ಬಡತನವನ್ನು ಮೆಟ್ಟಿ ನಿಂತ ಸವಿತಾ; ಇದೀಗ ವಾಣಿಜ್ಯ ನಗರಿ ಗೋಣಿಕೊಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ
ಬಡತನವನ್ನು ಮೆಟ್ಟಿ ನಿಂತು ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಹೊಸ ಹುಮ್ಮಸ್ಸಿನಲ್ಲಿ ಜನಪರ ಸೇವೆಗೆ ಮುಂದಾದ ಸವಿತಾ, ಇದೀಗ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸವಿತಾ ರವರು ಗೋಣಿಕೊಪ್ಪಲು ಹರಿಚಂದ್ರ ಪುರ ನಿವಾಸಿ ಮಾರ ಹಾಗೂ ದೇವಿ ದಂಪತಿಗಳ ಹಿರಿಯ ಪುತ್ರಿ ಯಾಗಿದ್ದಾರೆ.
ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಗೋಣಿಕೊಪ್ಪಲುವಿನಲ್ಲಿ ಇತ್ತೀಚಿಗೆ ನಡೆದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸವಿತಾ ರವರು ಗೋಣಿಕೊಪ್ಪಲು ಮೂರನೇ ವಿಭಾಗದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಒಲಿದು ಬಂದ ಮೀಸಲಾತಿ ಅದೃಷ್ಟ
ಉಪಾಧ್ಯಕ್ಷ ಸ್ಥಾನ ಎಸ್.ಸಿ. ವಿಬಾಗಕ್ಕೆ ಮೀಸಲಾತಿ ಇದ್ದು, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ 21 ಸದಸ್ಯರ ಪೈಕಿಯಲ್ಲಿ ಎಸ್. ಸಿ. ಮೀಸಲಾತಿಯಲ್ಲಿ ಗೆಲವು ಸಾಧಿಸಿದ ಏಕೈಕ ಮಹಿಳೆಯಾದ ಸವಿತಾ ರವರು ಅವಿರೋಧವಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ ಅರ್ಹರಾಗಿ ಆಯ್ಕೆಯಾಗಿದ್ದಾರೆ
ಜೀವನದಲ್ಲಿ ಬಡತನ ವಿದ್ಯೆಯಲ್ಲಿ ಶ್ರೀಮಂತಿಗೆ
ಸವಿತಾ ರವರು 10 ನೇ ತರಗತಿಯವರೆ ಗೋಣಿಕೊಪ್ಪ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳಿಕ ಗೋಣಿಕೊಪ್ಪ ಕಾವೇರಿ ಕಾಲೇಜ್‌ನಲ್ಲಿ ಬಿ .ಕಾಂ. ಪದವಿಯನ್ನು ಪಡೆದ್ದಿದ್ದಾರೆ. ಬಳಿಕ ಗೋಣಿಕೊಪ್ಪ ಸೈಬರ್ ಒಂದರಲ್ಲಿ ಪಾರ್ಟ್ ಟೈಂ ಕಂಪ್ಯೂಟರ್ ಟೈಪಿಂಗ್ ಕೆಲಸವನ್ನು ಮಾಡುತಿದ್ದರು.
ಕೂಲಿ ಕಾರ್ಮಿಕರಾದ ಸವಿತ ರವರ ತಂದೆ ತಾಯಿಯು ಎಷ್ಟೇ ಬಡತನದಲ್ಲಿ ಇದ್ದರೂ ತನ್ನ ಮಗಳಿಗೆ ವಿದ್ಯಾಭ್ಯಾಸ ನೀಡುವುದರಲ್ಲಿ ಯಾವುದಕ್ಕೂ ಕೊರೆತೆ ಮಾಡಿಲ್ಲ. ತನ್ನ ಮಗಳು ಓದಿ ದೊಡ್ಡವಳಾಗಿ ಮುಂದೊಂದೂ ದಿನ ದೊಡ್ಡ ಅಧಿಕಾರಿ ಆಗಬೇಕು ಹಾಗೆ ಜಪನಪರ ಕೆಲಸ ಮಾಡಿ ಊರಿಗೂ ಕೂಡ ಉಪಕಾರ ಆಗಬೇಕೆಂಬ ಕನಸಿನಲ್ಲಿ ಸವಿತಾ ರವರ ತಂದೆ ತಾಯಿಯು ಹಗಲು ರಾತ್ರಿ ಕಷ್ಟಪಟ್ಟು ಮಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಪ್ರೀತಿಯಿಂದ ಬೆಳಸಿದ್ದಾರೆ. ಇದೀಗ ತನ್ನ ಮಗಳು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಗಿರುವುದನ್ನು ಅರಿತು ಸವಿತಾ ರವರ ತಂದೆ ತಾಯಿ ಎಲ್ಲಿಲ್ಲದ ಸಂತಸ ವ್ಯಕ್ತಪಡಿಸಿದ್ದಾರೆ.
ಸವಿತ ರವರ ಪ್ರತಿಭೆಯನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಶ್ರಮಿಸಿದ ಕುಳ್ಳಚಂಡ ಪ್ರಮೋದ್ ಗಣಪತಿ
ಗೋಣಿಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಕುಳ್ಳಚಂಡ ಪ್ರಮೋದ್ ಗಣಪತಿ ರವರು ಸವಿತಾ ರವರ ಪ್ರತಿಭೆಯನ್ನು ಗುರುತಿಸಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುಳಾ ಹಾಗೂ ಶಾಹೀನ ಮತ್ತು ಸಮಾಜ ಸೇವಕರಾದ ಶಮ್ಮುರವರೂ ಕೂಡ ಸವಿತಾ ರವರಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದರು.
ಬಡ ಕುಟುಂಬದಲ್ಲಿ ಜನಿಸಿದ ಸವಿತಾ ರವರಂತಹಾ ಹಲವಾರು ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಯಲ್ಲಿ ಬರಲು ಅವಕಾಶ ವಂಚಿತರಾಗುತ್ತಿದ್ದಾರೆ. ಇಂಥಹಾ ಪ್ರತಿಭೆ ಇರುವವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುವರು ಪ್ರಯತ್ನಿಸಬೇಕಾಗಿದೆ.
ಸವಿತಾ ರವರ ಸೇವೆಯು ನಮ್ಮ ಗ್ರಾಮಕ್ಕೆ ಅವಶ್ಯಕತೆ ಇದೆ. ಇಂತಹಾ ವಿದ್ಯಾಭ್ಯಾಸ ಇರುವವರು ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿರುವುದು ಸಂತಸ ತಂದಿದೆ. ಇವರ ಅಧಿಕಾರದಲ್ಲಿ ಗ್ರಾಮ ಉತ್ತಮ ಅಭಿವೃದ್ಧಿಯತ್ತ ಸಾಗಲಿ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಮೋದ್ ಗಣಪತಿ ಯವರು ಸವಿತಾ ರವರಿಗೆ ಶುಭಹಾರೈಸಿದ್ದಾರೆ.
✍️ವರದಿ: ಶರಫುದ್ದೀನ್ ಗೋಣಿಕೊಪ್ಪ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network