ಕೊರೊನಾದ ಎರಡನೇ ಅಲೆ ಪ್ರಭಾವ ನಿಯಂತ್ರಣಕ್ಕೆ ಬರುತ್ತಿದ್ದರೂ ನಾವು ಮೈ ಮರೆತು ಓಡಾಡುವ ಹಾಗಿಲ್ಲ
ಕೊರೊನಾದ ಎರಡನೇ ಅಲೆ ಪ್ರಭಾವ ನಿಯಂತ್ರಣಕ್ಕೆ ಬರುತ್ತಿದ್ದರೂ, ನಾವು ಮೈ ಮರೆತು ಓಡಾಡುವ ಹಾಗಿಲ್ಲ. ಕೊರೊನಾ ಮೂರನೇ ಅಲೆಯ ಸಾಧ್ಯತೆ ಹೆಚ್ಚಾಗಿದ್ದು, ಜನತೆ ಸದಾ ಜಾಗೃತೆ ವಹಿಸುವುದು ಅತೀ ಅವಶ್ಯಕವಾಗಿದೆ. ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಎರಡನೇ ಅಲೆಯಂತೆಯೇ ಇರುತ್ತದೆ. ಸಾವಿನ ಸಂಖ್ಯೆ ತಗ್ಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಅಬ್ಬರದಿಂದ ದೇಶ ತತ್ತರಿಸುತ್ತಿರುವಾಗ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಘವನ್ ಸಂಚಲನದ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 3ನೇ ಅಲೆ ಯಾವಾಗ? ಹೇಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಅದರ ಅಪಾಯ ಇರುವುದಂತೂ ಸತ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮೂರನೇ ಅಲೆಯಿಂದ ವೈರಸ್ ಮತ್ತಷ್ಟು ರೂಪಾಂತರಗೊಂಡು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅಲೆಗಳು ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ. ಹೊಸ ರೂಪಾಂತರಿ ವೈರಸ್ ಎದುರಿಸಲು ಲಸಿಕೆ ಸಿದ್ದವಾಗಿರಿಸಿಕೊಳ್ಳಬೇಕು ಎಂದು ವಿಜಯರಾಘವನ್ ಸಲಹೆ ನೀಡಿದ್ದಾರೆ. ಆದರೆ ಲಭ್ಯವಿರುವ ಲಸಿಕೆ ಪ್ರಸ್ತುತ ರೂಪಾಂತರಿ ವೈರಸ್ ವಿರುದ್ದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
"ಕೋವಿಡ್ -19 ಸಾಂಕ್ರಾಮಿಕದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ತೋರಿಸಲು ಭಾರತದಿಂದ ಅಥವಾ ಜಾಗತಿಕವಾಗಿ ಯಾವುದೇ ವಿವರಗಳು ಇಲ್ಲ.” ಎಂದು ಪಿಐಬಿ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕೋವಿಡ್ -19 ಕುರಿತ ಮಾಧ್ಯಮಗೋಷ್ಠಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಈ ವಿಷಯವನ್ನು ತಿಳಿಸಿದ್ದಾರೆ.
ಭಾರತದ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಮತ್ತು ಆಸ್ಪತ್ರೆಗಳಲ್ಲಿ ದಾಖಲಾದ 60% ರಿಂದ 70% ಮಕ್ಕಳು ಬಹು ಖಾಯಿಲೆಗಳಿದ್ದವರು ಅಥವಾ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದವರು ಎಂದು ಡಾ. ಗುಲೇರಿಯಾ ಉಲ್ಲೇಖಿಸಿದ್ದಾರೆ; ಆರೋಗ್ಯವಂತ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲದೆ ಸೌಮ್ಯ ಕಾಯಿಲೆಯಿಂದ ಚೇತರಿಸಿಕೊಂಡರು ಎಂದು ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಭವಿಷ್ಯದ ಅಲೆಗಳನ್ನು ತಡೆಗಟ್ಟುವಲ್ಲಿ ಕೋವಿಡ್ ಸೂಕ್ತ ವರ್ತನೆ ಮುಖ್ಯವಾಗಿದೆ:
ಯಾವುದೇ ಸಾಂಕ್ರಾಮಿಕ ರೋಗದಲ್ಲಿ ಅಲೆಗಳು ಏಕೆ ಸಂಭವಿಸುತ್ತವೆ ಎಂದು ಏಮ್ಸ್ ನಿರ್ದೇಶಕರು ಈ ರೀತಿ ವಿವರಿಸಿದ್ದಾರೆ. ಉಸಿರಾಟದ ವೈರಾಣುಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳಲ್ಲಿ ಅಲೆಗಳು ಸಾಮಾನ್ಯವಾಗಿ ಸಂಭವಿಸುತ್ತವೆ; 1918 ರ ಸ್ಪ್ಯಾನಿಷ್ ಜ್ವರ, ಎಚ್ 1 ಎನ್ 1 (ಹಂದಿ) ಜ್ವರ ಉದಾಹರಣೆಗಳಾಗಿವೆ ಎಂದು ಡಾ. ಗುಲೇರಿಯಾ ಹೇಳಿದರು. "1918 ರ ಎರಡನೇ ಅಲೆ ಸ್ಪ್ಯಾನಿಷ್ ಜ್ವರ ದೊಡ್ಡದಾಗಿತ್ತು, ಅದರ ನಂತರ ಸಣ್ಣ ಮೂರನೇ ಅಲೆ ಇತ್ತು." ಮತ್ತು ನಮಗೆ ತಿಳಿದಂತೆ, ಎಸ್ ಎ ಆರ್ ಎಸ್-ಸಿಒವಿ-2 ಒಂದು ಉಸಿರಾಟದ ವೈರಸ್ ಎಂದು ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಸುಲಭವಾಗಿ ತುತ್ತಾಗುವ ಜನಸಂಖ್ಯೆ ಇರುವಾಗ ಬಹು ಅಲೆಗಳು ಸಂಭವಿಸುತ್ತವೆ. ಜನಸಂಖ್ಯೆಯ ಬಹುಪಾಲು ಭಾಗವು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ವೈರಸ್ ಸ್ಥಳೀಯವಾಗಿ ಪರಿಣಮಿಸುತ್ತದೆ ಮತ್ತು ಸೋಂಕು ಋತುವಿಗೆ ತಕ್ಕಂತೆ ಆಗುತ್ತದೆ, ಉದಾಹರಣೆಗೆ H1N1 ನಂತೆ ಸಾಮಾನ್ಯವಾಗಿ ಮಾನ್ಸೂನ್ ಅಥವಾ ಚಳಿಗಾಲದಲ್ಲಿ ಹರಡುತ್ತದೆ.
ವೈರಸ್ ನ ಬದಲಾವಣೆಯಿಂದಾಗಿ ಅಲೆಗಳು ಸಂಭವಿಸಬಹುದು (ಉದಾಹರಣೆಗೆ ಹೊಸ ರೂಪಾಂತರಗಳು) ಹೊಸ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗುವುದರಿಂದ, ವೈರಸ್ ಹರಡಲು ಹೆಚ್ಚಿನ ಅವಕಾಶವಿರುತ್ತದೆ. ಅಲೆಯ ಹಿಂದಿನ ಒಂದು ಕಾರಣವೆಂದರೆ ಮಾನವರ ನಡವಳಿಕೆ ಎಂದು ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಡಾ. ಗುಲೇರಿಯಾ ಹೀಗೆ ಎಚ್ಚರಿಸುತ್ತಾರೆ:
“ಪ್ರಕರಣಗಳು ಹೆಚ್ಚಾದಾಗ, ಜನರಲ್ಲಿ ಭಯವಿರುತ್ತದೆ ಮತ್ತು ಮಾನವರ ನಡವಳಿಕೆಯು ಬದಲಾಗುತ್ತದೆ. ಜನರು ಕೋವಿಡ್ ಅನ್ನು ಕಟ್ಟುನಿಟ್ಟಾಗಿ ಸೂಕ್ತ ನಡವಳಿಕೆಗಳನ್ನು ಅನುಸರಿಸಿದರೆ ಮತ್ತು ಔಷಧವಿಲ್ಲದ ಕಾರ್ಯಗಳು ವೈರಾಣು (ವೈರಸ್) ಪ್ರಸರಣ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ. ಆದರೆ ಅನ್ಲಾಕ್ ಮಾಡುವಾಗ, ಜನರು ಹೆಚ್ಚು ಸೋಂಕು ಸಂಭವಿಸುವುದಿಲ್ಲ ಎಂದು ಭಾವಿಸುತ್ತಾರೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದಿಲ್ಲ. ಈ ಕಾರಣದಿಂದಾಗಿ, ವೈರಸ್ ಮತ್ತೆ ಸಮುದಾಯದಲ್ಲಿ ಹರಡಲು ಪ್ರಾರಂಭಿಸುತ್ತದೆ, ಇದು ಮತ್ತೊಂದು ಅಲೆಗೆ ಕಾರಣವಾಗುತ್ತದೆ. ” ಎಂದು ಡಾ.ರಂದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.
ನಾವು ಮುಂದಿನ ಅಲೆಗಳನ್ನು ನಿಲ್ಲಿಸಬೇಕಾದರೆ, ನಮ್ಮ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಲಸಿಕೆ ಹಾಕಲಾಗಿದೆ ಅಥವಾ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಹೇಳುವವರೆಗೂ, ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ ಎಂದು ಡಾ.ರಂದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ. “ಸಾಕಷ್ಟು ಜನರಿಗೆ ಲಸಿಕೆ ಹಾಕಿದಾಗ ಅಥವಾ ಸೋಂಕಿನ ವಿರುದ್ಧ ನಾವು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ಈ ಅಲೆಗಳು ನಿಲ್ಲುತ್ತವೆ. ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದೊಂದೇ ಮಾರ್ಗವಾಗಿದೆ”. ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network