Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಪು ಭಾವಪರವಶರಾಗಿ ಉದ್ಗರಿಸಿದ್ದ ಗಾಂಧಿ ಮೈದಾನಕ್ಕೆ ಎಂತಹ ದುರ್ಗತಿ ಬಂತು

ಬಾಪು ಭಾವಪರವಶರಾಗಿ ಉದ್ಗರಿಸಿದ್ದ  ಗಾಂಧಿ ಮೈದಾನಕ್ಕೆ ಎಂತಹ ದುರ್ಗತಿ ಬಂತು 


"ಕೊಡಗು ಪ್ರಕೃತಿಯ ಸಿರಿಯಾಗಿದ್ದು ಇಲ್ಲಿನ ಅಂದವನ್ನು ಕಣ್ಣು ತುಂಬಿಕೊಳ್ಳುವ ಭಾಗ್ಯವನ್ನು ನನಗೆ ದೇವರು ಕರುಣಿಸಿದ್ದಾನೆ .ನಾನು ಎಲ್ಲಿಯೇ ಹೋದರು ಪ್ರಕೃತಿಯ ಮನಮೋಹಕ ನೋಟವನ್ನು ಆಸ್ವಾಧಿಸುತ್ತೇನೆ .ಇಲ್ಲಿನ ಪ್ರಕೃತಿಯ  ರಮಣೀಯತೆ ಹಾಗೂ ಹೃದಯ ವೈಶಾಲ್ಯ ಆತಿಥ್ಯವನ್ನು ಕಂಡು ಮನ ತುಂಬಿ ಬಂದಿದೆ .ಉಳಿದಡೆಯಂತೆ ಇಲ್ಲಿ ಅಸ್ಪೃಶ್ಯತೆಯನ್ನು ಇಲ್ಲಿ ನಾನು ನೋಡಲಿಲ್ಲ " ಎಂದು ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿಯವರು ಕೊಡಗಿನ ಜನರನ್ನು ಪ್ರಶಂಸಿದ್ದು ಮಡಿಕೇರಿಯ ಗಾಂಧಿ ಮೈದಾನದಲ್ಲಿ.

1934 ರ ಫೆಬ್ರವರಿ 23 ರಂದು ಮಹಾತ್ಮ ಗಾಂಧಿಯವರು ಮಡಿಕೇರಿಗೆ ಆಗಮಿಸಿ ಕೊಡಗಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳ ಅಂದಿನಿಂದ ಗಾಂಧಿ ಮೈದಾನ ಎಂದು ಪ್ರಸಿದ್ದವಾಯಿತು .ತಮ್ಮ ಭಾಷಣದ ನಂತರ ಕೊಡಗಿನ ಗಾಂಧಿ ಎಂದು ಖ್ಯಾತರಾದ ಪಂದ್ಯಂಡ ಬೆಳ್ಳಿಯಪ್ಪನವರ ಕೈ ಹಿಡಿದು " ನಿಮ್ಮ ಒತ್ತಾಯ ಇಲ್ಲದಿದ್ದರೆ ಇಂತಹ ಸುಂದರ ಪ್ರದೇಶವನ್ನು ,ಹೃದಯ ವೈಶಾಲ್ಯವಿರುವ ಜನರನ್ನು ನೋಡುವ ಅವಕಾಶ ತಪ್ಪಸಿಕೊಳ್ಳುತ್ತಿದ್ದೆ" ಎಂದು ಭಾವಪರವಶರಾಗಿ ಉದ್ಗರಿಸಿದ್ದು ಇದೇ ಸ್ಥಳದಲ್ಲಿಯೇ.

ಇಂದು ಈ ಭಾವನಾತ್ಮಕ ಘಟನೆಗಳ ಅರಿವಿಲ್ಲದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನಪ್ರತಿನಿಧಿಗಳ  ನಿರ್ಲಕ್ಷ್ಯ ದಿಂದ ಹಾಗೂ ಸಾರ್ವಜನಿಕರ ಮೌನದಿಂದ     ಗಾಂಧಿ ಮೈದಾನ ಕಲ್ಲು ಮಣ್ಣು ,ಕಾಂಕ್ರೀಟ್ ಗಳಿಂದ ತುಂಬಿ  ತುಳುಕುತ್ತಿದೆ .ಪಕ್ಕದಲ್ಲಿಯೇ ಗಾಂಧಿ ಪುತ್ತಳಿಯೊಂದಿಗೆ ಗಾಂಧಿ ಮಂಟಪ ಕೂಡ ಇದೆ. ಕಸ ಕಡ್ಡಿ ,ಗಿಡ ಗಂಟಿಗಳಿಂದ ಕೂಡಿರುವ ಗಾಂಧಿ ಮೈದಾನದ ಈಗಿನ ಸ್ಥಿತಿಯನ್ನು ನೋಡಿದರೆ ನಮ್ಮ ವ್ಯವಸ್ಥೆಯ ಬಗ್ಗೆ ನಾಚಿಕೆಯಾಗುತ್ತದೆ. 

ಮಡಿಕೇರಿ ನಗರದ ಜನರು ಬೆಳಗ್ಗಿನ ವಾಯುವಿಹಾರಕ್ಕೆ ಆರಿಸಿಕೊಂಡ, ಪುಟಾಣಿ ಚಿಣ್ಣರು ಆಟಕ್ಕೆ  ಆಯ್ಕೆಮಾಡಿದ, ವಿಶ್ವವಿಖ್ಯಾತ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ, ಹಾಗೂ ಅನೇಕ ಸಭೆ ಸಮಾರಂಭ ನಡೆಯುತ್ತಿದ್ದ ಈ ಮೈದಾನದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದಿನಂಪ್ರತಿ ಇದೇ ಮೈದಾನದ ಮುಖಾಂತರ ಹಾದು ಹೋಗುವ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಅಪೇಕ್ಷೆ.


ಬರಹ: ✍️....ತೆನ್ನೀರಾ ಮೈನಾ

( ತೆನ್ನೀರಾ ಮೈನಾ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,