Header Ads Widget

ಸರ್ಚ್ ಕೂರ್ಗ್ ಮೀಡಿಯ

ಸದ್ದಿಲ್ಲದೆ ಸಮಾಜ ಸೇವಯಲ್ಲಿ ತೊಡಗಿಸಿಕೊಂಡ ಮೂರ್ನಾಡುವಿನ ಮೈಮಾ ಸಂಘಟನೆ

Search Coorg Media

Coorg's Largest Online Media Network

ಸದ್ದಿಲ್ಲದೆ ಸಮಾಜ ಸೇವಯಲ್ಲಿ ತೊಡಗಿಸಿಕೊಂಡ ಮೂರ್ನಾಡುವಿನ ಮೈಮಾ ಸಂಘಟನೆ



ಮೂರ್ನಾಡ್: ಕೊರೋನ ಮಹಾಮಾರಿಯ ನಡುವೆ ಇಲ್ಲಿನ ಮೈಮಾ ಸಂಘಟನೆಯು  ಪ್ರಚಾರ ಬಯಸದೆ ಸದ್ದಿಲ್ಲದೆ ಹಲವು ಜನಪರ ಸೇವೆ ಮಾಡುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೊರೋನ ಮಹಾಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬದವರಿಗೆ  ಆಹಾರ ಪದಾರ್ಥಗಳ ಕಿಟ್ ಹಾಗೂ ಹಲವು ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ, ಸೋಂಕಿತರಿಗೆ ಬೇಕಾಗಿರುವ ಅಗತ್ಯ ವಸ್ತುಗಳು ಹಾಗೆ ನಾನಾ ರೀತಿಯ ಸೇವೆಗಳನ್ನು ಮಾಡುತ್ತಾ ಜನರ ಸೇವೆ ಮಾಡುವ ಮೂಲಕ ಪ್ರಚಾರ ಬಯಸದೆ  ಮೈಮಾ ಸಂಘಟನೆಯ ಸದಸ್ಯರುಗಳೂ ಹಗಲು ರಾತ್ರಿ ಜನ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯದೊಂದಿಗೂ ಕೂಡ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಈವರೆಗೆ ಮೈಮಾ ಸಂಘಟನೆ ತಮ್ಮ ಊರಿನಲ್ಲಿ ಕೊರೋನ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ  ಬಡ ಕುಟುಂಬದವರಿಗೆ  ಬೇಕಾಗಿರುವ ಅಗತ್ಯ ವಸ್ತುಗಳು ಮತ್ತು ಅವರಿಗೆ ಬೇಕಾಗಿರುವ ಹಲವು ಸೇವೆಗಳನ್ನು ಮಾಡುತ್ತಾ ಬಂದಿದ್ದು, ಮುಂದೆಯೂ ಇದೇ ರೀತಿ ಮೈಮಾ ಸಂಘಟನೆ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರಿಗೆ ಸಹಾಯ ಮಾಡುತ್ತೇವೆ ಎಂದು ಮೈಮಾ ಸಂಘಟನೆಯ ಕಾರ್ಯದರ್ಶಿ ನಿಚ್ಚು ಮೂರ್ನಾಡ್ ರವರು ತಿಳಿಸಿದ್ದಾರೆ. 

ಕೊಡಗಿನಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಹಲವು ಅನಾವುತಗಳು ಸಂಭವಿಸಿತಿದ್ದೂ, ಇಂಥ ಸಂದರ್ಭದಲ್ಲಿ ಕೂಡ ಮೈಮಾ ಸಂಘಟನೆಯು ಎಚ್ಚತುಕೊಂಡು ಈ ಭಾಗದ ಜನರಿಗೆ ಸಹಾಯ ಮಾಡಲು ಈಗಾಗಲೇ ಯುವಕರ ತಂಡವನ್ನೇ ಕಟ್ಟಿ  ಕೊಂಡಿದ್ದಾರೆ. ಈ ಭಾಗದ ಜನರಿಗೆ ಯಾವುದೇ ಸಂದರ್ಭದಲ್ಲಿಯು ಕೂಡ ಸಹಾಯ ಅವಶ್ಯಕತೆ ಇದ್ದಲ್ಲಿ ಮೈಮಾ ಸಂಘಟನೆಯು ಸದಾ ಜನ ಸೇವೆಗೆ ಸಿದ್ದ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.


✍️ವರದಿ: ಶರಫುದ್ದೀನ್ ಗೋಣಿಕೊಪ್ಪ.


( ಶರಫುದ್ದೀನ್ ಗೋಣಿಕೊಪ್ಪ)



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,