Header Ads Widget

Responsive Advertisement

ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ಉಚಿತ ಆಂಬುಲೆನ್ಸ್ ಕೊಡುಗೆ ನೀಡಿದ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ. ಎಸ್ . ಪೊನ್ನಣ್ಣ

ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ಉಚಿತ ಆಂಬುಲೆನ್ಸ್ ಕೊಡುಗೆ ನೀಡಿದ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ  ಎ.ಎಸ್. ಪೊನ್ನಣ್ಣ



✍️ವರದಿ: ಶರಫುದ್ದೀನ್ ಗೋಣಿಕೊಪ್ಪ.

ಗೋಣಿಕೊಪ್ಪಲು : ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ ಎಸ್ ಪೊನ್ನಣ್ಣ ನವರು ಇಂದು ಉಚಿತ ಆಂಬುಲೆನ್ಸ್ ಕೊಡುಗೆಯನ್ನು ತಾಲ್ಲೂಕು ವೈದ್ಯಾಧಿಕಾರಿಯಾದ  ಡಾಕ್ಟರ್ ಯತಿರಾಜ್ ರವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ದ್ರುವ ನಾರಾಯಣ್ ರವರ ಸಮುಖದಲ್ಲಿ ಆಂಬುಲೆನ್ಸ್ ಆಸ್ತಾಂತರ ಮಾಡಲಾಯಿತು.

ಈ ಒಂದು ಉಚಿತ ಆಂಬುಲೆನ್ಸ್ ಸೇವೆಯನ್ನು ಈ ಬಾಗದ  ಸಾರ್ವಜನಿಕರು ಉಪಯೋಗಿಸಿಕೊಳ್ಳಲು ಪೊನ್ನಣ್ಣ ರವರು ಮನವಿ ಮಾಡಿದ್ದಾರೆ. ಅಲ್ಲದೆ ಕೊರೊನ ಸೋಂಕಿತರಿಗೆ  ಆಕ್ಸಿಜನ್ ಕ್ಯಾಂಸೆಂಟೇಟರ್ ಕೂಡ  ಲಭ್ಯವಿರುತದೆ.

ಎ. ಎಸ್. ಪೊನ್ನಣ್ಣ ನವರು ಕಳೆದ ವರ್ಷಗಳಿಂದ ಕೊರೊನ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಹಲವು ಕುಟುಂಬಗಳಿಗೆ ಈಗಾಗಲೇ ಹಲವು ಜನ ಸೇವೆ ಮಾಡುತಿದ್ದು, ಈ ನಿಟ್ಟಿನಲ್ಲಿ ಗೋಣಿಕೊಪ್ಪ ಆಸ್ಪತ್ರೆಗೆ ಉಚಿತ ಆಂಬುಲೆನ್ಸ್ ಕೊಡೆಗೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಈ ದಿನ  ಉಚಿತ ಆಂಬುಲೆನ್ಸ್ ಸೇವೆಯನ್ನು ವಿರಾಜಪೇಟೆ ಆರೋಗ್ಯ ಕೇಂದ್ರಕ್ಕು ಹಾಗೂ ನಾಪೋಕ್ಲು ಅರೋಗ್ಯ ಕೇಂದ್ರಕ್ಕು ನೀಡಲಿದ್ದೇವೆ ಎಂದು ಪೊನ್ನಣ್ಣನವರು ತಿಳಿಸಿದ್ದಾರೆ.

ಈ ಸಂದರ್ಭ  ಕೆಪಿಸಿಸಿ ಕಾರ್ಯಾಧ್ಯಕ್ಷ ದೃವ ನಾರಾಯಣ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷವು ಬಡವರ ಪರವಾಗಿದ್ದು ರಾಜ್ಯದ ಎಲ್ಲಡೆ ಕಾಂಗ್ರೆಸ್ ಪಕ್ಷವು ಹಲವು ಜನಸೇವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಳಪ್ಪಾಡ್ ರವರು ರಾಜ್ಯದ ಎಲ್ಲಾ ಕಡೆ ಉಚಿತ ಆಂಬುಲೆನ್ಸ್ ಸೇವೆಯನ್ನ ನೀಡಿದ್ದಾರೆ ಕೊಡಗಿನಲ್ಲೂ ಕೂಡ ಯುವ ಕಾಂಗ್ರೆಸ್ ವತಿಯಿಂದ ಉಚಿತ ಆಂಬುಲೆನ್ಸ್ ಈಗಾಗಲೇ ನೀಡಿರುತ್ತಾರೆ ಹಾಗೆ ಕಾಂಗ್ರೆಸ್ ಕೇರ್ ಎಂಬ ನಾಮದಲ್ಲಿಯೂ ಕೂಡ ರಾಜ್ಯದ ಹಲವು ಆಸ್ಪತ್ರೆಗೆ 200ಕ್ಕೂ ಹೆಚ್ಚು ಉಚಿತ ಆಂಬುಲೆನ್ಸ್ ಸೇವೆಯನ್ನು ಕಾಂಗ್ರೆಸ್ ಪಕ್ಷವು ನೀಡುತ್ತಿದ್ದೇವೆ, ಕಾಂಗ್ರೆಸ್ ಪಕ್ಷವು ಸದಾ ಕಾಲ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಪಕ್ಷವಾಗಿರುತ್ತದೆ ಎಂದು ದ್ರುವ ನಾರಾಯಣ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ವೀಣಾ ಅಚಯ್ಯ ಮಾತನಾಡಿ ಕರ್ನಾಟಕ ಸರ್ಕಾರ ಕೋವಿಡ್ ನಿಯತ್ರದಲ್ಲಿ ಸಂಪೂರ್ಣ ವಿಫಲವಾಗಿದೆ ಕಾಂಗ್ರೆಸ್ ಪಕ್ಷವು ಜನಪರ ಕೆಲಸ ಮಾಡಲು ಮಾನ್ಯ ಸಿದ್ದರಾಮಯ್ಯ ನವರು ಹಾಗು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಪಕ್ಷದ ಮುಖಂಡರಿಗೆ ಆದೇಶ ಮಾಡಿದ್ದಾರೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಆಯಾ ಬಾಗದಲ್ಲಿ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ  ಅಧ್ಯಕ್ಷರಾದ ಎ ಎಸ್ ಪೊನ್ನಣ್ಣ ನವರು ಗೋಣಿಕೊಪ್ಪ ಆರೋಗ್ಯ ಕೇಂದ್ರಕ್ಕು ವಿರಾಜಪೇಟೆ ಹಾಗು ನಾಪೋಕ್ಲು ಆರೋಗ್ಯ ಕೇಂದ್ರಕ್ಕೆ ಉಚಿತ್ ಆಂಬುಲೆನ್ಸ್ ಸೇವೆಯನ್ನು ನೀಡಿದ್ದಾರೆ ಪೊನ್ನಣ್ಣನವರ ಈ ಸೇವೆ ಕೊರೊನ ಮಹಾಮಾರಿಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಅನುಕೂಲವಾಗುತ್ತದೆ ಉಚಿತ ಆಂಬುಲೆನ್ಸ್ ನೀಡಿದ ಪೊನ್ನಣ್ಣನವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ  ವೀಣಾ ಆಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ ಈ ನಮ್ಮ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಕೊರೊನ ಪೋಸಿಟ್ ಕೇಸ್ ಕಂಡುಬಂದಿತ್ತು ಹಾಗೆ ಸಾವುಗಳು ಕೂಡ ಸಂಭವಿಸಿತ್ತು  ಇಂಥ ಸಂದರ್ಭದಲ್ಲಿ ನಮ್ಮ ಸಮುದಾಯ ಕೇಂದ್ರಕೆ ಉಚಿತ ಆಂಬುಲೆನ್ಸ್ ನೀಡಿದ್ದು ಬಹಳ ಸಂತಸದ ವಿಷಯ ಅವಶ್ಯಕತೆ ಇರುವ ರೋಗಿಗಳಿಗೆ ಈ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ, ತಾಲೂಕಿನಲ್ಲಿ ಕೊರೊನ ತಡೆಗಟ್ಟಲು ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಬೇಕೆಗಿದೆ ಎಂದು ಯತಿರಾಜ್ ಮನವಿ ಮಾಡಿದರು. ಉಚಿತ ಆಂಬುಲೆನ್ಸ್ ನೀಡಿದ ಪೊನ್ನಣ್ಣ ನವರಿಗೆ ನಮ್ಮ ಇಲಾಖೆ ವತಿಯಿಂದ ತಾಲ್ಲೂಕು ವೈದ್ಯಾಧಿಕಾರಿ ಯತಿರಾಜ್  ಧನ್ಯವಾದಗಳನ್ನು ಅರ್ಪಿಸಿದ್ದರು.

ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದಿರೀರ ನವೀನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ಉಪಾಧ್ಯಕ್ಷ ಬಾಪು, ಸದಸ್ಯರಾದ ಅಬ್ದುಲ್ ಸಾಮದ್, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾರಿಸ್ ಕೊಳಕೇರಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸರಿತಾ ಪೂಣಚ್ಚ, ಪ್ರತ್ಯು, ಪಂಕಜ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಳ್ಳಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಕಾಲಿದ್, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ಸಂಪಾಜೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುಳಾ, ಸುಲೈಕ, ಶಾಹೀನ,  ಸವಿತ, ಡ್ಯಾನ್ ಸುಬ್ಬಯ್ಯ, ಧನಲಕ್ಷಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಜುನೈದ್,  ಡಿಸಿಸಿ ಸದಸ್ಯರಾದ ಸಂದೀಪ್, ಕೊಡಗು ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಗೋಣಿಕೊಪ್ಪಲು ಮಾಜಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಮೀರ್,  ಗೋಣಿಕೊಪ್ಪ ಕಾಂಗ್ರೆಸ್ ಪ್ರಮುಖರಾದ ಶಮ್ಮು ಕುಮಾರ,  ಶಿವ ಹಾಗೂ ಹಲವು ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಜರಿದ್ದರು.

✍️ವರದಿ: ಶರಫುದ್ದೀನ್ ಗೋಣಿಕೊಪ್ಪ.



( ಶರಫುದ್ದೀನ್ ಗೋಣಿಕೊಪ್ಪ)



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,