Header Ads Widget

ಸರ್ಚ್ ಕೂರ್ಗ್ ಮೀಡಿಯ

ಸ್ನೇಹವನ್ನು ಸಾರ್ಥಕತೆಗೊಳಿಸಿದ ಹೆಚ್ .ಎಸ್. ಚಂದ್ರಮೌಳಿ

ಸ್ನೇಹವನ್ನು ಸಾರ್ಥಕತೆಗೊಳಿಸಿದ ಹೆಚ್ .ಎಸ್. ಚಂದ್ರಮೌಳಿ 


( ಹೆಚ್ .ಎಸ್. ಚಂದ್ರಮೌಳಿ )

ತಮ್ಮ ಸ್ನೇಹಿತನ ನೆರವನ್ನು ತನ್ನ ಜಿಲ್ಲೆಯ ಜನತೆಯ ಕಲ್ಯಾಣಕ್ಕೆ ಸದ್ಬಳಕೆ ಮಾಡುವ ಮೂಲಕ ಹೈಕೋರ್ಟ್ ಹಿರಿಯ ವಕೀಲರಾದ ಹೆಚ್ .ಎಸ್ .ಚಂದ್ರಮೌಳಿ ಸ್ನೇಹವನ್ನು ಸಾರ್ಥಕತೆ ಗೊಳಿಸಿದ್ದಾರೆ .

ಕೊವಿಡ್ ಎರಡನೇ ಅಲೆ ಕೊಡಗು ಜಿಲ್ಲೆಯಲ್ಲಿ ತೀವ್ರವಾಗಿ ಬಾಧಿಸಿದ ಸಂಧರ್ಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಚಂದ್ರಮೌಳಿಯವರು ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಸೌಲಭ್ಯಗಳನ್ನು ಪಟ್ಟಿಮಾಡಿ ತಮ್ಮ ಬಹುಕಾಲದ ಸ್ನೇಹಿತರಾದ  ಮಂಡ್ಯ ಮೂಲದ ಅಮೇರಿಕಾ ನಿವಾಸಿಗಳಾದ ಸ್ಕೋಪ್ ಫೌಂಡೇಶನ್ ಮುಖ್ಯಸ್ಥರಾದ ನರಸಿಂಹ ಮೂರ್ತಿ ಹಾಗೂ ಅವರ ಪುತ್ರ ಅಮೇರಿಕಾದ ಆರೋಗ್ಯ ಸಚಿವಾಲಯದ  ಉನ್ನತಾಧಿಕಾರಿಗಳಾದ ಡಾ.ವಿವೇಕ್ ಮೂರ್ತಿ  ಅವರಿಗೆ ತಲುಪಿಸಿ ದೂರವಾಣಿ ಮುಖೇನ ನೆರವಿಗಾಗಿ ವಿನಂತಿಸಿದರು.

ಚಂದ್ರಮೌಳಿ ಯವರ ಬಗ್ಗೆ ಅಪಾರ ಗೌರವ ಹೊಂದಿದ   ಮೂರ್ತಿ ಕುಟುಂಬ ತಕ್ಷಣವೇ ಸ್ಪಂದಿಸಿ ಕೊಡಗು ಜಿಲ್ಲೆ ವೈದ್ಯಕೀಯ ಸಂಸ್ಥೆಯ ಬೇಡಿಕೆ ಪಟ್ಟಿಯಲ್ಲಿದ್ದ ಸುಮಾರು ಎರಡು ಕೋಟಿ ರೂ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸಿ ತಮ್ಮ ಸ್ನೇಹಿತನ ಕೋರಿಕೆಗೆ ಮನ್ನಣೆ ನೀಡಿರುತ್ತಾರೆ .ಮುಂದಿನ ವಾರದಲ್ಲಿ ಇವು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರ ಗೊಳ್ಳುವ ಮೂಲಕ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಕೊಡಗು ಸನ್ನದವಾಗಿದೆ .

ಈ ಹಿಂದೆ ಕೂಡ ಸ್ಕೋಪ್ ಸಂಸ್ಥೆ ಚಂದ್ರಮೌಳಿ ಯವರ ಕೋರಿಕೆ ಮೇರೆಗೆ ಕೊಡಗು ಜಿಲ್ಲೆಯ ಜನತೆಗೆ ವೈದ್ಯಕೀಯ ನೆರವು ನೀಡಿದ್ದರು. ತಮ್ಮ ಸ್ನೇಹದ ನೆರವನ್ನು ಜಿಲ್ಲೆಯ ಜನತೆಯ ಕಲ್ಯಾಣಕ್ಕಾಗಿ ಬಳಸಿದ ಚಂದ್ರಮೌಳಿ ಯವರ ಕಾಳಜಿಗೆ ಕೊಡಗಿನ ಜನತೆಯ ಪರವಾಗಿ ಧನ್ಯವಾದಗಳು. ಹಾಗೆಯೇ ಎರಡು ಕೋಟಿ. ರೂ. ಗಳ ಬೃಹತ್ ಮೊತ್ತದ ಸಕಾಲಿಕ ನೆರವು ನೀಡಿರುವ ನರಸಿಂಹ ಮೂರ್ತಿ ಮತ್ತು ವಿವೇಕ್ ಮೂರ್ತಿಯವರಿಗೆ ನಾವುಗಳು ಅಭಾರಿಯಾಗಿದ್ದೇವೆ. ಕೊವಿಡ್ ಆಸ್ಪತ್ರೆಯಲ್ಲಿ ಕನಿಷ್ಠ ವೇತನದಲ್ಲಿ ಹೆಚ್ಚಿನ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ಆದಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ  ಯಾವುದೇ ಪ್ರಚಾರವಿಲ್ಲದೆ ಆರ್ಥಿಕ ನೆರವು ನೀಡಿರುವ  ಚಂದ್ರಮೌಳಿ ಯವರ ಮಾನವೀಯ ಕಾರ್ಯ ಕೂಡ ಶ್ಲಾಘನೀಯ. 


ಬರಹ: ✍️....ತೆನ್ನೀರಾ ಮೈನಾ

( ತೆನ್ನೀರಾ ಮೈನಾ )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,