Header Ads Widget

Responsive Advertisement

ಶ್ರೀಮಂಗಲ CHESCOM 33 ಕೆ.ವಿ. ವಿದ್ಯುತ್ ಉಪ ಕೇಂದ್ರದ ಸಮಸ್ಯೆ ಸರಿಪಡಿಸಲು‌ ಶ್ರೀಮಂಗಲ ಹೋಬಳಿಯ ಗ್ರಾಮಸ್ಥರು ಮನವಿ

ಶ್ರೀಮಂಗಲ  CHESCOM 33 ಕೆ.ವಿ. ವಿದ್ಯುತ್ ಉಪ  ಕೇಂದ್ರದ ಸಮಸ್ಯೆ ಸರಿಪಡಿಸಲು‌  ಶ್ರೀಮಂಗಲ ಹೋಬಳಿಯ ಗ್ರಾಮಸ್ಥರು  ಮನವಿ

( ಸಾಂದರ್ಭಿಕ ಚಿತ್ರ )

ಕೊಡಗು  ಜಿಲ್ಲೆಯ ಪೊನ್ನಂಪೇಟೆ ತಾಲೂಕು ಶ್ರೀಮಂಗಲ  CHESCOM 33 ವಿದ್ಯುತ್ ಉಪ  ಕೇಂದ್ರ ನಾಗರಹೊಳೆ ಕುಟ್ಟಾ ದಿಂದ  ಬೆಗೂರು,  ನಾಲ್ಕೇರಿ, ಬಾಡಗ,  ಕುರ್ಚಿ, ಕುಮುಟೂರು, ಬೀರುಗ, ಟಿ ಶೆಟ್ಟಿಗೇರಿ ಹಾಗೂ ಬಿರುನಾಣಿ  ಜನರಿಗೆ  ವಿದ್ಯುತ್ ಸರಬರಾಜು ಮಾಡುವ  ಮುಖ್ಯ  ಕೇಂದ್ರವಾಗಿದೆ.

ಈ ಕೇಂದ್ರದಲ್ಲಿ ಕಿರಿಯ ಇಂಜಿನಿಯರ್ (ಜೆ .ಇ.) ಯವರಿಗೆ  ಮಾತ್ರ  ವಸತಿ  ಗ್ರಹ  ಇದ್ದು, ಪಕ್ಕದ  ಹಳೇಯ ಕಟ್ಟಡ  ಪಾಳು  ಬಿದ್ದು ಬೇರೆ ಕೆಲವರು  ಅನಧಿಕೃತವಾಗಿ  ವಾಸಿಸುತ್ತಿದ್ದಾರೆ. ಎಲ್ಲಾ ಲೈನ್ ಮ್ಯಾನ್ ಗಳಿಗೆ  ಇಲ್ಲಿ ವಾಸ  ಮಾಡಲು  ಸೂಕ್ತ ವ್ಯವಸ್ಥೆ  ಆಗಬೇಕಿದೆ. ಎಲ್ಲಾ ಸಿಬ್ಬಂದಿ ಬಾಡಿಗೆ  ಮನೆಯಲ್ಲಿ  ಇದ್ದು ಇವರನ್ನು  ಹುಡುಕುವುದು ಕಷ್ಟವಾದ ಪರಿಸ್ಥಿತಿ ತಲೆದೋರಿದೆ. ಇಲ್ಲಿಗೆ  ದೂರವಾಣಿ  ಮಾಡಿ ಸಮಸ್ಯೆಗಳನ್ನು ಹೇಳಲು ಹೋದರೆ ದೂರವಾಣಿ   ಯಾರು  ತೆಗೆಯುವುದಿಲ್ಲ. ಜನರ  ಸಮಸ್ಯೆ    ಸ್ಪಂದಿಸಲು  ಸಿಬ್ಬಂದಿ, ಲೈನ್ ಮ್ಯಾನ್‌ಗಳ ಅವಶ್ಯಕತೆ ಅಗತ್ಯವಾಗಿ ಆಗಬೇಕಿದೆ  ಹಾಗೆ ಇಲ್ಲಿ ಸರಿಯಾದ  ವ್ಯವಸ್ಥೆ  ಆಗಬೇಕು ಎಂದು ಶ್ರೀಮಂಗಲ ಹೋಬಳಿಯ ಗ್ರಾಮಸ್ಥರು   CHESCOM ಅಧಿಕಾರಿಗಳಿಗೆ  ಮನವಿ ಮಾಡಿಕೊಂಡಿದ್ದಾರೆ.

ಗ್ರಾಮೀಣ  ಭಾಗದಲ್ಲಿ  ಭಾರಿ  ಸಮಸ್ಯೆ  ಇದ್ದು, ಟೌನಿನಲ್ಲಿ  ಮರದ  ಮದ್ಯೆ  ವಿದ್ಯುತ್ ತಂತಿ  ಹಾದು ಹೋಗಿದ್ದು ಜೋತು  ಬಿದ್ದ  ತಂತಿ  ಹಾಗೂ ವಿದ್ಯುತ್ ಕಂಬ  ಸರಿಪಡಿಸಿ  ಮರಗಳನ್ನು  ಕಡಿಯಬೇಕು ಹಾಗೆ ಟೌನಿಗೆ  ಅಳವಡಿರುವ  ಪ್ರತ್ಯೇಕ ಫೀಡರ್  ನಿಂದ  ಬೇರೆ ಜಾಗಕ್ಕೆ  ವಿದ್ಯುತ್ ನೀಡಬಾರದು. ಇದರಿಂದ  ಟೌನಿನಲ್ಲಿ  ಸಮಸ್ಯೆ  ಆಗುತ್ತಿದೆ. ಸಹಾಯವಾಣಿ  ಮತ್ತು ಮೊಬೈಲ್ ಲೈನ್ ಮ್ಯಾನ್  ತಂಡವೊಂದನ್ನು  ಪ್ರಾರಂಭಿಸಬೇಕಾಗಿದೆ. ಅದೇ ರೀತಿ ಇಲ್ಲಿನ ವಿದ್ಯುತ್‌ ಸಮಸ್ಯೆಗಳಿಗೆ  ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು CHESCOM ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಶ್ರೀಮಂಗಲ ಹೋಬಳಿಯ ಗ್ರಾಮಸ್ಥರು  ಮನವಿ ಮಾಡಿಕೊಂಡಿದ್ದಾರೆ. 

1969-70 ರಲ್ಲಿ ಶ್ರೀಮಂಗಲ ವಿದ್ಯುತ್‌ ಉಪ ಕೇಂದ್ರ ಸ್ಥಾಪನೆಯಾಯಿತು. ಆ ಸಂದರ್ಭದಲ್ಲಿ 1200 ಗ್ರಾಹಕರಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿತ್ತು. ಈಗ ಈ ಭಾಗದಲ್ಲಿ ಅಂದಾಜು 15 ಸಾವಿರಕ್ಕೂ ಅಧಿಕ ಗ್ರಾಹಕರೂ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ.


ಸುದ್ದಿ- ಮಾಹಿತಿ:  ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,