Header Ads Widget

Responsive Advertisement

ಪರೋಪಕಾರದ ಪರಿಪೂರ್ಣತೆಯ ಹಾದಿಯಲ್ಲಿ ಎ.ಎಸ್ .ಪೊನ್ನಣ್ಣ

ಪರೋಪಕಾರದ ಪರಿಪೂರ್ಣತೆಯ ಹಾದಿಯಲ್ಲಿ ಎ.ಎಸ್ .ಪೊನ್ನಣ್ಣ 




ಕೊವಿಡ್ ಸಂಕಷ್ಟದಲ್ಲಿ ಕೊಡಗಿನ ಜನತೆಯ ಬದುಕಿನ ನೆರವಿಗೆ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ .ಎಸ್ ಪೊನ್ನಣ್ಣ ನವರು ಸಹಾಯ ಹಸ್ತ ನೀಡಿದ್ದಾರೆ .

ಕೋವಿಡ್  ಸೋಂಕಿತರು ದೂರದ ಊರಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಎದುರಾಗಿದ್ದನ್ನು ಗಮನಿಸಿದ ಪೊನ್ನಣ್ಣನವರು ದಕ್ಷಿಣ ಕೊಡಗಿನ ಜನತೆಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ವ್ಯವಸ್ಥೆ ಹೊಂದಿರುವ ಆ್ಯಂಬುಲೆನ್ಸ್ನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿ ಉಚಿತವಾಗಿ ಸೇವೆ ನೀಡಲು ಇಂದು ಹಸ್ತಾಂತರ ಮಾಡಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋವಿಡ್ ಬಾಧಿತ ಕುಟುಂಬಗಳಿಗೆ ಮತ್ತು ವಿಕಲಚೇತನ ಕುಟುಂಬಗಳಿಗೆ  ಆಹಾರ ಧಾನ್ಯಗಳ ಕಿಟ್ ವಿತರಿಸಿ  ಮಾನವೀಯತೆ ಮೆರೆದಿದ್ದಾರೆ .

ಪೊನ್ನಣ್ಣನವರ ಪರೋಪಕಾರ ಕಾರ್ಯ ಇದೆ ಮೊದಲಲ್ಲಾ. ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಆದಾಗ ನೆರವು ನೀಡಿದ್ದರು. 2018 ರಲ್ಲಿ ಕೊಡಗಿನಲ್ಲಿ ಜಲ ಪ್ರಳಯ ಆದಾಗ ಸಹಾಯ ಹಸ್ತ ಚಾಚಿದ್ದರು. ಕೋವಿಡ್ ಆರಂಭದ ಲಾಕ್ ಡೌನ್ ಆದಾಗ ಬೆಂಗಳೂರು ಮಹಾನಗರದಲ್ಲಿ ರಾಜ್ಯದ ಮತ್ತು ಹೊರ ರಾಜ್ಯದ ಸಾವಿರಾರು ಕಾರ್ಮಿಕರು ಬೀದಿಗೆ  ಬಂದಾಗ  ಅವರನ್ನು ಅವರ ಊರಿಗೆ ಕಳುಹಿಸಿ ಸಾಮಾಜಿಕ ಕಳಕಳಿ ತೋರಿದ್ದರು. ಕೊಡಗು ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಒಂದು ತಿಂಗಳಿಗಾಗುವ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಬಡ ಜನರಿಗೆ ನೆರವಾದರು. ಅನೇಕ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಲ್ಲಿ ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ಸಹಾಯ ಮಾಡಿದರು. ಅನೇಕ ಬಡ ವಿಧ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಕೊಡಗು ಮೂಲದ ರೋಗಿಗಳಿಗೆ  ಬೆಂಗಳೂರಿನಲ್ಲಿ ಸಮಸ್ಯೆ ಆದಾಗ ಅವರಿಗೂ ಕೂಡ ಸಹಕಾರ ನೀಡಿದ್ದಾರೆ .

"ಭಿಯಾ ದೇಯಂ" ಎಂಬ ಮಾತಿನಂತೆ ತಾವು ದಾನ ನೀಡುವಾಗ ಅತ್ಯಂತ ವಿವೇಚನೆ ಮತ್ತು ಬದ್ದತೆಯಿಂದ ಪರೋಪಕಾರ ಕಾರ್ಯ ಮಾಡುವ ಪೊನ್ನಣ್ಣನವರು  ಫಲಾನುಭವಿಗಳ ಅನುಕೂಲಕ್ಕೆ ಅನುಗುಣವಾಗಿ ನೆರವು ನೀಡುತ್ತಿದ್ದು ಸಂಕಷ್ಟಕ್ಕೆ ಒಳಗಾದವರಿಗೆ ಇದರಿಂದ ಪ್ರಯೋಜನವಾಗುತ್ತಿದೆ. ಇಂತಹ ಸತ್ಕಾರ್ಯ ಮಾಡುತ್ತಿರುವ ಎ.ಎಸ್. ಪೊನ್ನಣ್ಣನವರು ಕೊಡಗಿನ ಹೆಮ್ಮೆ. ಅವರ ಸಕಾಲಿಕ ಸಮಾಜಮುಖಿ ಕಾರ್ಯಗಳಿಗೆ  ಅಭಿನಂದನೆ ಸಲ್ಲಿಸುತ್ತಾ ಕೊಡಗು ಮತ್ತು ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು.


ಬರಹ: ✍️....ತೆನ್ನೀರಾ ಮೈನಾ

( ತೆನ್ನೀರಾ ಮೈನಾ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,