Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯ ಉದ್ಯಾನವನ್ನು ಸ್ವಚ್ಛಗೊಳಿಸಿದ ಗೋಣಿಕೊಪ್ಪ ಯೂತ್ ವಿಂಗ್ ತಂಡ

ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯ ಉದ್ಯಾನವನ್ನು ಸ್ವಚ್ಛಗೊಳಿಸಿದ ಗೋಣಿಕೊಪ್ಪ ಯೂತ್ ವಿಂಗ್ ತಂಡ



ಗೋಣಿಕೊಪ್ಪಲು: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಉದ್ಯಾನ ಹಾಗೂ ಸುತ್ತಮುತ್ತಲು ನೆನೆಗುದಿಗೆ ಬಿದ್ದಿದ್ದನ್ನು ಮನಗೊಂಡು ಗೋಣಿಕೊಪ್ಪ ಯೂತ್ ವಿಂಗ್ ತಂಡ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಹಾಗೂ ಡಾ: ಸುರೇಶ್ ಮತ್ತು ಡಾ: ಗ್ರೀಷ್ಮಾ ರವರ ಗಮನಕ್ಕೆ ತಂದು ಅನುಮತಿಯನ್ನು ಪಡೆದು ಯೂತ್ ವಿಂಗ್ ತಂಡದ 15ಕ್ಕೂ ಹೆಚ್ಚು ಯುವಕರು ಆಸ್ಪತ್ರೆಯ ಸುತ್ತಮುತ್ತಲು ಸ್ವಚ್ಚತಾ ಕಾರ್ಯಮಾಡಿದರು. 

ಗೋಣಿಕೊಪ್ಪ ಯೂತ್ ವಿಂಗ್ ತಂಡದ ಮಾರ್ಗದರ್ಶಕರಾದ ಲಾಯಾರ್ ಶಾಮೀರ್  ಹಾಗೂ ಅಬ್ದುಲ್ ಸಮದ್ ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಶರತ್ ಕಾಂತ್ ಯೂತ್ ವಿಂಗ್ ತಂಡದೊಂದಿಗೆ ಸಾತ್ ನೀಡಿ ಉದ್ಯಾನದಲ್ಲಿದ್ದ ಕಸವನ್ನು ಕೊಂಡಯ್ಯೊಲು ಗ್ರಾಮ ಪಂಚಾಯಿತಿಯಿಂದ ವಾಹನವನ್ನು ಒದಗಿಸಿಕೊಟ್ಟು ಯೂತ್ ವಿಂಗ್ ತಂಡದೊಂದಿಗೆ ಸಹಕರಿಸಿದರು.

ಈ ಸಂದರ್ಭ ಯೂತ್ ವಿಂಗ್ ಸದಸ್ಯರುಗಳಾದ ಸಲೀಂ,  ಶಮ್ಮು, ಹಮೀದ್, ಶರಫು, ಕಾಲಿದ್, ಫೈಝಲ್, ಹನೀಫಾ, ರೀಯಾಸ್, ಸಜೀರ್, ಅಶ್ಕರ್, ರಂಶಾದ್, ಫಯಾಜ್,  ಆಪು, ಆಫ್ರಿದ್ ಮುಂತಾದವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.


✍️ವರದಿ: ಶರಫುದ್ದೀನ್ ಗೋಣಿಕೊಪ್ಪ.



( ಶರಫುದ್ದೀನ್ ಗೋಣಿಕೊಪ್ಪ)



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,