Header Ads Widget

Responsive Advertisement

ಅಮೆರಿಕಾದಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆ ತಲುಪಿದ 1,800 ಕೆಜಿ ತೂಕದ ವೈದ್ಯಕೀಯ ಉಪಕರಣಗಳು

ಅಮೆರಿಕಾದಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆ ತಲುಪಿದ 1,800 ಕೆಜಿ ತೂಕದ  ವೈದ್ಯಕೀಯ ಉಪಕರಣಗಳು

ಗೆಳೆತನದ ತೂಕ ಅದಕ್ಕಿಂತ ದೊಡ್ಡದು.!!! 

(ಅಮೇರಿಕಾದ ಸ್ಕೋಪ್ ಫೌಂಡೇಶನ್ ನಿಂದ ಕೊಡಗಿಗೆ  ಮಹತ್ವದ ಕೊಡುಗೆ.. )



ಅಮೇರಿಕಾದ ಸ್ಕೋಪ್ ಫೌಂಡೇಶನ್ ಮೂಲಕ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ 70 ಲಕ್ಷ ರು. ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳು ತಲುಪಿದ್ದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಫೌಂಡೇಷನ್ ಪರವಾಗಿ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಈ ಉಪಕರಣಗಳನ್ನು ಹಸ್ತಾಂತರಿಸಿದರು.

ಭಾರತ ದೇಶಕ್ಕೇ ಕೊಡಗು ಜಿಲ್ಲೆ ದೇಶಪ್ರೇಮದ ಕೇಂದ್ರ ಇದ್ದಂತೆ. ಫೀಲ್ಡ್ ಮಾಷ೯ಲ್ ಕಾಯ೯ಪ್ಪ, ಜನರಲ್ ತಿಮ್ಮಯ್ಯ ಅವರ ದೇಶಪ್ರೇಮ ಯಾರೂ ಮರೆಯಲಾಗದ್ದು. ಅಂಥ ಮಹಾನ್ ಸೇನಾಧಿಕಾರಿಗಳ ತವರು ನಾಡು ಕೊಡಗು ಕಾವೇರಿಯ ತವರೂರು ಕೂಡ ಹೌದು. ತಾನು ಮಂಡ್ಯದವನಾಗಿ ಕಾವೇರಿ ನೀರನ್ನು ಕುಡಿದಿರುವೆ. ಕಾವೇರಿ ನೀರಿಲ್ಲದಿದ್ದರೆ ಮಂಡ್ಯ ಬರಡು ಭೂಮಿಯಾಗಿರುತ್ತಿತ್ತು. ಕಾವೇರಿಯಿಂದಲೇ ಮಂಡ್ಯ ಹಸಿರಿನ ಸಮೖದ್ದ ನಾಡಾಗಿದೆ. ಹೀಗಾಗಿಯೇ ಮಂಡ್ಯದವನಾಗಿ ಕಾವೇರಿ ಋಣ ತೀರಿಸುವ ಪುಟ್ಟ ಪ್ರಯತ್ನವಾಗಿ ಕೊಡಗು ಜಿಲ್ಲೆಗೆ ವೈದ್ಯಕೀಯ ನೆರವನ್ನು ನೀಡುತ್ತಿರುವುದಾಗಿ  ಅಮೇರಿಕಾದ ಮಯಾಮಿ ದೇಶದಿಂದ   ಡಾ. ಹಲ್ಲಗೆರೆ ನರಸಿಂಹಮೂತಿ೯  ಪ್ರತಿಕ್ರಿಯಿಸಿದರು.

ಡಾ.ಹಲ್ಲಗೆರೆ ನರಸಿಂಹಮೂತಿ೯ ಅವರ ಮಗ  ಡಾ.ವಿವೇಕ್ ಮೂತಿ೯, ಪ್ರಸ್ತುತ ಅಮೇರಿಕಾದ ಆರೋಗ್ಯ ಸಚಿವಾಲಯದಲ್ಲಿ ಸಜ೯ನ್ ಜನರಲ್ ಆಗಿದ್ದಾರೆ!!  ಅಮೇರಿಕಾದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಡಾ.ವಿವೇಕ್ ಮೂತಿ೯ಯ ಪಾತ್ರ ಮಹತ್ವದ್ದಾಗಿದೆ.

ಕೊಡಗಿನಲ್ಲಿರುವ ಗೆಳೆಯ ಕೊಡ್ಲಿಪೇಟೆ ಮೂಲದ ರಾಜ್ಯದ ಹೆಸರಾಂತ ವಕೀಲ ಎಚ್.ಎಸ್.ಚಂದ್ರಮೌಳಿ ಕೋರಿಕೆಯ ಮೇರೆಗೆ  ವಿಳಂಭರಹಿತವಾಗಿ ಡಾ. ಮೂತಿ೯ ಸ್ಕೋಪ್ ಫೌಂಡೇಶನ್ ಮೂಲಕ ಕೊಡಗಿನ ಕೋವಿಡ್ ಆಸ್ಪತ್ರೆಗೆ ನೆರವಿನ ಉಪಕರಣಗಳನ್ನು ನೀಡಿದ್ದಾರೆ.  

ಮಡಿಕೇರಿಯ ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಆಯೋಜಿತ ಸರಳ ಕಾಯ೯ಕ್ರಮದಲ್ಲಿ ಸ್ಕೋಪ್ ಫೌಂಡೇಶನ್ ನಿಂದ ನೀಡಲ್ಪಟ್ಟ 95 ಸಾವಿರ ಕೆಎನ್. 95 ಮಾಸ್ಕ್, 5 ಲೀ ಸಾಮಥ್ಯ೯ದ 15 ಆಕ್ಸಿಜನ್ ಕಾನ್ಸ್ ಟ್ರೇಷನ್ ಗಳು, 12 ಸಾವಿರ  ತ್ರಿಲೇಯರ್ ಮಾಸ್ಕ್ ಗಳು, , 6,200 ಫೇಸ್ ಶೀಲ್ಡ್ ಗಳು, 25 ಥಮೋ೯ಮೀಟರ್, 25 ಟ್ಯೂಬ್ ಸ್ಪೆಪ್ ಡೌನ್ ಟ್ರಾನ್ಸ್ ಫರ್, 50 ವೈಪ್ಸ್ ಸೇರಿದಂತೆ 1800 ಕೆಜಿ ತೂಕವಿದ್ದ ವೈದ್ಯಕೀಯ ಉಪಕರಣಗಳನ್ನು  ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. 

ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ತಾನು ಮತ್ತು ಡಾ. ನರಸಿಂಹಮೂತಿ೯ ಆತ್ಮೀಯ ಗೆಳೆಯರಾಗಿದ್ದು ತನ್ನ ಕೋರಿಕೆಯನ್ನು ಮನ್ನಿಸಿ ಅಮೇರಿಕಾದದಿಂದ ಇಷ್ಟೊಂದು ದೊಡ್ಡ ನೆರವನ್ನು ನೀಡಿದ್ದಾರೆ.  ಗೆಳೆತನಕ್ಕೆ ಸಿಕ್ಕಿದ ಬಹಳ ದೊಡ್ಡ ಕೊಡುಗೆ ಇದಾಗಿದೆ ಎಂದರು.  ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈ  ಆಧುನಿಕ ವೈದ್ಯಕೀಯ ಉಪಕರಣಗಳು ಖಂಡಿತಾ ಸಹಕಾರಿಯಾಗುತ್ತದೆ ಎಂದೂ  ಚಂದ್ರಮೌಳಿ  ವಿಶ್ವಾಸದಿಂದ ನುಡಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್  , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ ಮಾತನಾಡಿ, ಸ್ಕೋಪ್ ಪೌಂಡೇಶನ್ ನ ನೆರವನ್ನು ಶ್ಲಾಘಿಸಿದರು.

ಕೊಡಗು ಜಿಲ್ಲೆಯ ಜನತೆಯ ಪರವಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ  ಸ್ಕೋಪ್  ಫೌಂಡೇಷನ್ ನ ಸವ೯ ದಾನಿಗಳಿಗೂ ಕೊಡಗಿನ ಜನತೆ ಅಬಾರಿಯಾಗಿದ್ದಾರೆ ಎಂದು  ಡಾ. ಹಲ್ಲಗೆರೆ ನರಸಿಂಹಮೂತಿ೯ ಅವರಿಗೆ ಕೖತಜ್ಞತೆ ಸಲ್ಲಿಸಿದರು.

ಮೈತ್ರಿ ನರಸಿಂಹಮೂತಿ೯, ಅರುಣ ಚಂದ್ರಮೌಳಿ ಕೂಡ ಈ ಸಂದಭ೯ ಮಾತನಾಡಿದರು. ಕಾಯ೯ಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾಯ೯ಪ್ಪ,  ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಆಡಳಿತಾಧಿಕಾರಿ ನಂಜುಂಡೇಗೌಡ, ಡಾ. ಮಂಜುನಾಥ್, ಡಾ. ರೂಪೇಶ್, ಡಾ. ಉದಯಕುಮಾರ್, ಜಿಲ್ಲಾ ಕಾಮಿ೯ಕ ಅಧಿಕಾರಿ ಅನಿಲ್   ಬಗಾಟಿ ಹಾಜರಿದ್ದರು.

ಬರಹ: ✍️.... ಅನಿಲ್ ಎಚ್.ಟಿ. 

( ಪತ್ರಕರ್ತರು )



( ಅನಿಲ್ ಎಚ್.ಟಿ. )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,