Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊರೋನಾ ಮಹಾಮಾರಿಯ ನಡುವೆ ಕಾವೇರಿ ನದಿ ತಟದಲ್ಲಿ ಚಿತ್ರೀಕರಣಕ್ಕಾಗಿ ಬೃಹತ್ ಗಾತ್ರದ ಸೆಟ್‌ಗಳ ನಿರ್ಮಾಣ; ಸೋಂಕು ಉಲ್ಬಣವಾದರೆ ಯಾರು ಹೊಣೆ?

ಕೊರೋನಾ ಮಹಾಮಾರಿಯ ನಡುವೆ ಕಾವೇರಿ ನದಿ ತಟದಲ್ಲಿ ಚಿತ್ರೀಕರಣಕ್ಕಾಗಿ ಬೃಹತ್ ಗಾತ್ರದ ಸೆಟ್‌ಗಳ ನಿರ್ಮಾಣ; ಸೋಂಕು ಉಲ್ಬಣವಾದರೆ ಯಾರು ಹೊಣೆ?


ಕೊಡಗಿನಲ್ಲಿ ಕೊರೋನಾ ಮಹಾಮಾರಿಯು‌ ಅದೆಷ್ಟೋ ಅಮಾಯಕರನ್ನು ಬಲಿ ತೆಗೆದುಕೊಂಡಿದೆ (ಮಡಿಕೇರಿ ತಾಲ್ಲೂಕಿನ ಬಲಂಬೇರಿ(ಬಲಮುರಿ)ಯಲ್ಲಿ ಮೂರ್ನಾಲ್ಕು ಅಮಾಯಕರು ಬಲಿಯಾಗಿರುತ್ತಾರೆ).  ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಕೊಡಗಿಗೆ ಬರುವ ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿಲ್ಲ ಅನ್ನುವ ದೂರುಗಳು ಕೇಳಿಬರುತ್ತಿದೆ.

ಇದರ ಮಧ್ಯೆ ಸ್ವಚ್ಚಂದವಾಗಿರುವ ಕೊಡಗಿನ ಎರಡನೇ ಪವಿತ್ರ ಕ್ಷೇತ್ರವಾದ ಬಲಂಬೇರಿಯ ಈಶ್ವರ ದೇವಸ್ಥಾನದ ಮುಂದಿರುವ  ಸಾರ್ವಜನಿಕ ಸ್ಥಳವಾದ ನದಿ ತಟದಲ್ಲಿ ದೃಶ್ಯಂ ಚಿತ್ರದ ಚಿತ್ರೀಕರಣಕ್ಕಾಗಿ ಅನುಮತಿಯನ್ನು ನೀಡಲಾಗಿದೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಬೃಹತ್ ಗಾತ್ರದ ಸೆಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕಾಗಿ ಕಳೆದ ವಾರದಿಂದ ಬರೋಬ್ಬರಿ 50 ರಿಂದ 60 ಜನ‌ ಕೇರಳ ಮತ್ತು ತಮಿಳುನಾಡಿನಿಂದ ಬಂದಿರುವ ಕಾರ್ಮಿಕರು ಕೋವಿಡ್ 19ರ ಯಾವುದೇ ನಿಯಮಗಳನ್ನು ಪಾಲಿಸದೆ ಕೆಲಸ ಮಾಡುತ್ತಿದ್ದಾರೆ.

ಪ್ರಶ್ನೆ: ಪಂಚಾಯಿತಿ ಮಟ್ಟದಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟಿನ ಜವಾಬ್ದಾರಿಕೆ ಹೊತ್ತಿರುವ ಪಾರಾಣೆ  ಪಂಚಾಯಿತಿಯ ಪಿ.ಡಿ.ಓ. ಕೊರೋನಾದ ತೀವ್ರತೆಯನ್ನು ಪರಿಗಣಿಸದೆ  ಹೇಗೆ ಅನುಮತಿ ನೀಡಿದರು? ದೇವಸ್ಥಾನದ ಆಡಳಿತ ಮಂಡಳಿ ಹಾಗು ಊರಿನ ಗ್ರಾಮ ಪಂಚಾಯತಿ ಸದಸ್ಯರಿಗೆ ಕೊರೋನಾ ಹರಡುವಿಕೆಯ ತೀವ್ರತೆಯ ಬಗ್ಗೆ ಜ್ಞಾನವಿಲ್ಲವೇ? ಅಥವಾ ಪಿ.ಡಿ.ಓ ಅವರಿಗೂ ಹಾಗೂ ಜಿಲ್ಲಾಡಳಿತಕ್ಕೂ ಕೋವಿಡ್'ನ ತೀವ್ರತೆಯ ಬಗ್ಗೆ ಜ್ಞಾನವಿಲ್ಲವೇ? ಈ ಕೋವಿಡ್ ಸಮಯದಲ್ಲಿ ಇದರ ಅವಶ್ಯಕತೆ ಇದೆಯೇ? ಇಲ್ಲಿ ಕೆಲಸ ಮಾಡುತ್ತಿರುವವರಿಂದ ಕೊರೋನಾ ಹರಡುವುದಿಲ್ಲವೇ?

ಈ ಸ್ಥಳವು ಬಲಮುರಿ ಗ್ರಾಮದ ಗಡಿ ಪ್ರದೇಶವಾಗಿದ್ದು, ನದಿಯ ಮತ್ತೊಂದು ಕಡೆ ಹೊದ್ದೂರು‌ ಗ್ರಾಮ ಪಂಚಾಯತಿಗೆ ಸೇರಿದ್ದು, ನೂರಾರು ಅಲ್ಪ ಸಂಖ್ಯಾತರು, ದಲಿತರು ವಾಸವಿದ್ದು, ವಾಟೆಕಾಡು ಕಾಲೋನಿ ಮತ್ತು ಪಾಲೆಮಾಡ್ ಕಾಲೋನಿಯಲ್ಲಿ ನೂರಾರು ಬಡ  ಕುಟುಂಬಗಳು  ವಾಸಿಸುತ್ತಿದ್ದಾರೆ. ಮತ್ತು  ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೋರಬಾಣೆ ಕಾಲೋನಿ, ಕೂಡಪರಂಬು ಕಾಲೋನಿ ಇದ್ದು, ಚಿತ್ರೀಕರಣ ಸಮಯದಲ್ಲಿ ಚಿತ್ರೀಕರಣ ನೋಡಲು ನೂರಾರು ಜನರು ಬಂದು ಸೇರುತ್ತಾರೆ, ಹಾಗಾದರೆ ಬಡವರ ಜೀವಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ? ಅವರಿಗೆ ಕೊರೋನಾ ಹರಡುವುದಿಲ್ಲವೇ?

ಚಿತ್ರೀಕರಣ ಮಾಡಲಿ ಅದರ ಬಗ್ಗೆ ಆಕ್ಷೇಪವಿಲ್ಲ. ಆದರೆ ಕೋವಿಡ್ ಸಮಯದಲ್ಲಿ ಮಾಡುತ್ತಿರುವುದರಿಂದ ನಮ್ಮ ಆಕ್ಷೇಪವಿದೆ. ಊರಿನ ಹಿತದೃಷ್ಟಿಯಿಂದ ದಯವಿಟ್ಟು ಸಂಬಂಧಪಟ್ಟ ಜಿಲ್ಲಾಡಳಿತ ಸಧ್ಯಕ್ಕೆ ಇದನ್ನು ತಡೆಹಿಡಿಯುವುದು ಒಳಿತು. ಇಲ್ಲದಿದ್ದಲ್ಲಿ ಪಂಚಾಯತಿಯ ಪಿ.ಡಿ.ಓ ಮತ್ತು ಜಿಲ್ಲಾಡಳಿತ ಮುಂದಾಗಬಹುದಾದ ಅನಾಹುತಗಳಿಗೆ ನೇರ ಹೊಣೆಯಾಗಿರುತ್ತಾರೆ.

#Save_Balamberi

✍️....ಜೋಯಪ್ಪ ಪಾಲಂದಿರ


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,