Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಲ್ಪಸಂಖ್ಯಾತ ಘಟಕದಿಂದ ಅನ್ನ ಸ್ಪಂದನ ಕಾರ್ಯಕ್ರಮಕ್ಕೆ ವಿರಾಜಪೇಟೆಯಲ್ಲಿ ಚಾಲನೆ

ಅಲ್ಪಸಂಖ್ಯಾತ ಘಟಕದಿಂದ ಅನ್ನ ಸ್ಪಂದನ ಕಾರ್ಯಕ್ರಮಕ್ಕೆ ವಿರಾಜಪೇಟೆಯಲ್ಲಿ ಚಾಲನೆ


ವಿರಾಜಪೇಟೆ: ರಾಜ್ಯ ಅಲ್ಪಸಂಖ್ಯಾತ ಘಟಕದ ಆದೇಶದ ಮೇರೆಗೆ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಹಾರಿಸ್ ಕೊಳಕೇರಿರವರ ನೇತೃತ್ವದಲ್ಲಿ ವಿರಾಜಪೇಟೆ ಭಾಗದಲ್ಲಿರುವ ಕಡು ಬಡವರಿಗೆ ಒಂದು ಹೊತ್ತಿನ ಊಟ ನೀಡುವ ಮೂಲಕ ಅನ್ನ ಸ್ಪಂದನಾ ಕಾರ್ಯಕ್ರಮಕ್ಕೆ ವಿರಾಜಪೇಟೆಯಲ್ಲಿ ಚಾಲನೆ ನೀಡಲಾಯಿತು.

ದಿನ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗುತ್ತಿದ್ದ ಬಡವರ ಬದುಕು ಕೊರೋನ ಮಹಾಮಾರಿಯಿಂದ ಕಂಗಾಲಾಗಿದೆ. ಇಂಥ  ಸಂದರ್ಭದಲ್ಲಿ  ಕಡು ಬಡವರು ನಿರ್ಗತಿಕರು ಶ್ರಮಿಕ ವರ್ಗದವರಿಗೆ ಒಂದು ಹೊತ್ತು ರುಚಿಯಾದ ಗುಣಮಟ್ಟದ ಆಹಾರವನ್ನು ನೀಡಲು ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕಕ್ಕೆ ರಾಜ್ಯ ಅಲ್ಪಸಂಖ್ಯಾತ ಘಟಕ ಆದೇಶ  ಮಾಡಿದ್ದರು. ಆದೇಶದಂತೆ ರಾಜ್ಯ ಅಲ್ಪಸಂಖ್ಯಾತ ಉಪಾಧ್ಯಕ್ಷ ಹಾರಿಸ್ ಕೊಳಕೇರಿರವರ ನೇತೃತ್ವದಲ್ಲಿ ವಿರಾಜಪೇಟೆ ಸುತ್ತ ಮುತ್ತಲಿನ ಬಡ ಜನತೆಗೆ ಅನ್ನ ಸ್ಪಂದನ ಮೂಲಕ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಯಿತು.

ಬಳಿಕ  ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಹಾರಿಸ್ ಕೊಳಕೇರಿ ಮಾತನಾಡಿ ದಾನದಲ್ಲಿ ಶ್ರೇಷ್ಟ ದಾನ ಅನ್ನದಾನವಾಗಿರುತ್ತದೆ ಈ ನಿಟ್ಟಿನಲ್ಲಿ ನಮ್ಮ ಅಲ್ಪಸಂಖ್ಯಾತ ಘಟಕದಿಂದ ಬಡವರಿಗೆ ಒಂದು ಹೊತ್ತಾದರೂ ಹೊಟ್ಟೆ ತುಂಬಿಸಲು ಸಾಧ್ಯವಾಯಿತು. ಮುಂದೆಯೂ ನಮ್ಮ ಘಟಕ ಬಡವರ ಕಷ್ಟಕೆ ಸ್ಪಂದಿಸುವುದಾಗಿ ಹಾರಿಸ್ ಕೊಳಕೇರಿ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಅನ್ನ ಸ್ಪಂದನ  ಕಾರ್ಯಕ್ರಮದಲ್ಲಿ ವಿರಾಜಪೇಟೆಯ  ಅಲ್ಪಸಂಖ್ಯಾತ ಬ್ಲಾಕ್ ಅಧ್ಯಕ್ಷರಾದ ರಫೀಕ್, ನಗರ ಅಧ್ಯಕ್ಷರಾದ   ರುಮಾನ್, ವಿರಾಜಪೇಟೆಯ ನಗರಾಧ್ಯಕ್ಷ ಜಿ.ಜಿ ಮೋಹನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮ್ಮದ್ ರಾಫಿ ಹಾಗೂ ಪೃಥ್ವಿ, ಅಗಸ್ಟಿನ್ ಹಾಗೂ  ಬೇಟೋಳಿ ಗ್ರಾಮ ಪಂಚಾಯಿತಿ   ಸದಸ್ಯರಾದ   ಕಟ್ಟಿ ವಸಂತರವರು ಹಾಗೂ ಬಿಳಗುಂದ ಗ್ರಾಮ ಪಂಚಾಯಿತಿ ಸದಸ್ಯರಾದ  ಹನೀಫ್ ಹಾಗೂ ಪ್ರಮುಖರಾದ ಅಲಿರ ಪವಿಲ್ ಉಸ್ಮಾನ್, ಹಾಗೂ  ಶಬೀರ್  ರವರು ಉಪಸ್ಥಿತರಿದ್ದರು.

✍️ವರದಿ: ಶರಫುದ್ದೀನ್ ಗೋಣಿಕೊಪ್ಪ.


( ಶರಫುದ್ದೀನ್ ಗೋಣಿಕೊಪ್ಪ)



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,