Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ ಯುಎಇ ಈದ್ ಸ್ನೇಹ ಮಿಲನ ಮತ್ತು ಸ್ಪೋರ್ಟ್ಸ್ ಮೀಟ್

ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ ಯುಎಇ ಈದ್ ಸ್ನೇಹ ಮಿಲನ ಮತ್ತು ಸ್ಪೋರ್ಟ್ಸ್ ಮೀಟ್


ದುಬೈ:  ಅನಿವಾಸಿ ಕೊಡಗಿನ ಸಹೃದಯಿ ಬಂದುಗಳಿಂದ ಸ್ಥಾಪಿತವಾಗಿ ಕೊಡಗು ಜಿಲ್ಲೆಯ ಶೋಷಿತರ ಆಶಾ ಕೇಂದ್ರವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅವರನ್ನು ಮುಂದೆ ತರಲು ವಿದೇಶದಿಂದ ಕೈ ಜೋಡಿಸಿ, ಸಾಂತ್ವನ ಕಾರ್ಯಕ್ರಮಗಳ ಮೂಲಕ ಸಂಕಷ್ಟಗಳಿಗೆ ಸ್ಪಂದಿಸಲು ಯುಎಇ ಕೇಂದ್ರವಾಗಿ ಕಳೆದೆರಡು ದಶಕಗಳಿಂದ ಕಾರ್ಯಾಚರಿಸುತ್ತಿರುವ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ (KSWA) ಯುಎಇ  ಸಮಿತಿ ಆಶ್ರಯದಲ್ಲಿ ದುಬೈನಲ್ಲಿ ಈದ್ ಹಬ್ಬದ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು. 

ಈ ಸಂಧರ್ಭದಲ್ಲಿ ಸದಸ್ಯತ್ವ ಅಭಿಯಾನ ಹಾಗೂ ಕೊಡಗಿನ ಕ್ರೀಡಾಪಟುಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ಸಮಿತಿಯು ನೀಡಿತ್ತು, ಯುಎಇ ಯ ವಿವಿಧ ಕಡೆಗಳಲ್ಲಿ ನೆಲೆಸಿರುವ ಜಿಲ್ಲೆಯ ಅನಿವಾಸಿಗಳು ಭಾಗವಹಿಸಿದ್ದರು. 

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯುಎಇ  ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೋಶಾಧಿಕಾರಿ ಅಹ್ಮದ್ ಚಾಮಿಯಾಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸಂಘಟನೆಯ ಕಾರ್ಯವೈಖರಿ ಕುರಿತು ಮಾತನಾಡಿದರು. ಅಬೂಧಾಬಿ ಸಮಿತಿ ಅಧ್ಯಕ್ಷ ಹಂಝ ಪೊನ್ನಂಪೇಟೆ ಸ್ವಾಗತ ಕೋರಿದರು.  ರಿಯಾಝ್ ಕೊಂಡಂಗೇರಿ, ಅಲಿ ಎಮ್ಮೆಮಾಡು, ಮುಜೀಬ್ ಕಡಂಗ, ಸಲೀಂ ಗುಂಡಿಗೆರೆ, ಹಂಝ ಎರುಮಾಡ್,  ಮುಝಮ್ಮಿಲ್ ಚಾಮಿಯಾಲ್, ಮುಝಮ್ಮಿಲ್ ಪಾಲಿಬೆಟ್ಟ, ರಶೀದ್ ಅಶ್ರಫಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ವಾಲಿಬಾಲ್ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಗಫೂರ್ ಎಮ್ಮೆಮಾಡು ಮಾಲೀಕತ್ವದ ಜಿಮ್ಯಾಕ್ ಕ್ಲಬ್ ಮತ್ತು ದ್ವಿತೀಯ ಸ್ಥಾನವನ್ನು ಮುನ್ನ ಕೊಂಡಂಗೇರಿ ಮಾಲೀಕತ್ವದ ಪ್ರಾಂಟ್ ತಂಡ ಜಯಗಳಿಸಿತು. ಕ್ರಿಕೆಟ್ ಟೂರ್ನಿಯಲ್ಲಿ ಬುಲ್ಲೆಟ್ಟ್ ಪ್ರೆಂಡ್ಸ್ ಕೊಂಡಂಗೇರಿ ತಂಡವು ಪ್ರಥಮ ಸ್ಥಾನ ಮತ್ತು ಚೆರಿಯಪರಂಬು ದ್ವಿತೀಯ ಸ್ಥಾನ ಪಡೆದರು. ಕ್ರೀಡಾ ಕೂಟದ ಉಸ್ತುವಾರಿಯನ್ನು ಅಕ್ಬರ್ ಗುಂಡಿಗೆರೆ, ಮಿದ್'ಲಾಜ್, ಖಲೀಲ್ ಚಾಮಿಯಾಲ್, ನಿಝಾರ್ ಗುಂಡಿಗೆರೆ ವಹಿಸಿದ್ದರು.

✍️ವರದಿ: ಶರಫುದ್ದೀನ್ ಗೋಣಿಕೊಪ್ಪ.

( ಶರಫುದ್ದೀನ್ ಗೋಣಿಕೊಪ್ಪ)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,