Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೋವಿಡ್ ವಾರಿಯರ್ಸ್‌ಗಳಿಗೆ ಹೆಚ್ .ಎಂ .ನಂದಕುಮಾರ್ ನೆರವು

ಕೋವಿಡ್ ವಾರಿಯರ್ಸ್‌ಗಳಿಗೆ ಹೆಚ್. ಎಂ. ನಂದಕುಮಾರ್ ನೆರವು 



ಆರ್ಥಿಕ  ಸಂಕಷ್ಟಕ್ಕೆ ಗುರಿಯಾಗಿದ್ದ ಕೋವಿಡ್ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ಹೋಂ ಗಾರ್ಡ್ಸ್ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ಕೆಪಿಸಿಸಿ ಸಂಯೋಜಕರಾದ ಹೆಚ್.ಎಂ. ನಂದಕುಮಾರ್ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ .

ಕೆಪಿಸಿಸಿ ತಮಗೆ ಉಸ್ತುವಾರಿ ನೀಡಿರುವ ಸುಳ್ಯ ತಾಲ್ಲೂಕಿನಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ ಮತ್ತು ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ನಿರ್ದೇಶನದ ಮೇರೆಗೆ ಸುಮಾರು ಮೂರು ಲಕ್ಷ ರೂ.ಗಳ ವೆಚ್ಚದಲ್ಲಿ ತಲಾ 1500 ರೂ ಮೊತ್ತದ ಆಹಾರ ಸಾಮಗ್ರಿ ಇರುವ ಕಿಟ್ ನ್ನು ಫಲಾನುಭವಿಗಳಿಗೆ ನೀಡಲಾಯಿತು .

ಕಳೆದ ವರ್ಷ  ಕೂಡ ಮಡಿಕೇರಿ ನಗರದ  ಅನೇಕ ಕಡೆಗಳಲ್ಲಿ ಹೆಚ್. ಎಂ. ನಂದಕುಮಾರ್ ಸುಮಾರು  ನಾಲ್ಕು ಸಾವಿರ ಕುಟುಂಬಗಳಿಗೆ ಲಾಕ್ ಡೌನ್ ಸಂಧರ್ಭದಲ್ಲಿ ಕಿಟ್ ವಿತರಿಸಿ ನೆರವಾಗಿದ್ದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಕೂಡ ಆರ್ಥಿಕ ನೆರವು ನೀಡುತ್ತಿದ್ದಾರೆ. ಅನೇಕ ವಿಕಲತೇನರಿಗೆ ಮೂಲಭೂತ ಸೌಕರ್ಯಗಳನ್ನು ಕೂಡ ವೈಯುಕ್ತಿಕವಾಗಿ ಒದಗಿಸಿದ್ದಾರೆ.  ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿಯಾಗಿರುವ  ನಂದಕುಮಾರ್ರವರು ದಶಕಗಳ ಕಾಲದಿಂದಲೂ ಅಸಾಹಯಕರಿಗೆ ನೆರವಾಗುತ್ತಿದ್ದು, ಇವರ ಸತ್ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಡಿಕೇರಿಯ ಪುಟಾಣಿ ನಗರದ ವಸತಿರಹಿತ ಮಹಿಳೆ ನಿಂಗಮ್ಮನವರ ಮನೆ ನಿರ್ಮಾಣಕ್ಕೆ ಕೂಡ ನಂದಕುಮಾರ್ ಆರ್ಥಿಕ ನೆರವು ನೀಡಿದ್ದಾರೆ. ನಿಂಗಮ್ಮನವರ ಮನೆ ಹಸ್ತಾಂತರ ಸಮಯದಲ್ಲಿ ಕೆಲವರು ಪ್ರಚಾರಕೋಸ್ಕರ  ಯಾವುದೇ ನೆರವು ನೀಡದೆ ಪ್ರದರ್ಶನ ನೀಡಿದ್ದು, ನಂದಕುಮಾರ್ ರವರನ್ನು ಸೌಜನ್ಯಕ್ಕಾದರೂ ಉಲ್ಲೇಖಸದಿರುವುದು ವಿಪರ್ಯಾಸವಾಗಿದೆ.

ಒಟ್ಟಿನಲ್ಲಿ ಉಳ್ಳವರು, ಇಲ್ಲದಿರುವವರಿಗೆ ನೆರವಾಗಬೇಕು ಎಂಬ ಧ್ಯೇಯದೊಂದಿಗೆ ಸಮಾಜ ಮುಖಿ ಕೆಲಸ ಮಾಡುತ್ತಿರುವ ನಂದಕುಮಾರ್ರವರಿಂದ ಮತ್ತಷ್ಟು ಸಮಾಜಕ್ಕೆ ನೆರವು ಲಭಿಸಲಿ ಎಂಬುದು ಸಾರ್ವಜನಿಕರ ಹಾರೈಕೆ.


ಬರಹ: ✍️....ತೆನ್ನೀರಾ ಮೈನಾ

( ತೆನ್ನೀರಾ ಮೈನಾ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,