Header Ads Widget

ಸರ್ಚ್ ಕೂರ್ಗ್ ಮೀಡಿಯ

75ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ

75ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ


ಮಡಿಕೇರಿ: ಆಗಸ್ಟ್15:‌  ಮಡಿಕೇರಿ ನಗರದ ಸ್ಥಳೀಯ ರಾಘವೇಂದ್ರ ದೇವಾಲಯದ ಹತ್ತಿರವಿರುವ ʼಕಿತ್ತೂರು ಚೆನ್ನಮ್ಮ ಮಹಿಳಾʼ ಸಮಾಜ, ʼಜನನಿಪ್ರತಿಷ್ಥಾನʼ,  ʼನಿಧಿʼ ಸ್ವಸಹಾಯ ಸಂಘ ಹಾಗೂ ದೀಪ ಸ್ವಸಹಾಯ ಸಂಘದ ವತಿಯಿಂದ ಇಂದು ಬೆಳಿಗ್ಗೆ 75ನೇ ರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಡಿಕೇರಿ ನಗರಸಭೆಯ 6ನೇ ವಾರ್ಡಿನ ನಗರಸಭಾ ಸದಸ್ಯರಾದ ಶ್ರೀ ಕೆ.ಎಸ್‌ ರಮೇಶ್‌ ರವರು ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ನೆರೆದಿದ್ದ ಸರ್ವರೂ ರಾಷ್ಟ್ರ ಗೀತೆಯನ್ನು ಹಾಡಿದರು.

ಧ್ವಜಾರೋಹಣ ನಂತರ ಮಾತಾಡಿದ ಶ್ರೀ ಕೆ.ಎಸ್‌ ರಮೇಶ್‌ ರವರು ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ ಇದರ ಹಿಂದಿದೆ. ಹೀಗೆ ದಾಸ್ಯದ ಸಂಕೋಲೆಯನ್ನು ಕಳಚಿ ಹಾಕಲು ಮನೆ-ಮಠ, ಕುಟುಂಬದ ಬಗ್ಗೆ ಯೋಚಿಸದೆ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದವರು ಅಸಂಖ್ಯ ಜನ. ಅವರ ಹೋರಾಟದ ಹಾದಿಯ ನೆನಪುಗಳು ಇಂದಿನ ಸಮಾಜಕ್ಕೆ ಪ್ರೇರಣೆ ಆಗಬೇಕು ಎಂದು  ಸ್ವಾತಂತ್ರ್ಯಕ್ಕಾಗಿ  ಹೋರಾಡಿ ಬಲಿದಾನಗೈದ ಸಾವಿರಾರು ಹೊರಾಟಗಾರರನ್ನು ಸ್ಮರಿಸಿದರು. ಮಂದುವರೆದು ಮಾತನಾಡಿದ ಕೆ.ಎಸ್‌ ರಮೇಶ್‌ ರವರು ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಎಲ್ಲರೂ  ಕೈ ಜೋಡಿಸಬೇಕೆಂದು ಈ ಸಂದರ್ಭದಲ್ಲಿ ಕೋರಿಕೊಂಡರು. 

ಕುಮಾರಿ ಗ್ರೀಷ್ಮ‌ ಜ್ಯೋತಿ ಸ್ವಾಗತಿಸಿ ನಿರೂಪಿಸಿದರು. 75ನೇ ಸ್ವಾತಂತ್ರ್ಯಯ ದಿನಾಚರಣೆಯ ಮಹತ್ವದ ಬಗ್ಗೆ ಸೌಮ್ಯಜಗ್ಗೆಶ್‌, ಮತ್ತು ಕೌಶಿಕ ವಾಸು ಕಿರು ಭಾಷಣ ಮಾಡಿದರು. ಕಾರ‍್ಯಕ್ರಮದಲ್ಲಿ ಸ್ಥಳೀಯ ನಾಗರಿಕರು, ಸಂಘಗಳ ಪ್ರತಿನಿಧಿಗಳು, ಮಡಿಕೇರಿಯ ಖ್ಯಾತ ಶಿಲ್ಪ ಕಲಾವಿದರಾದ ರವಿ ಮತ್ತು ಸಂಗಡಿಗರು ಹಾಜರಿದ್ದು ಸಹಕರಿಸಿದರು. ರಾಣಿಅರುಣ್‌ ವಂದನಾರ್ಪಣೆ ಸಲ್ಲಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,