Header Ads Widget

Responsive Advertisement

ಶ್ರೀಮಂಗಲ ಕರುಣಾ ಟ್ರಸ್ಟ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ "ಕಾಯಕಲ್ಪ" ಪ್ರಶಸ್ತಿ ಗರಿ

 ಶ್ರೀಮಂಗಲ  ಕರುಣಾ  ಟ್ರಸ್ಟ್  ಪ್ರಾಥಮಿಕ ಆರೋಗ್ಯ  ಕೇಂದ್ರಕ್ಕೆ "ಕಾಯಕಲ್ಪ" ಪ್ರಶಸ್ತಿ ಗರಿ



ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದಲ್ಲಿ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರ ಜೊತೆಗೆ ಸಮರ್ಪಕ ರೀತಿಯಲ್ಲಿ ಸ್ವತ್ಛತೆ ಕಾಪಾಡಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಾ ಬರುತ್ತಿರುವ, ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ  ಕರುಣಾ  ಟ್ರಸ್ಟ್  ಪ್ರಾಥಮಿಕ ಆರೋಗ್ಯ ಕೇಂದ್ರವು "ಕಾಯಕಲ್ಪ" ಯೋಜನೆಯ ಪ್ರಶಸ್ತಿಗೆ ಭಾಜನವಾಗಿದೆ. ಸ್ವಚ್ಛತೆಯಲ್ಲಿ ಈ ಬಾರಿ ಕೊಡಗಿನಲ್ಲಿ  ಪ್ರಥಮ  ಸ್ಥಾನ  ಪಡೆದ  ಆಸ್ಪತ್ರೆ ಇದಾಗಿದೆ.

ಭಾರತ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗಿಂತ ಗುಣಮಟ್ಟದ ಸೇವೆ ನೀಡಬೇಕು. ಬಾಹ್ಯ ಮತ್ತು ಆಂತರಿಕ ಸ್ವತ್ಛತೆಯನ್ನು ಬಲಪಡಿಸುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಯಿಂದ ಕಾಯಕಲ್ಪ ಯೋಜನೆ ಆರಂಭಿಸಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಭಾರತ ಸರ್ಕಾರರವರು ಸಾರ್ವಜನಿಕ ಆರೋಗ್ಯ ಸಂಸ್ಥೆಗೆಳಗೆ ಕಾಯಕಲ್ಪ ಪ್ರಶಸ್ತಿಗಳನ್ನು ಕೊಡುವದರ ಮೂಲಕ ಆರೋಗ್ಯ ಸಂಸ್ಥೆಗಳ ಸ್ವಚ್ಚತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಕೊಡಲು ಭಾರತ ಸರ್ಕಾರ ಮತ್ತು ಕರ್ನಾಟಕ ಸರಕಾರದ ಮಾನದಂಡಗಳ ಒಳಗೊಂಡು ಪ್ರಶಸ್ತಿಗಳನ್ನು ಕೊಡಲಾಗುತ್ತದೆ.

ಸರ್ಕಾರಿ ಅಸ್ಪತ್ರೆಗಳ ಸಮಗ್ರ ನಿರ್ವಹಣೆ, ಸ್ವಚ್ಛತೆ, ಔಷಧಗಳ ಲಭ್ಯತೆ, ಗುಣಮಟ್ಟದ ಚಿಕಿತ್ಸಾ ವಿಧಾನ, ರೋಗಿಗಳೊಂದಿಗಿನ ಸಂವಹನ ಸಂಬಂಧ ಹಾಗೂ ನಗುಮೊಗದ ಸೇವೆ, ಸಕಾಲಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯತೆ ಸೇರಿದಂತೆ ಒಟ್ಟಾರೆ ಆಸ್ಪತ್ರೆಯಲ್ಲಿನ ಎಲ್ಲಾ ಕಾರ್ಯಕ್ಷಮತೆಯನ್ನು ಸದರಿ ಆಸ್ಪತ್ರೆಗಳಿಗೆ ಗೊತ್ತಾಗದ ರೀತಿಯಲ್ಲಿ ಸಮೀಕ್ಷೆ ನಡೆಸಿ, ನೂರಾರು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ತುಲನೆ ಮಾಡಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಇನ್ನೂ ಹೆಚ್ಚಿನ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಈ ಪ್ರಶಸ್ತಿಯು ಒಂದು ರೀತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ, "ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಟಾನಿಕ್ ರೂಪದಲ್ಲಿ ಲಭ್ಯವಾಗಿದ್ದು", ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸ್ಫೂರ್ತಿಯಾಗಿದೆ. ಪ್ರತೀ ದಿನ  ಅತ್ಯಂತ  ಶಿಸ್ತು ಬದ್ದ  ಮತ್ತು ಸ್ವಚ್ಛತೆಯಿಂದ   ನೋಡಿಕೊಂಡು ಲಸಿಕೆ  ನೀಡುತ್ತಿರುವ  ಶ್ರೀಮಂಗಲ  ಕರುಣಾ  ಟ್ರಸ್ಟ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಕೊಡಗಿನ ಜನತೆಯ ಪರವಾಗಿ "ಸರ್ಚ್‌ ಕೂರ್ಗ್‌ ಮೀಡಿಯಾ" ವತಿಯಿಂದ ಶುಭಾಶಯಗಳು.


ಸುದ್ದಿಚಿತ್ರ-ಮಾಹಿತಿ:  ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,