Header Ads Widget

Responsive Advertisement

ಹಸಿರು ಪರಿಸರ ನಿರ್ಮಾಣ ಸಾಮಾಜಿಕ ಹೊಣೆಗಾರಿಕೆಯಾಗಲಿ; ವಿ.ಬಾಡಗ ಬಿಜೆಪಿ ಬೂತ್ ಸಮಿತಿ ವತಿಯಿಂದ ಪರಿಸರ ದಿನಾಚರಣೆ

ಹಸಿರು ಪರಿಸರ ನಿರ್ಮಾಣ ಸಾಮಾಜಿಕ ಹೊಣೆಗಾರಿಕೆಯಾಗಲಿ; ವಿ.ಬಾಡಗ ಬಿಜೆಪಿ ಬೂತ್ ಸಮಿತಿ ವತಿಯಿಂದ ಪರಿಸರ ದಿನಾಚರಣೆ

( ಗಿಡ ನೆಟ್ಟ ಸಂದರ್ಭ )

ಪೊನ್ನಂಪೇಟೆ, ಜೂ.14: ಜಾಗತಿಕ ತಾಪಮಾನ ಏರುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಅತಿ ಮಹತ್ವವಾಗಿದೆ. ಮನುಷ್ಯನ ದೈನಂದಿನ ಆರೋಗ್ಯಪೂರ್ಣವಾದ ಬದುಕು ಗುಣಮಟ್ಟದಿಂದ ಕೂಡಿದ ಸುತ್ತಲಿನ ಹಸಿರು ಪರಿಸರವನ್ನು ಅವಲಂಬಿಸಿದೆ.  ಈ ಕಾರಣದಿಂದಾದರೂ ಸಮೃದ್ಧ ಹಸಿರು ಪರಿಸರ ನಿರ್ಮಾಣ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಬೇಕು ಎಂದು ಕೊಡಗು ಜಿ. ಪಂ, ಮಾಜಿ ಉಪಾಧ್ಯಕ್ಷರಾದ, ವಕೀಲೆ ಕಂಜಿತಂಡ ಅನಿತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಟ್ಟಂಗಾಲ ಸಮೀಪದ ವಿ.ಬಾಡಗ ಬಿಜೆಪಿ ಬೂತ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸ್ಥಳೀಯವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸುತ್ತಮುತ್ತಲಿನ ಪರಿಸರದ ಪ್ರತಿಯೊಂದು ಗಿಡವೂ ಕೂಡ ಅದರದೇ ಆದ ಮಹತ್ವವನ್ನು ಹೊಂದಿದೆ. ಮನುಷ್ಯನಿಗೆ ಅತಿ ಅಗತ್ಯವಾಗಿ ಬೇಕಾಗಿರುವ ಆಮ್ಲ ಜನಕ ಉತ್ಪಾದಿಸುವಲ್ಲಿ ಮರಗಿಡಗಳ ಅಗೋಚರ ಪಾತ್ರ ಇದೀಗ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜವಾಬ್ದಾರಿಯೊಂದಿಗೆ ನೆಡುವ ಪ್ರತಿ ಗಿಡವು ಮುಂದೆ ಅದು ಮನುಷ್ಯನ ಬದುಕಿಗೆ ಪೂರ್ವಕವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಕುಪ್ಪಂಡ ದಿಲನ್  ಬೋಪಣ್ಣ, ಮನುಷ್ಯ ಇಂದು ತನ್ನ ಇಷ್ಟಾರ್ಥ ಪೂರೈಕೆಗಾಗಿ ಪರಿಸರ ಸಂರಕ್ಷಣೆಯ ಹೆಚ್ಚು ಗಮನ ಹರಿಸುತ್ತಿಲ್ಲ. ಪರಿಸರ ಉಳಿದರೆ ಮಾತ್ರ ಮನುಷ್ಯನ ಬದುಕು ಹಸನಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಅಭಿಪ್ರಾಯಪಟ್ಟರಲ್ಲದೆ, ಇದೀಗ ಕೃಷಿ ಚಟುವಟಿಕೆಗಳ ಭಾಗವಾಗಿ ತೋಟಗಳಿಗೆ ಸಿಂಪಡಿಸುವ ಕಳೆನಾಶಕ  ಹಸಿರು ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿದೆ. ಆದ್ದರಿಂದ ತೀರಾ ಅಪಾಯಕಾರಿಯಾಗಿರುವ ಕಳೆನಾಶಕವನ್ನು ಬೆಳೆಗಾರರು ತ್ಯಜಿಸುವಂತಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಎರವರ ಅಕ್ಕಚ್ಚಿ ಮತ್ತು ವಿರಾಜಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ ಅಮ್ಮುಣಿಚಂಡ  ರಂಜಿ ಪೂಣಚ್ಚ ಅವರು ಗಿಡವೊಂದನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಬಳಿಕ ಗ್ರಾಮದ ಮಹಾವಿಷ್ಣು ದೇವಸ್ಥಾನ, ಕಮ್ಮಟ್ಟಪ್ಪ ಕುದುರೆ ಪುಂಡ ಅಂಬಲ ಮತ್ತು ವಿ.ಬಾಡಗದ  ಚಾಮುಂಡಿ ದೇವನೆಲೆಯಲ್ಲಿ ವಿವಿಧ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಜಾತಿಯ ನೂರಕ್ಕೂ ಹೆಚ್ಚು ಗಿಡಗಳನ್ನು ಸಾಮೂಹಿಕವಾಗಿ ಅದನ್ನು ಉಳಿಸಿ ಬೆಳೆಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿ. ಪಂ. ಮಾಜಿ ಸದಸ್ಯ ಅಪ್ಪಂಡೇರಂಡ  ಭವ್ಯ ಚಿಟ್ಯಣ್ಣ,  ವಿ.ಬಾಡಗ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಕುಪ್ಪಂಡ  ಮೋಹನ್ ಮೊಣ್ಣಪ್ಪ.  ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಯ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷರಾದ ಮಚ್ಚಾರಂಡ ಪ್ರವೀಣ್, ಪಕ್ಷದ ಪ್ರಮುಖರಾದ ಮುಲ್ಲೆಂಗಡ  ನಟ್ಟು ನಾಚಪ್ಪ, ಕೋಲತಂಡ ಸುಬ್ರಮಣಿ, ನಂಬುಡುಮಾಡ ಮುದ್ದಪ್ಪ, ಕೊಂಗಂಡ ಅಚ್ಚಯ್ಯ, ಅಮ್ಮುಣಿಚಂಡ ರೋಹಿತ್, ತೀತಿಮಾಡ ಈಶ್ವರ, ಕುಪ್ಪಂಡ ನಾಣಯ್ಯ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಹಾಜರಿದ್ದರು.

 
ಚಿತ್ರ-ಸುದ್ಧಿ: ✍️....ರಫೀಕ್ ತೂಚಮಕೇರಿ


( ರಫೀಕ್ ತೂಚಮಕೇರಿ )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,