Header Ads Widget

ಸರ್ಚ್ ಕೂರ್ಗ್ ಮೀಡಿಯ

ಸರಿಯಾದ ನಿರ್ವಹಣೆ ಇಲ್ಲದೆ ಮುಚ್ಚುವ ಸ್ಥಿತಿಯಲ್ಲಿ ಶ್ರೀಮಂಗಲ ಬಿ.ಎಸ್ .ಎನ್. ಎಲ್. ಕೇಂದ್ರ

ಸರಿಯಾದ  ನಿರ್ವಹಣೆ ಇಲ್ಲದೆ ಮುಚ್ಚುವ  ಸ್ಥಿತಿಯಲ್ಲಿ ಶ್ರೀಮಂಗಲ ಬಿ.ಎಸ್ .ಎನ್. ಎಲ್. ಕೇಂದ್ರ



ದಕ್ಷಿಣ  ಕೊಡಗಿನ  ಶ್ರೀಮಂಗಲದಲ್ಲಿ  ಇದೀಗ  ಇರುವ  ಬಿ.ಎಸ್ .ಎನ್. ಎಲ್. ಕೇಂದ್ರ ಸರಿಯಾದ ನಿರ್ವಹಣೆ ಇಲ್ಲದೆ ಮುಚ್ಚುವ  ಸ್ಥಿತಿಯಲ್ಲಿದೆ. ಸುಮಾರು  300 ಸ್ಥಿರ  ದೊರವಾಣಿ  ಇದ್ದ ಈ ಕೇಂದ್ರ ಇದೀಗ  20 -25 ಮಾತ್ರ   ಸ್ಥಿರ  ದೂರವಾಣಿ  ಇದ್ದು, ಅದೂ  ಕೂಡಾ  ಬಹುತೇಕ  ಸತ್ತು ಹೋಗಿದೆ.

ಕೊಡಗಿನಲ್ಲಿ  ಪ್ರಥಮ  ಬಾರಿಗೆ  ಮೊಬೈಲ್ ಸೇವೆ ಪ್ರಾರಂಭಿಸಿದ ಕೇಂದ್ರದಲ್ಲಿ ಇದೂ  ಒಂದು. ಇಲ್ಲಿ ಸುಸಜ್ಜಿತ  ಕಟ್ಟಡ  ಜೆ.ಇ  ವಸತಿ  ಗ್ರಹ  ಇದ್ದು, ಪ್ರತೀ  ದಿನ  ಕೇಂದ್ರ ಬೀಗ  ಹಾಕಿರುತ್ತದೆ. ಸಾರ್ವಜನಿಕರಿಗೆ  ಯಾವ  ಸೇವೆ  ದೊರಕುತ್ತಿಲ್ಲ.  ಸುತ್ತಲೂ  ಕಾಡು  ಬೆಳೆದು  ಜನರೇಟರ್  ಹೊರಗೆ  ಬಿದ್ದಿದ್ದು ಅನಾಥವಾಗಿದೆ.  ವಿದ್ಯುತ್ ಶಕ್ತಿ   ಹೋದರೆ  ಮೊಬೈಲ್ ಸೇವೆ ಇಲ್ಲ. ಇದೀಗ  ಫೈಬರ್ ಕೇಬಲ್ ಅಳವಡಿಸುತ್ತಿದ್ದು, ಗ್ರಾಹಕರಿಗೆ  ಮಾಹಿತಿಯ  ಸೇವೆ ಇಲ್ಲ. 


ವಸತಿ  ಗ್ರಹದಲ್ಲಿರುವವರು  ಇಲ್ಲಿನ ಸಿಬ್ಬಂದಿಗಳು ಅಲ್ಲ.  ಶ್ರೀಮಂಗಲದಲ್ಲಿ ಅನೇಕ  ಸರಕಾರಿ  ಕಚೇರಿ  ಬ್ಯಾಂಕ್ ಇದ್ದು, ಇಲ್ಲಿ ಉತ್ತಮ  ಸೇವೆ ಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರು  ಕ್ರಮ  ವಹಿಸಿ  ಸತ್ತು  ಹೋಗುತ್ತಿರುವ ಈ ಬಿ.ಎಸ್ .ಎನ್. ಎಲ್. ಕೇಂದ್ರವನ್ನು ಸರಿಪಡಿಸಿ ಎಂದು ಶ್ರೀಮಂಗಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

ಸುದ್ದಿ- ಮಾಹಿತಿ:  ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,