎಸ್‌ಆರ್-ತೇವಮ್ ತಳಿಯನ್ನು ತೇವಮುಂಡಿಯಿಂದ ಆಯ್ಕೆ ಮಾಡಲಾಗಿದೆ, ಸ್ಥಿರವಾಗಿ ಬೆಳೆಯುವ ಸ್ಥಿರ ಇಳುವರಿ ನೀಡುವ ತಳಿ ಮತ್ತು ಫೈಟೊಪ್ತೋರಾ (ಕೊಳೆ ರೋಗ) ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಭಾರತದ ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ. 

ಐಐಎಸ್‌ಆರ್- ಶಕ್ತಿ: 

ಐಐಎಸ್‌ಆರ್- ಶಕ್ತಿ ತಳಿಯು ಪೆರಾಂಬ್ರಾಮುಂಡಿಯ ಓಪನ್ ಪರಾಗಸ್ಪರ್ಶದ ಸಂತತಿ. ಫೈಟೊಪ್ತೊರಾಕ್ಕೆ ಸಹಿಷ್ಣುತೆ ಹಾಗೂ ಹೆಚ್ಚಿನ ಒಣ ಚೇತರಿಕೆಯೊಂದಿಗೆ (40-42%) ಮಧ್ಯಮ ಇಳುವರಿ ನೀಡುವ ತಳಿ. ಭಾರತದ ಎಲ್ಲಾ ಮೆಣಸು ಬೆಳೆಯುವ ಪ್ರದೇಶಳಿಗೆ ಸೂಕ್ತವಾಗಿದೆ. 

ಐಐಎಸ್‌ಆರ್-ಮಲಬಾರ್‌ಎಕ್ಸಲ್ ಮತ್ತು ಐಐಎಸ್‌ಆರ್-ಗಿರಿಮುಂಡ: 

ಎರಡು ಹೈಬ್ರಿಡ್‌ಗಳಾದ ಐಐಎಸ್‌ಆರ್-ಮಲಬಾರ್‌ಎಕ್ಸಲ್ (ಚೋಲಮುಂಡಿ x ಪನ್ನಿಯೂರ್-1) ಮತ್ತು ಐಐಎಸ್‌ಆರ್-ಗಿರಿಮುಂಡ (ನಾರಾಯಕೋಡಿ x ನೀಲಮುಂಡಿ) ಉತ್ತಮ ಇಳುವರಿ ನೀಡುವ ಹೈಬ್ರಿಡ್‌ಗಳಾಗಿವೆ. ಎಲೆ ಚುಕ್ಕೆ ರೋಗ ಸಮಸ್ಯೆಯಿರುವ ಎತ್ತರದ ಪ್ರದೇಶಗಳನ್ನು ಒಳಗೊಂಡಂತೆ ಭಾರತದ ಎಲ್ಲಾ ಮೆಣಸು ಪ್ರದೇಶಗಳಿಗೆ ಶಿಫಾರಸ್ಸು ಮಾಡಲಾಗಿದೆ. 

ಅರ್ಕಾ ಕೂರ್ಗ್ ಎಕ್ಸಲ್:

ಅರ್ಕಾ ಕೂರ್ಗ್ ಎಕ್ಸಲ್, ಕರ್ನಾಟಕದ ಚಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಯೋಗಿಕ ಕೇಂದ್ರದಲ್ಲಿ ಅಭಿವ್ರದ್ದಿ ಪಡಿಸಿದ ತಳಿಯಾಗಿದೆ. ದಪ್ಪನೆಯ ಕಾಳುಗಳನ್ನು ಹೊಂದಿರುವ ಉದ್ದನೆಯ ಕೊತ್ತುಗಳನ್ನು ಹೊಂದಿ ಹೆಚ್ಚಿನ ಇಳುವರಿ ನೀಡುವ ತಳಿ.


ಪೆಪ್ಪರ್ ರಿಸರ್ಚ್ ಸ್ಠೇಶನ್, ಪಣಿಯೂರ್ ಕೇರಳ ಕೃಷಿ ವಿಶ್ವವಿಧ್ಯಾನಿಲಯ ದಿಂದ ಬಿಡುಗಡೆಯಾದ ತಳಿಗಳು. 

ಪಣಿಯೂರ್-1: 

ಪಣಿಯೂರ್-1 (ಉತಿರಂಕೊಟ್ಟ x ಚೆರಿಯಕಾನಿಯಕಡಾನ್) ಹೆಚ್ಚಿನ ಇಳುವರಿ ನಿಡುವ ಹೈಬ್ರಿಡ್, ಅಧಿಕ ಒಲಿಯೋರೆಸಿನ್ ಉದ್ದನೆಯ ಕೊತ್ತು ಮತ್ತು ದಪ್ಪ ಕಾಯಿಗಳನ್ನು ಹೊಂದಿದೆ ಆದರೆ ಎರಡು ವರ್ಷಗಳಿಗೊಮ್ಮೆ ಆರ್ಥಿಕ ಇಳುವರಿ ನೀಡುತ್ತದೆ. ವಿಶಾಲ ಭೌಗೊಳಿಕ ಸ್ಥಳಗಳಿಗೆ ಹೊಂದಿಕೊಳ್ಳುತ್ತದೆ ಹಾಗೂ ನೆರಳಿನಲ್ಲಿ ಉತ್ತಮ ಇಳುವರಿಯನ್ನು ನೀಡುವುದಿಲ್ಲ.

ಪಣಿಯೂರ್-2:

ಪಣಿಯೂರ್-2, ಬಾಲಂಕೊಟ್ಟದ ಸಂತತಿಯಾಗಿದೆ, ನೆರಳಿನಲ್ಲಿ ಉತ್ತಮ ಇಳುವರಿಯನ್ನು ನೀಡುತ್ತದೆ. ಇದು ಹೆಚ್ಚಿನ ಒಲಿಯೊರೆಸಿನ್, ಹೆಚ್ಚು ಪೈಪರಿನ್ ಹೊಂದಿದೆ. 

ಪಣಿಯುರ್-3: 

ಪಣಿಯುರ್-3 (ಉತಿರಂಕೊಟ್ಟ x ಚೆರಿಯಂಕಣಿಯಕಡಾನ್), ತಡವಾಗಿ ಪಕ್ವವಾಗುವುದು, ಎಲ್ಲಾ ಮೆಣಸು ಬೆಳೆಯುವ ಪ್ರದೇಶಕ್ಕೆ ಸೂಕ್ತವಾಗಿದೆ, ಕಡಿಮೆ ನೆರಳಿರುವ ಜಾಗಗಳಲ್ಲಿ ಉತ್ತಮ ಇಳುವರಿಯನ್ನು ನೀಡುತ್ತದೆ, ಉದ್ದವಾದ ಕೊತ್ತುಗಳಲ್ಲಿ ದಪ್ಪ ಕಾಯಿಗಳನ್ನು ಹೊಂದಿದೆ. 

ಪಣಿಯುರ್-4:

ಪಣಿಯುರ್-4, ಎಂಬುದು ಕುತಿರಾವಲ್ಲಿಯಿಂದ ಆಯ್ಕೆ ಮಾಡಲಾಗಿದೆ, ಸ್ಥಿರ ಇಳುವರಿ ನೀಡುತ್ತದೆ, ಪ್ರತಿಕೂಲ ಸ್ಥಿತಿಯಲ್ಲಿಯೂ ಸಹ ಉತ್ತಮ ಇಳುವರಿಯನ್ನು ನೀಡುತ್ತದೆ. 

ಪಣಿಯೂರ್-5: 

ಪಣಿಯೂರ್-5 ಏಕಬೆಲೆ ಮತ್ತು ತೆಂಗಿನ/ಅಡಿಕೆ ತೋಟಗಳಲ್ಲಿ ಮಿಶ್ರ ಬೆಳೆಗೂ ಸೂಕ್ತವಾದ ತಳಿಯಾಗಿದ್ದು ಪೆರುಂಕೋಡಿ ತಳಿಯಿಂದ ಆಯ್ಕೆ ಮಾಡಲಾಗಿದೆ. 

ಪಣಿಯುರ್-6:

ಪಣಿಯುರ್-6 ತಳಿಯು ಕರಿಮುಂಡಾದಿಂದ ಆಯ್ಕೆ ಮಾಡಲಾಗಿದೆ, ಕಡಿಮೆ ನೀರಿರುವ ಹಾಗೂ ಹವಮಾನ ಏರುಪೇರಿನ ಪರಿಸ್ಥಿರಿಯಲ್ಲಿಯೂ ಸ್ಥಿರ ಇಳುವರಿಯನ್ನು ನೀಡುತ್ತದೆ. ತೆರೆದ ಸ್ಥಿತಿ ಮತ್ತು ಭಾಗಶಃ ನೆರಳಿಗೆ ಸೂಕ್ತವಾಗಿದೆ. 

ಪಣಿಯುರ್-7: 

ಪಣಿಯುರ್-7 ತಳಿಯನ್ನು ಕಲ್ಲವಲ್ಲಿಯಿಂದ ಆಯ್ಕೆ ಮಾಡಲಾಗಿದೆ. ನಿಯಮಿತ ಇಳುವರಿ ನೀಡುವ ಉದ್ದನೆಯ ಕೊತ್ತುಗಳನ್ನು ಹೊಂದಿ ಹೆಚ್ಚಿನ ಪೈಪೆರಿನ್ (5.6%) ಹೊಂದಿದೆ. 

ಪಣಿಯುರ್-8: ‌

ಪಣಿಯರ್-8 ತಳಿಯು ಪಣಿಯುರ್-6 ಮತ್ತು ಪಣಿಯುರ್-5 ತಳಿಗಳ ನಡುವಿನ ಹೈಬ್ರಿಡ್, ನೆರಳಿನ ಜಾಗಗಳಿಗೆ ಹೊಂದಿಕೊಳ್ಳುತ್ತದೆ ಹಾಗೂ ತಡವಾಗಿ ಪಕ್ವಕ್ಕೆ ಬರುತ್ತದೆ. 

ಪಣಿಯುರ್-9: 

ಪಣಿಯುರ್-9 ಎಂಬುದು ಪಣಿಯುರ್-3 ನಿಂದ ಮುಕ್ತ ಪರಾಗಸ್ಪರ್ಶದ ಸಂತತಿಯಾಗಿದ್ದು. ಕಾಳಿನ ಉತ್ತಮ ಲಕ್ಷಣಗಳು ಮತ್ತು ಗುಣಮಟ್ಟವನ್ನು ಹೊಂದಿರುವ ಕಡಿಮೆ ನೀರಿರುವ ಪ್ರದೇಶಗಳಿಗೆ ಹೊಂದಿಕೊಳ್ಳುವ ತಳಿಯಾಗಿದೆ. 

ವಿಜಯ:

ವಿಜಯ ತಳಿಯು ಪಣಿಯುರ್-2 x ನೀಲಮುಂಡಿ ನಡುವಿನ ಹೈಬ್ರಿಡ್, ಈ ತಳಿಯು ಹೆಚ್ಚಿನ ಇಳುವರಿ ನೀಡುತ್ತದೆ.


✍️.... ಡಾ: ಶಿವಕುಮಾರ್ ಎಂ.ಎಸ್ ಮತ್ತು ಡಾ: ಅಂಕೇಗೌಡ ಎಸ್.ಜೆ

ಐ.ಸಿ.ಎ.ಆರ್-ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಮಡಿಕೇರಿ, ಕೊಡಗು, ಕರ್ನಾಟಕ spices.rsa@icar.gov.in


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,