Header Ads Widget

Responsive Advertisement

ಗೋಣಿಕೊಪ್ಪಲು ರೋಟರಿ ಸಂಸ್ಥೆಯಿಂದ ತಿತಿಮತಿ ಅರಣ್ಯ ಇಲಾಖೆಗೆ ಬಿದಿರು ಬೀಜ ವಿತರಣೆ

ಗೋಣಿಕೊಪ್ಪಲು ರೋಟರಿ ಸಂಸ್ಥೆಯಿಂದ ತಿತಿಮತಿ ಅರಣ್ಯ ಇಲಾಖೆಗೆ ಬಿದಿರು ಬೀಜ ವಿತರಣೆ

 


              

ಗೋಣಿಕೊಪ್ಪಲು: ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ 08-07-2021 ರಂದು ತಿತಿಮತಿ ಸಮೀಪ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ವಲಯಾರಣ್ಯಾಧಿಕಾರಿ ವೈ.ಕೆ.ಕಿರಣ್‌ಕುಮಾರ್ ಅವರಿಗೆ ಸಂಸ್ಥೆಯ ಅಧ್ಯಕ್ಷೆ ಟಿ.ಎಂ.ನೀತಾ ಕಾವೇರಮ್ಮ ಸ್ಥಳೀಯ ನಾಟಿ ತಳಿ ಬಿದಿರಿನ ಬೀಜವನ್ನು ವಿತರಿಸಿದರು.

ಪ್ರತೀ ಕೆ.ಜಿ. ಬಿದಿರಿನ ಬೀಜದಲ್ಲಿ ಸುಮಾರು ೬೦೦೦ ಬಿದಿರು ಸಸ್ಯಗಳನ್ನು ಬೆಳೆಸಬಹುದಾಗಿದ್ದು, ೩ ಕೆ.ಜಿ.ಬಿದಿರಿನ ಬೀಜ ವಿತರಿಸಲಾಗಿದೆ ಎಂದು ಹೇಳಿದ ಅವರು,ನಾಗರಹೊಳೆ ಅಭಯಾರಣ್ಯದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಿದಿರು ವಿನಾಶದ ಅಂಚಿನಲ್ಲಿದ್ದು, ಕಾಡ್ಗಿಚ್ಚಿನ ದುಷ್ಪರಿಣಾಮದಿಂದಾಗಿಯೂ ಬಿದಿರು ಮೆಳೆ ನಾಶವಾಗಿದ್ದು, ಕಾಡಾನೆಗಳ ಮೇವಿಗೆ ಕೊರತೆಯಾಗಿದೆ. ಈ ನಿಟ್ಟಿನಲ್ಲಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಸೂಕ್ತ ಆಹಾರ ಸಿಗುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭ ಮಾಹಿತಿ ನೀಡಿನ ವನ್ಯಜೀವಿ ವಿಭಾಗದ ಆರ್.ಎಫ್.ಓ.ಕಿರಣ್‌ಕುಮಾರ್ ಅವರು, ಆನೆಗಳಿಗೆ ಹುಲ್ಲುಗಾವಲುಗಳು ಅಗತ್ಯವಾಗಿದ್ದು, ಸಾಕಾನೆ ಶಿಬಿರದ ಆಶುಪಾಸಿನಲ್ಲಿ ನೂರಾರು ಕೆ.ಜಿ.ಹುಲ್ಲು ಬೀಜವನ್ನು ಪಸರಿಸಿ ಹುಲ್ಲುಗಾವಲು ಮಾರ್ಪಡಿಸುವ ಪ್ರಯತ್ನವೂ ಸಾಗಿದೆ ಎಂದು ಹೇಳಿದರು.

ಮತ್ತಿಗೋಡು ಸಾಕಾನೆ ಶಿಬಿರದ ಅರಣ್ಯ ಕಚೇರಿ ಮುಂಭಾಗ ಬಿದಿರು ಬೀಜ ವಿತರಣೆ ಸಂದರ್ಭ ತಿತಿಮತಿ ವಲಯಾರಣ್ಯಾಧಿಕಾರಿ ಪಿ.ಎ.ತೀರ್ಥ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಜೆ.ಕೆ.ಸುಭಾಷಿಣಿ, ರೋಟರಿ ಮಾಹಿತಿ ಕೈಪಿಡಿ ಸಂಪಾದಕಿ ಲತಾಬೋಪಣ್ಣ, ನಿರ್ದೇಶಕರಾದ ಅಜ್ಜಿಕುಟ್ಟೀರ ಸಜ್ಜನ್ ಚಂಗಪ್ಪ, ಮಾಜಿ ರೋಟರಿ ಅಧ್ಯಕ್ಷರಾದ ಕಾಡ್ಯಮಾಡ ನವೀನ್, ಎಂ.ಕೆ.ಡೀನಾ, ಕಿಶೋರ್ ಮಾದಪ್ಪ( ಸಮುದಾಯ ಸೇವಾ ನಿರ್ದೇಶಕ), ಟಿ.ವಿ.ಮೋಹನ್, ಅರುಣ್ ತಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.


ಸುದ್ದಿ-ಚಿತ್ರ: ಟಿ.ಎಲ್.‌ ಶ್ರೀನಿವಾಸ್‌

                       ಸುದ್ದಿ ಸಂಸ್ಥೆ, ಗೋಣಿಕೊಪ್ಪಲು


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,