Header Ads Widget

Responsive Advertisement

ಸಹಕಾರ ಕ್ಷೇತ್ರದ ನಿರ್ವಹಣೆಗೆ ಕೇಂದ್ರ ಸಂಪುಟದಲ್ಲಿ ಪ್ರತ್ಯೇಕ ಸಚಿವಾಲಯ (Cooperation Ministry)

ಸಹಕಾರ ಕ್ಷೇತ್ರದ ನಿರ್ವಹಣೆಗೆ ಕೇಂದ್ರ ಸಂಪುಟದಲ್ಲಿ ಪ್ರತ್ಯೇಕ ಸಚಿವಾಲಯ (Cooperation Ministry)


ಸಹಕಾರದಿಂದ ಸಮೃದ್ಧಿ’ ದೃಷ್ಟಿಕೋನದ ಸಾಕಾರಕ್ಕಾಗಿ ಐತಿಹಾಸಿಕ ಹೆಜ್ಜೆಯಿಟ್ಟಿರುವ ಮೋದಿ ಸರ್ಕಾರ ‘ಸಹಕಾರ ಸಚಿವಾಲಯವನ್ನೇ ರೂಪಿಸಿದೆ.

 ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತಾತ್ಮಕಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ.

ಇದು ಸಹಕಾರಿಗಳಿಗೆ ನೈಜ ಜನ ಆಧಾರಿತ ಚಳವಳಿಯೋಪಾದಿಯಲ್ಲಿ ಬೇರುಮಟ್ಟದವರೆಗೆ ತಲುಪಲು ನೆರವಾಗುತ್ತದೆ.

ನಮ್ಮ ದೇಶದಲ್ಲಿಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯು ಬಹಳ ಪ್ರಸ್ತುತವಾಗಿದೆಅಲ್ಲಿ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯ ಸ್ಫೂರ್ತಿಯಿಂದ ಕೆಲಸ ಮಾಡುತ್ತಾರೆ.

ಸಹಕಾರಿ ಸಂಸ್ಥೆಗಳಿಗೆ ‘ವ್ಯವಹಾರವನ್ನು ಸುಲಭಗೊಳಿಸುವ’ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹುರಾಜ್ಯ ಸಹಕಾರ ಸಂಘಗಳ (ಎಂ.ಎಸ್‌.ಸಿ.ಎಸ್ಅಭಿವೃದ್ಧಿಯನ್ನು ಶಕ್ತಗೊಳಿಸಲು ಸಚಿವಾಲಯವು ಕಾರ್ಯ ನಿರ್ವಹಿಸುತ್ತದೆ.

ಸಮುದಾಯ ಆಧಾರಿತ ಅಭಿವೃದ್ಧಿ ಸಹಯೋಗಕ್ಕೆ ಕೇಂದ್ರ ಸರ್ಕಾರ ತನ್ನ ಆಳವಾದ ಬದ್ಧತೆಯನ್ನು ಸೂಚಿಸಿದೆಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು ಹಣಕಾಸು ಸಚಿವರು ಮಾಡಿದ ಬಜೆಟ್ ಪ್ರಕಟಣೆಯ ಭರವಸೆಯನ್ನು ಸಹ ಈಡೇರಿಸುತ್ತದೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,