Header Ads Widget

ಸರ್ಚ್ ಕೂರ್ಗ್ ಮೀಡಿಯ

ವೃತ್ತಿ ಧರ್ಮದ ಘನತೆ ಹೆಚ್ಚಿಸಿದ ಡಾ.ಸುಧಾಕರ್ ಶೆಟ್ಟಿ

ವೃತ್ತಿ ಧರ್ಮದ ಘನತೆ ಹೆಚ್ಚಿಸಿದ ಡಾ.ಸುಧಾಕರ್ ಶೆಟ್ಟಿ- ವಿಜು ಸುಬ್ರಮಣಿ

ವೈದ್ಯರ ದಿನಾಚರಣೆಯ ಅಂಗವಾಗಿ ಡಾ.ಸುಧಾಕರ್ ಶೆಟ್ಟಿಯವರಿಗೆ ಸನ್ಮಾನ
 
( ಪಾಲಿಬೆಟ್ಟದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಡಾಕ್ಟರ್ ಸುಧಾಕರ್ ಶೆಟ್ಟಿ ಅವರನ್ನು ಸನ್ಮಾನಿಸಿದ ಸಂದರ್ಭ )

ರೋಗಿಗಳ ಪಾಲಿಗೆ ಆಪತ್ಬಾಂಧವರಾಗಬೇಕಿರುವ ಕೆಲವು ವೈದ್ಯರು ತಮ್ಮ ವೈದ್ಯ ಧರ್ಮವನ್ನು ಮರೆತು ಮೆರೆಯುವ ಈ ಕಾಲದಲ್ಲಿ ವೈದ್ಯರುಗಳ ವೃತ್ತಿ ಧರ್ಮದ ಘನತೆಯನ್ನು ಹೆಚ್ಚಿಸುತ್ತಿರುವವರ ಸಾಲಿನಲ್ಲಿ ಪಾಲಿಬೆಟ್ಟದ ಜನಪ್ರಿಯ ವೈದ್ಯರಾದ ಡಾ. ಸುಧಾಕರ್ ಶೆಟ್ಟಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಪಾಲಿಬೆಟ್ಟ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷರೂ ಆಗಿರುವ ಜಿ. ಪಂ. ಮಾಜಿ ಸದಸ್ಯ ಮೂಕೋಂಡ  ವಿಜು ಸುಬ್ರಮಣಿ ಅವರು ಹೇಳಿದ್ದಾರೆ.

ಪಾಲಿಬೆಟ್ಟದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಪಾಲಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯರಾದ ಡಾ. ಸುಧಾಕರ್ ಶೆಟ್ಟಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಿ ಮಾತನಾಡಿದ ಅವರು, ಜನರ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅತಿ ಮಹತ್ವದ್ದು. ವೈದ್ಯ ವೃತ್ತಿಗೆ ಸಮನಾದ ಮಾನವೀಯ ಸೇವೆ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ಡಾ. ಸುಧಾಕರ ಶೆಟ್ಟಿ ಅವರು ಕಳೆದ ಹಲವು ದಶಕಗಳಿಂದ ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆಗೆ ನೀಡುತ್ತಿರುವ ವೈದ್ಯಕೀಯ ಸೇವೆ ಅನನ್ಯ ಎಂದು ಶ್ಲಾಘಿಸಿದರು.

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್  ಸಂಕಷ್ಟದ ಕಾಲಘಟ್ಟದಲ್ಲಿ ವೈದ್ಯರ ಸೇವೆ ಹೆಚ್ಚು ಮಹತ್ವ  ಪಡೆದುಕೊಂಡಿದೆ. ಕೋವಿಡ್ ಅನ್ನು ಪ್ರತಿರೋಧಿಸಲು ವೈದ್ಯರ ಸಮೂಹ ತೋರಿದ ನಿಸ್ವಾರ್ಥ ಸೇವೆ ಈ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ. ವೈದ್ಯಕೀಯ ಸೇವೆಯ ಮಹತ್ವ ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಈ ಕಾಲದಲ್ಲಿ ಜನರು ವೈದ್ಯರನ್ನು ನೋಡುವ ಮನೋಭಾವವೇ ಬದಲಾಗಿದ್ದು, ಜನರಿಂದ ಅವರು ಆದರಿಸಲ್ಪಡುತ್ತಿದ್ದಾರೆ. ಇದಕ್ಕೆ ಕಠಿಣ ಪರಿಸ್ಥಿತಿಯಲ್ಲೂ ಅವರು ನಿರ್ವಹಿಸುತ್ತಿರುವ  ಮಹತ್ತರವಾದ ಜವಾಬ್ದಾರಿಗಳೇ ಕಾರಣ ಎಂದು ವಿಜು ಸುಬ್ರಮಣಿ ಅವರು ಒತ್ತಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುಧಾಕರ್ ಶೆಟ್ಟಿ ಅವರು, ಮಾನವೀಯತೆ ಮತ್ತು ಮನುಷ್ಯತ್ವ ಪ್ರತಿಯೊಬ್ಬರ ವೈದ್ಯರ ವೃತ್ತಿ ಧರ್ಮದ ಮೂಲ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಸೇವೆಯನ್ನು ಗುರುತಿಸಿ ಮಾಡಲಾಗುವ ಪುಟ್ಟ ಸನ್ಮಾನ ಗಳು ಕೂಡ ವೃತ್ತಿ ಧರ್ಮದ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪವನ್, ಕಾರ್ಯದರ್ಶಿ ಹರೀಶ್, ಹಿರಿಯರಾದ ರಾಜು, ಗಣೇಶ್, ಅಬೂಬಕರ್, ವಿನೀತ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು.

✍️....ರಫೀಕ್ ತೂಚಮಕೇರಿ

(  ರಫೀಕ್ ತೂಚಮಕೇರಿ )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,